ರಾಜ್ಯದಲ್ಲಿ ಹಿಂದು ಧರ್ಮ ತುಳಿವ ವ್ಯವಸ್ಥಿತ ಸಂಚು: ಪೇಜಾವರ ಶ್ರೀ

Published : May 05, 2025, 10:04 AM IST
Pejawar Shri

ಸಾರಾಂಶ

ರಾಜ್ಯದಲ್ಲಿ ಹಿಂದು ಧರ್ಮವನ್ನು ತುಳಿಯುವ ವ್ಯವಸ್ಥಿತ ಸಂಚು ನಡೆಯುತ್ತಿದೆ ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ಹೇಳಿದರು.

 ವಿಜಯಪುರ : ರಾಜ್ಯದಲ್ಲಿ ಹಿಂದು ಧರ್ಮವನ್ನು ತುಳಿಯುವ ವ್ಯವಸ್ಥಿತ ಸಂಚು ನಡೆಯುತ್ತಿದೆ ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ಹೇಳಿದರು.

ನಗರದ ಕೃಷ್ಣ ವಾದಿರಾಜ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ರಾಜ್ಯದಲ್ಲಿ ಒಂದು ಕೋಮಿನ ತುಷ್ಟಿಕರಣ ನಡೆಯುತ್ತಿದೆ. ಹಿಂದು ಧರ್ಮದ ಮೇಲೆ ಆಕ್ರಮಣ ನಡೆಯುತ್ತಿದೆ. ಹಿಂದು ಕಾರ್ಯಕರ್ತರ ಹತ್ಯೆ ನಡೆಯುತ್ತಿದೆ. ಹಿಂದುಸ್ಥಾನದಲ್ಲಿ ಹಿಂದುಗಳಿಗೆ ರಕ್ಷಣೆ ಇಲ್ಲದಂತಾಗಿದೆ. ರಾಜ್ಯದಲ್ಲಿ ರಾಜಕೀಯ ಅರಾಜಕತೆ ಉಂಟಾಗಿದೆ. ಆಳುವ ಸರ್ಕಾರಗಳು ಎಲ್ಲ ಧರ್ಮಗಳ ರಕ್ಷಣೆ ಮಾಡಬೇಕು. ಧರ್ಮ ಉಳಿವಿಗಾಗಿ ಹಿಂದು ಧರ್ಮಿಯರು ಒಗ್ಗಟ್ಟಾಗುವುದು ಅನಿವಾರ್ಯ ಎಂದು ಹೇಳಿದರು.

ಕಾಶ್ಮೀರ ಘಟನೆ ಪ್ರಸ್ತಾಪಿಸಿ ಪ್ರಧಾನಮಂತ್ರಿ ಅವರು ಪ್ರತೀಕಾರ ತೀರಿಸಿಕೊಳ್ಳಲು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸಲಹೆ ನೀಡಿದರು. ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗಗಳ ಮೇಲೆ ಜನರು ವಿಶ್ವಾಸ ಕಳೆದುಕೊಳ್ಳುವಂತಾಗಿದೆ. ಬಡ, ದೀನ-ದಲಿತರರಿಗೆ ನ್ಯಾಯ ಕೊಡಿಸುವ ಮೂಲಕ ಪತ್ರಿಕಾರಂಗ ಸೇರಿ ನಾಲ್ಕು ಅಂಗಗಳು ಜನರ ವಿಶ್ವಾಸ ಉಳಿಸಿಕೊಳ್ಳಬೇಕು ಎಂದು ತಿಳಿಸಿದರು.

PREV
Stay updated with the latest news from Udupi district (ಉಡುಪಿ ಸುದ್ದಿ) — including local governance, coastal tourism & beaches, heritage & temple developments, education and institutions (like Manipal), agriculture and coastal economy, environment & fisheries, culture, and district-level community events on Kannada Prabha News.

Recommended Stories

ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ
ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ನಮ್ಮ ನಡೆ ವಾರ್ಡಿನ ಕಡೆ: ರಮೇಶ್ ಕಾಂಚನ್