ಅಮೆರಿಕಾದ ಸ್ಯಾನ್‌ ಹೋಸೆಯಲ್ಲಿ ‘ಶ್ರೀ ಬನ್ನಂಜೆ 90 - ವಿಶ್ವನಮನ’

KannadaprabhaNewsNetwork |  
Published : May 28, 2026, 02:45 AM IST
ಅಮೆರಿಕಾದ ಸ್ಯಾನ್‌ಹೂಸೆಯಲ್ಲಿ ಬನ್ನಂಜೆ 90 - ವಿಶ್ವನಮನ ಕಾರ್ಯಕ್ರಮ ಸಂಪನ್ನಗೊಂಡಿತು  | Kannada Prabha

ಸಾರಾಂಶ

ಶ್ರೀ ಬನ್ನಂಜೆ ಪ್ರತಿಷ್ಠಾನ ಸಹಯೋಗದಲ್ಲಿ ಬನ್ನಂಜೆ 90 - ವಿಶ್ವ ನಮನ ಕಾರ್ಯಕ್ರಮ ಅಮೆರಿಕದ ಸ್ಯಾನ್‌ ಹೋಸೆ ನಗರದ ಶ್ರೀ ಪುತ್ತಿಗೆ ಮಠದಲ್ಲಿ ನಡೆಯಿತು. ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಅನುಗ್ರಹದೊಂದಿಗೆ ಕಾರ್ಯಕ್ರಮ ನಡೆದಿದ್ದು, ಶ್ರೀ ಹರಿವಾಯುಗುರುಗಳಿಗೆ ವೈಭವದ ರಥೋತ್ಸವದೊಂದಿಗೆ ಸಮಾಪನೆಗೊಂಡಿತು.

