ಟೀಕೆ ಮಾಡದಿದ್ದರೆ ವಿಪಕ್ಷ ಬದುಕಲಿಕ್ಕೆ ಸಾಧ್ಯವೇ ಇಲ್ಲ: ಯು.ಟಿ. ಖಾದರ್

KannadaprabhaNewsNetwork |  
Published : Jul 06, 2026, 02:45 AM IST
 | Kannada Prabha

ಸಾರಾಂಶ

ಮಡಿಕೇರಿ ವಿಪಕ್ಷ ನಾಯಕರು ನಮ್ಮನ್ನು ಶ್ಲಾಘಿಸಬೇಕು ಎಂದು ನಾವು ನಿರೀಕ್ಷಿಸುವುದು ಸರಿಯಾ? ಸಾಧ್ಯವೇ ಇಲ್ಲ. ಆಡಳಿತ ಪಕ್ಷವನ್ನು ಟೀಕೆ ಮಾಡುವುದೇ ಇವತ್ತು ವಿಪಕ್ಷಗಳಿಗೆ ದೊಡ್ಡ ಮಟ್ಟದ ಆಮ್ಲಜನಕ. ಟೀಕೆ ಮಾಡದಿದ್ದರೆ ವಿಪಕ್ಷ ಬದುಕಲಿಕ್ಕೆ ಸಾಧ್ಯವೇ ಇಲ್ಲ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದರು.

ಮಡಿಕೇರಿ ವಿಪಕ್ಷ ನಾಯಕರು ನಮ್ಮನ್ನು ಶ್ಲಾಘಿಸಬೇಕು ಎಂದು ನಾವು ನಿರೀಕ್ಷಿಸುವುದು ಸರಿಯಾ? ಸಾಧ್ಯವೇ ಇಲ್ಲ. ಆಡಳಿತ ಪಕ್ಷವನ್ನು ಟೀಕೆ ಮಾಡುವುದೇ ಇವತ್ತು ವಿಪಕ್ಷಗಳಿಗೆ ದೊಡ್ಡ ಮಟ್ಟದ ಆಮ್ಲಜನಕ. ಟೀಕೆ ಮಾಡದಿದ್ದರೆ ವಿಪಕ್ಷ ಬದುಕಲಿಕ್ಕೆ ಸಾಧ್ಯವೇ ಇಲ್ಲ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದರು.

ಭಾನುವಾರ ಸಂಜೆ ಮಡಿಕೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು ಸಂಪುಟ ವಿಸ್ತರಣೆ ವಿಳಂಬ ಸಂಬಂಧ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. ಪ್ರತಿಪಕ್ಷಗಳು ಇತಿಹಾಸವನ್ನು ಕೂಡ ನೆನೆಪಿಸಿಕೊಳ್ಳಬೇಕು. ಯಡಿಯೂರಪ್ಪ ಸಿಎಂ ಆಗಿದ್ದಾಗ ತಿಂಗಳು ಕಾಲ ಒಬ್ಬರೇ ಇದ್ದರು. ಸಂಪುಟದಲ್ಲಿ ಬೇರೆ ಯಾರೂ ಇರಲಿಲ್ಲ. ಈಗ ಸಚಿವರು ಇದ್ದೇವೆ.‌ ಎರಡರಷ್ಟು ಕೆಲಸ ಮಾಡುತ್ತಿದ್ದೇವೆ. ಜನರ ಬಗ್ಗೆ ಸರ್ಕಾರ ಕಾಳಜಿ ವಹಿಸಿದೆ ಎಂದರು.

ಎಸ್ಐಆರ್ ಬಗ್ಗೆ ಮಾತನಾಡಿ ಮತದಾರರ ಪಟ್ಟಿಯ ಸಂಪೂರ್ಣವಾದ ಜವಾಬ್ದಾರಿ ಚುನಾವಣಾ ಆಯೋಗದ್ದಾಗಿದೆ. ಸರ್ಕಾರ ಈ ರಾಜ್ಯದ ಪ್ರತಿಯೊಬ್ಬ ಅರ್ಹ ಮತದಾರರಿಗೂ ಮತದಾನದ ಹಕ್ಕು ಸಿಗಬೇಕು ಎಂದು ಹೇಳಿಕೊಂಡು, ಅದರಿಂದ ಯಾರೂ ವಂಚಿತರಾಗಬಾರದು ಎಂದು ನಾವು ಬರೇ ಜನಜಾಗೃತಿ ಮತ್ತು ಅದಕ್ಕೊಂದು ಸಹಾಯ ಮಾಡ್ತೇವೆ ಹೊರತೂ, ಇದರ ಸಂಪೂರ್ಣ ಜವಾಬ್ದಾರಿ ಚುನಾವಣಾ ಆಯೋಗದ್ದೇ ಆಗಿದೆ. ಬೆಂಗಳೂರಿನಲ್ಲಿ ಚುನಾವಣಾ ಕಚೇರಿ ಇದೆ, ದೆಹಲಿಯಲ್ಲಿ ಕಚೇರಿ ಇದೆ—ಆ ಚುನಾವಣಾ ಕಚೇರಿಗೆ ಹೋಗಿ ಏನೆಲ್ಲಾ ಸಲಹೆ ಸೂಚನೆ ಬೇಕು ಅದನ್ನು ಕೊಡಲಿ. ನಮ್ಮದೇನೂ ಅಭ್ಯಂತರ ಇಲ್ಲ. ಚುನಾವಣಾ ಆಯೋಗ ಯಾವ ನಿಯಮಗಳನ್ನು ಮಾಡುತ್ತದೆ, ಅದಕ್ಕೆ ಅನುಗುಣವಾಗಿ ನಾವು ಕೆಲಸ ಮಾಡುತ್ತೇವೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೀದಿ ನಾಯಿ ದಾಳಿ ಜಿಂಕೆ ಸಾವು
ಮತದಾರರ ಪರಿಷ್ಕರಣಾ ಅರ್ಜಿ ವಿತರಣೆ