ಅನಧಿಕೃತ ವ್ಯಕ್ತಿಯಿಂದ ದೇಣಿಗೆ ಸಂಗ್ರಹ: ಪೇಜಾವರ ಶ್ರೀ ಸ್ಪಷ್ಟನೆ

KannadaprabhaNewsNetwork |  
Published : Jul 06, 2026, 02:45 AM IST
ಪೇಜಾವರ ಶ್ರೀ | Kannada Prabha

ಸಾರಾಂಶ

ಪೇಜಾವರ ಮಠದ ಅಧೀನದಲ್ಲಿರುವ ನೀಲಾವರ ಗೋಶಾಲೆಯ ಹೆಸರಿನಲ್ಲಿ ಅಸ್ತಿತ್ವಕ್ಕೆ ಬಂದಿರುವ ನೀಲಾವರ ಗೋಗ್ರಾಸ ತಂಡಕ್ಕೂ ಮಠಕ್ಕೂ ಯಾವುದೇ ಸಂಬಂದ ಇಲ್ಲ ಎಂದು ಪೇಜಾವರ ಮಠದ ಪ್ರಕಟಣೆ ಸ್ಪಷ್ಟಪಡಿಸಿದೆ.

ಉಡುಪಿ: ಪೇಜಾವರ ಮಠದ ಅಧೀನದಲ್ಲಿರುವ ನೀಲಾವರ ಗೋಶಾಲೆಯ ಹೆಸರಿನಲ್ಲಿ ಅಸ್ತಿತ್ವಕ್ಕೆ ಬಂದಿರುವ ನೀಲಾವರ ಗೋಗ್ರಾಸ ತಂಡಕ್ಕೂ ಮಠಕ್ಕೂ ಯಾವುದೇ ಸಂಬಂದ ಇಲ್ಲ ಎಂದು ಪೇಜಾವರ ಮಠದ ಪ್ರಕಟಣೆ ಸ್ಪಷ್ಟಪಡಿಸಿದೆ.ಉಡುಪಿಯ ಭಾರತೀಶ ಜುವೆಲ್ಲರ್ಸ್ ನ ಶಶಿಧರ ಭಟ್ ಎಂಬವರು ನೀಲಾವರ ಗೋಗ್ರಾಸ ಸೇವಾ ತಂಡ ಎಂಬ ತಂಡವನ್ನು ರಚಿಸಿದ್ದು, ಸಾರ್ವಜನಿಕ ದೇಣಿಗೆಗಳನ್ನೂ ಪಡೆದಿರುವ ಮಾಹಿತಿ ತಿಳಿದುಬಂದಿದೆ. ಪೇಜಾವರ ಶ್ರೀಗಳು ಹಾಗೂ ನೀಲಾವರ ಗೋಶಾಲೆಯ ಗೋವರ್ಧನಗಿರಿ ಟ್ರಸ್ಟ್ ನ ಗಮನಕ್ಕೆ ಬಾರದೆ ಅನಧಿಕೃತವಾಗಿ, ಶ್ರೀಪಾದರ ಫೋಟೋ ಹಾಗೂ ಶ್ರೀಮಠದ ಹೆಸರನ್ನು ಮನವಿಗಳಲ್ಲಿ ಬಳಸಿ ದೇಣಿಗೆ ಸಂಗ್ರಹ ನಡೆಸಿದ್ದಾರೆ. ಅವರನ್ನು ತಕ್ಷಣದಿಂದ ನೀಲಾವರ ಗೋಶಾಲೆಯ ಟ್ರಸ್ಟ್ ನಿಂದ ವಜಾ ಮಾಡಲಾಗಿದೆ. ಅಲ್ಲದೆ ಗೋಶಾಲೆಗೂ ಅವರ ತಂಡಕ್ಕೂ ಯಾವುದೇ ಸಂಬಂಧವಿಲ್ಲ. ಈ ತಂಡದಿಂದ ಸಾರ್ವಜನಿಕರು ಮೋಸ ಹೋಗಬಾರದಾಗಿ ಪೇಜಾವರ ಮಠದ ಗೋವರ್ಧನಗಿರಿ ಟ್ರಸ್ಟ್ ಪ್ರಕಟಣೆ ತಿಳಿಸಿದೆ.

ಗೋಶಾಲೆಗೆ ದೇಣಿಗೆ ನೀಡುವವರು ಟ್ರಸ್ಟ್ ನ ಅಧಿಕೃತ ರಶೀದಿಯನ್ನು ಕಡ್ಡಾಯವಾಗಿ ಪಡೆಯಬೇಕೆಂದು ಕೋರಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೀದಿ ನಾಯಿ ದಾಳಿ ಜಿಂಕೆ ಸಾವು
ಮತದಾರರ ಪರಿಷ್ಕರಣಾ ಅರ್ಜಿ ವಿತರಣೆ