ಉಡುಪಿ: ಶ್ರೀ ಬನ್ನಂಜೆ ಪ್ರತಿಷ್ಠಾನ ಸಹಯೋಗದಲ್ಲಿ ಬನ್ನಂಜೆ 90 - ವಿಶ್ವ ನಮನ ಕಾರ್ಯಕ್ರಮ ಅಮೆರಿಕದ ಸ್ಯಾನ್‌ ಹೋಸೆ ನಗರದ ಶ್ರೀ ಪುತ್ತಿಗೆ ಮಠದಲ್ಲಿ ನಡೆಯಿತು. ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಅನುಗ್ರಹದೊಂದಿಗೆ ಕಾರ್ಯಕ್ರಮ ನಡೆದಿದ್ದು, ಶ್ರೀ ಹರಿವಾಯುಗುರುಗಳಿಗೆ ವೈಭವದ ರಥೋತ್ಸವದೊಂದಿಗೆ ಸಮಾಪನೆಗೊಂಡಿತು. ಮೊದಲ ದಿನದಂದು ಹರಿವಾಯು ಗುರುಗಳ ಭಾವಚಿತ್ರ ಮೆರವಣಿಗೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ಡಾ ಗುರುರಾಜ ಕರ್ಜಗಿ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಶ್ರೀ ಬನ್ನಂಜೆಯವರ ಕೃತಿಗಳ ಶೈಲಿಗಳ ಬಗ್ಗೆ ಮಾತನಾಡಿದರು.ಇಲ್ಲಿಯ ಶ್ರೀ ಬನ್ನಂಜೆ ಆಚಾರ್ಯರ ಶಿಷ್ಯರಾದ ವಿದ್ವಾನ್ ಗೋಪಿನಾಥ ಗಲಗಲಿ, ಪೂರ್ಣಪ್ರಸಾದ, ಬಾಲಚಂದ್ರ ಕೃಷ್ಣ, ಪ್ರಭುಮೂರ್ತಿ, ಪ್ರಸನ್ನಕೃಷ್ಣ, ಹರೀಶ ವಾಸುದೇವ, ಆನಂದ ದೇಶಪಾಂಡೆ, ಜಗನ್ನಾಥ್, ಎಂ. ಎಸ್. ಸತ್ಯನಾರಾಯಣ, ಪರೀಕ್ಷಿತ ಕೃಷ್ಣ, ಪ್ರಣವ ರಾಘವೇಂದ್ರ, ಸಮೀರಣ ಮುಂತಾದವರು ಅನೇಕ ವಿಷಯಗಳ ಬಗ್ಗೆ ಮಾತನಾಡಿ, ಬನ್ನಂಜೆ ಅವರನ್ನು ನೆನೆದರು.ದಿವ್ಯಾ ರಮೇಶ ಮತ್ತು ಅವರ ವಿದ್ಯಾರ್ಥಿಗಳು ಬನ್ನಂಜೆ ಅವರ ಕೃತಿಗಳನ್ನು ವರ್ಣಿಸಿದರು. ಬನ್ನಂಜೆಯವರ ಬಗ್ಗೆ ಸಂಸ್ಜೃತದಲ್ಲಿ ಪದ್ಯಗಳನ್ನು ಸ್ವಯಂ ರಚಿಸಿದ ಪ್ರಭು ನಂದನ್ ಮೂರ್ತಿ ಅವರು ಪುಟಾಣಿಗಳ ಮೂಲಕ ಸುಶ್ರಾವ್ಯವಾಗಿ ಹಾಡಿಸಿದರು. ಬನ್ನಂಜೆ ಪುತ್ತಿಗೆ ಮಠಕ್ಕೆ ಭೇಟಿ ನೀಡಿದಾಗ ಮಾಡಿದ ಪ್ರವಚನಗಳ ಬಗ್ಗೆ ಅವರ ಕೃತಿಗಳ ಬಗ್ಗೆ, ಆದರ್ಶ ವ್ಯಕ್ತಿತ್ವದ ಬಗ್ಗೆ ಅವರ ಅನೇಕ ಅಭಿಮಾನಿಗಳು, ಶಿಷ್ಯರು ತಮ್ಮ ಅನುಭವ ಹಂಚಿಕೊಂಡರು. ಕವಿತಾ ಉಡುಪ ಅವರ ಕವಿತಾ ವಾಚನ ನಡೆಯಿತು. ಸಭೆಯಲ್ಲಿ ಆಶಾ ಮತ್ತು ಶ್ರೀಧರ ಗೋಪಾಲ ಸಹಿತ ಮೊದಲಾದ ಅನೇಕ ಹಿರಿಯ ಗಣ್ಯರು ಪಾಲ್ಗೊಂಡಿದ್ದರು. ಶ್ರೀ ಪುತ್ತಿಗೆ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನಾಚಾರ್ಯ ಸ್ವಾಗತಿಸಿದರು. ಡಾ ವೀಣಾ ಬನ್ನಂಜೆ ವಂದಿಸಿದರು. ಕಾರ್ಯಕ್ರಮವನ್ನು ಸರಸ್ವತಿ ವಟ್ಟಂ, ಶ್ರೀಮುರಳಿ ಬಾಟಿ ಮತ್ತು ಸತೀಶ ಜಮಖಂಡಿ ನಡೆಸಿಕೊಟ್ಟರು. ಸ್ಯಾನ್‌ ಹೋಸೆ ಶ್ರೀಕೃಷ್ಣವೃಂದಾವನದ ಪ್ರಧಾನ ಅರ್ಚಕ ಶಂಕರ ನಾರಾಯಣ ಭಟ್ಟರ ನೇತೃತದಲ್ಲಿ ಎಲ್ಲ ಭಕ್ತರ ಸಹಕಾರಗಳೊಂದಿಗೆ ಬನ್ನಂಜೆ ವಿಶ್ವ ನಮನ ಕಾರ್ಯಕ್ರಮ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಧರ್ಮ ಉಳಿಕೆಯಲ್ಲಿ ಬಣಜಿಗರ ಕೊಡಗೆ ಸ್ಮರಣಾರ್ಹ
ನಗರಸಭೆಗೆ ಬೀಗ ಜಡಿದು ಬಿಜೆಪಿ ಪ್ರತಿಭಟನೆ