ಉಡುಪಿ ಎಂಜಿಎಂ ಕಾಲೇಜ್‌: ಒಡಿಸ್ಸಿ ನೃತ್ಯ ವೈಭವ

KannadaprabhaNewsNetwork |  
Published : Dec 13, 2025, 03:00 AM IST
ಎಂಜಿ್ಎಂ ಕಾಲೇಜಿನಲ್ಲಿ ಓಡಿಸ್ಸಿ ನೃತ್ಯ ಪ್ರದರ್ಶನನೀಡಿದ ಕಲಾವಿದ ರಾಹುಲ್ ಆಚಾರ್ಯ ಮತ್ತು ತಂಡವನ್ನು ಕಾಲೇಜಿನ ವತಿಯಿಂದ ಗೌರವಿಸಲವಾಯಿತು | Kannada Prabha

ಸಾರಾಂಶ

ಎಂ.ಜಿ.ಎಂ. ಪ.ಪೂ ಕಾಲೇಜ್‌ ವತಿಯಿಂದ ಗುರುವಾರ ಪ್ರಸಿದ್ಧ ನೃತ್ಯಗಾರ, ಅಂತಾರಾಷ್ಟ್ರೀಯ ಕಲಾವಿದ ಪಂಡಿತ್‌ ರಾಹುಲ್‌ ಆಚಾರ್ಯ ಅವರ ಒಡಿಸ್ಸಿ ನೃತ್ಯ ಪ್ರದರ್ಶನ ನಡೆಯಿತು.

ಉಡುಪಿ: ಇಲ್ಲಿನ ಎಂ.ಜಿ.ಎಂ. ಪ.ಪೂ ಕಾಲೇಜ್‌ ವತಿಯಿಂದ ಗುರುವಾರ ಪ್ರಸಿದ್ಧ ನೃತ್ಯಗಾರ, ಅಂತಾರಾಷ್ಟ್ರೀಯ ಕಲಾವಿದ ಪಂಡಿತ್‌ ರಾಹುಲ್‌ ಆಚಾರ್ಯ ಅವರ ಒಡಿಸ್ಸಿ ನೃತ್ಯ ಪ್ರದರ್ಶನ ನಡೆಯಿತು. ‘ಸೊಸೈಟಿ ಫಾರ್‌ ದ ಪ್ರೊಮೋಷನ್ಸ್‌ ಆಫ್‌ ಇಂಡಿಯನ್‌ ಕ್ಲಾಸಿಕಲ್‌ ಮ್ಯೂಸಿಕ್‌ ಆಂಡ್‌ ಕಲ್ಚರ್‌ ಅಮೊಂಗ್ಸ್ಟ್‌ ಯೂಥ್‌’ (ಸ್ವಿಕ್‌ಮೇಕೆ) ಆಶ್ರಯದಲ್ಲಿ ನಡೆದ ಈ ವಿಶೇಷ ಕಾರ್ಯಕ್ರಮ ನೆರೆದಿದ್ದ ಕಲಾಭಿಮಾನಿಗಳ ಮನ ಸೆಳೆಯಿತು.

‘ಡಿವೈನ್‌ ಡ್ಯಾನ್ಸರ್’ ಎಂದೇ ಖ್ಯಾತರಾದ ರಾಹುಲ್‌ ಆಚಾರ್ಯ ಅವರ ಶಾಸ್ತ್ರೀಯವಾದ, ಶುದ್ಧವಾದ ನೈಜ ಕಲಾ ಪ್ರದರ್ಶನ ಹಾಗೂ ಅವರ ಪಾಂಡಿತ್ಯ ಮತ್ತು ಮೃದು ಮಾತು ನೆರೆದಿದ್ದ ಕಲಾರಸಿಕರಿಗೆ ರಸದೌತಣ ನೀಡಿತು. ಅವರೊಂದಿಗೆ ಸಹಕಲಾವಿದರಾಗಿ ಸಂಗೀತದಲ್ಲಿ ಸುಕಾಂತ ಕುಮಾರ್‌ ಕುಂಡ, ಮರ್ಧಲಾದಲ್ಲಿ ದಿಬಾಕರ್‌ ಪಾರಿದಾ, ವಯಲಿನ್‌ನಲ್ಲಿ ಪ್ರದೀಪ್‌ ಕುಮಾರ್‌ ಮಹಾರಣ ಮತ್ತು ಮಂಜೀರದಲ್ಲಿ ಸುಮುಖ ತಮಂಕರ್‌ ಸಹಕಾರ ನೀಡಿದರು.

ಪದವಿ ಕಾಲೇಜಿನ ಪ್ರಾಂಶುಪಾಲೆ ಪ್ರೊ. ವನಿತಾ ಮಯ್ಯ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಮಾಲತಿ ದೇವಿ, ಉಪ ಪ್ರಾಂಶುಪಾಲ ಡಾ. ಎಂ ವಿಶ್ವನಾಥ ಪೈ ಮತ್ತು ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ನೆರೆದಿದ್ದರು. ಅಂಕಿತಾ ರಾವ್‌ ಕಾರ್ಯಕ್ರಮ ನಿರೂಪಿಸಿ, ಅದಿತಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ ತೆಬಿಯಾ ರೋಸಿಯಾ ಹೂ ವೈಭವ!
ನಿವೇಶನ ರಹಿತರಿಗೆ ಸರ್ಕಾರದಿಂದ ಸೈಟ್‌