ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ವತಿಯಿಂದ ಕಾಗದ ರಹಿತ (ಪೇಪರ್‌ಲೆಸ್) ನೋಂದಣಿ ವ್ಯವಸ್ಥೆಯ ಕುರಿತು ಮಾಹಿತಿ ಹಾಗೂ ತರಬೇತಿ ಕಾರ್ಯಾಗಾರ ಕಾರ್ಕಳದ ಬಂಡಿಮಠ ಸರ್ಕಾರಿ ನೌಕರರ ಸಂಘದ ಸಭಾಭವನದಲ್ಲಿ ಇತ್ತೀಚೆಗೆ ನಡೆಯಿತು. ಡಿಜಿಟಲ್ ವ್ಯವಸ್ಥೆ ಮೂಲಕ ಸರಳ, ಪಾರದರ್ಶಕ ಹಾಗೂ ವೇಗದ ನೋಂದಣಿ ಪ್ರಕ್ರಿಯೆ ಕುರಿತು ಕಾರ್ಯಾಗಾರ
ಕಾರ್ಕಳ: ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ವತಿಯಿಂದ ಕಾಗದ ರಹಿತ (ಪೇಪರ್‌ಲೆಸ್) ನೋಂದಣಿ ವ್ಯವಸ್ಥೆಯ ಕುರಿತು ಮಾಹಿತಿ ಹಾಗೂ ತರಬೇತಿ ಕಾರ್ಯಾಗಾರ ಕಾರ್ಕಳದ ಬಂಡಿಮಠ ಸರ್ಕಾರಿ ನೌಕರರ ಸಂಘದ ಸಭಾಭವನದಲ್ಲಿ ಇತ್ತೀಚೆಗೆ ನಡೆಯಿತು. ಡಿಜಿಟಲ್ ವ್ಯವಸ್ಥೆ ಮೂಲಕ ಸರಳ, ಪಾರದರ್ಶಕ ಹಾಗೂ ವೇಗದ ನೋಂದಣಿ ಪ್ರಕ್ರಿಯೆ ಕುರಿತು ಕಾರ್ಯಾಗಾರದಲ್ಲಿ ವಿವರಿಸಲಾಯಿತು.ಕಾರ್ಕಳ ಉಪ ನೋಂದಣಾಧಿಕಾರಿಗಳ ಕಚೇರಿ ವತಿಯಿಂದ ಸಾರ್ವಜನಿಕರು, ವಕೀಲರು, ದಸ್ತಾವೇಜು ಬರಹಗಾರರು ಹಾಗೂ ಗ್ರಾಮ ಒನ್ ಕೇಂದ್ರದ ಸಿಬ್ಬಂದಿಗಾಗಿ ಈ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ತಾಂತ್ರಿಕ ತಂಡದವರು ಪೇಪರ್‌ಲೆಸ್ ನೋಂದಣಿಯ ವಿಧಾನ, ಆನ್‌ಲೈನ್ ದಾಖಲೆ ಅಪ್‌ಲೋಡ್, ಇ-ಸೈನ್, ಸಮಯ ಉಳಿತಾಯ ಹಾಗೂ ಭದ್ರತಾ ಅಂಶಗಳ ಕುರಿತು ಮಾಹಿತಿ ನೀಡಿದರು.ಕಾರ್ಯಾಗಾರದಲ್ಲಿ ಭಾಗವಹಿಸಿದವರಿಗೆ ಪ್ರಾಯೋಗಿಕವಾಗಿ ಪೇಪರ್‌ಲೆಸ್ ನೋಂದಣಿ ಪ್ರಕ್ರಿಯೆಯನ್ನು ತೋರಿಸಲಾಗಿ, ಹೊಸ ವ್ಯವಸ್ಥೆಯಿಂದ ಸಾರ್ವಜನಿಕರಿಗೆ ಆಗುವ ಅನುಕೂಲತೆಗಳ ಬಗ್ಗೆ ವಿವರಿಸಲಾಯಿತು. ದಾಖಲೆಗಳ ಸುರಕ್ಷತೆ, ಪಾರದರ್ಶಕತೆ ಮತ್ತು ಕಚೇರಿ ಕಾರ್ಯವೈಖರಿಯಲ್ಲಿ ತ್ವರಿತತೆ ಹೆಚ್ಚಿಸುವುದರಲ್ಲಿ ಈ ವ್ಯವಸ್ಥೆ ಸಹಕಾರಿಯಾಗಲಿದೆ ಎಂದು ತಿಳಿಸಲಾಯಿತು.ಕಾರ್ಯಕ್ರಮದ ಆರಂಭದಲ್ಲಿ ಕಾರ್ಕಳ ಉಪ ನೋಂದಣಾಧಿಕಾರಿ ರಹಿಮಾನ್ ಸ್ವಾಗತಿಸಿ, ಕಾರ್ಯಾಗಾರದ ಉದ್ದೇಶವನ್ನು ವಿವರಿಸಿದರು.