ಉಡುಪಿ: ಸಾನ್ವಿಗೆ ಮಿಸ್ ಟೀನ್ ಕರ್ನಾಟಕ ಕಿರೀಟ

KannadaprabhaNewsNetwork | Published : Oct 4, 2024 1:05 AM

ಸಾರಾಂಶ

ಮಂಗಳೂರಿನ ಫಿಜ಼ಾ ಬೈ ನೆಕ್ಸಸ್ ಮಾಲ್‌ನಲ್ಲಿ ನಡೆದ ಮಿಸ್ ಕರ್ನಾಟಕ -2024 ಸೌಂದರ್ಯ ಸ್ಪರ್ಧೆಯ ಮಿಸ್ ಟೀನ್ ವಿಭಾಗದಲ್ಲಿ ಸಾನ್ವಿ ಮಣಿಪಾಲ್ ವಿಜೇತೆಯಾಗಿ ಮಿಸ್ ಟೀನ್ ಕರ್ನಾಟಕ - 2024-25 ಎಂಬ ಬಿರುದಿನೊಂದಿಗೆ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿದ್ದಾಳೆ.

ಕನ್ನಡಪ್ರಭ ವಾರ್ತೆ ಉಡುಪಿ

ಮಂಗಳೂರಿನ ಸಿಜ್ಲಿಂಗ್ ಗೈಸ್ ಫ್ಯಾಷನ್ ಮ್ಯಾನೇಜ್ಮೆಂಟ್ ಮತ್ತು ಅಸ್ತ್ರ ಗ್ರೂಪ್ ಪ್ರಾಯೋಜಕತ್ವದಲ್ಲಿ ಮಂಗಳೂರಿನ ಫಿಜ಼ಾ ಬೈ ನೆಕ್ಸಸ್ ಮಾಲ್‌ನಲ್ಲಿ ನಡೆದ ಮಿಸ್ ಕರ್ನಾಟಕ -2024 ಸೌಂದರ್ಯ ಸ್ಪರ್ಧೆಯ ಮಿಸ್ ಟೀನ್ ವಿಭಾಗದಲ್ಲಿ ಸಾನ್ವಿ ಮಣಿಪಾಲ್ ವಿಜೇತೆಯಾಗಿ ಮಿಸ್ ಟೀನ್ ಕರ್ನಾಟಕ - 2024-25 ಎಂಬ ಬಿರುದಿನೊಂದಿಗೆ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿದ್ದಾಳೆ.

ಸಾನ್ವಿ ಉಡುಪಿಯ ಉದ್ಯಮಿ ಶ್ರೀನಿವಾಸ್ ಜಿ. ಗರಡಿಮಜಲು ಮತ್ತು ರೇವತಿ ಶ್ರೀನಿವಾಸ್ ದಂಪತಿ ಪುತ್ರಿಯಾಗಿದ್ದು, ಪ್ರಸ್ತುತ ಪೆರಂಪಳ್ಳಿಯ ಟ್ರಿನಿಟಿ ಸೆಂಟ್ರಲ್‌ ಸ್ಕೂಲ್‌ನಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಇವರು ಸಂಗೀತ, ನೃತ್ಯ, ಹುಲಿಕುಣಿತ, ಮರಕಾಲು ಕುಣಿತ, ಕ್ರೀಡೆ, ಮಾಡೆಲಿಂಗ್ ಇನ್ನೂ ಹಲವಾರು ಸಾಂಸ್ಕೃತಿಕ ಸಾಮಾಜಿಕ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾಳೆ.ಇತ್ತೀಚೆಗೆ ಉಡುಪಿಯಲ್ಲಿ ನಡೆದ ಮಿಸ್ ಟೀನ್ ಕೋಸ್ಟಲ್ - 2024ರ ವಿಜೇತೆಯಾಗಿ ಕೂಡ ಹೊರ ಹೊಮ್ಮಿದ್ದಾಳೆ. ಏಪ್ರಿಲ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ಯಂಗ್ ಸ್ಟೂಡೆಂಟ್ ಮೂಮೆಂಟ್ ಸಂಸ್ಥೆ ಇದರ ರೀಜನಲ್ ಕನ್ವೆನ್ಷನಲ್ಲಿ ಇವರ ಪಠ್ಯ- ಪಠ್ಯೇತರ ಚಟುವಟಿಕೆಗಳನ್ನು ಗಮನಿಸಿ ‘ಯುವರತ್ನ ಪ್ರಶಸ್ತಿ 2024’ ಗೌರವ ಪಡೆದು ಸನ್ಮಾನಿತರಾಗಿದ್ದಾಳೆ ಮತ್ತು ಜುಲೈನಲ್ಲಿ ನಡೆದ ಯುವ ವಿದ್ಯಾರ್ಥಿ ಸಂಚಲನ ಉಡುಪಿ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ಜಯಗಳಿಸಿ ಅಧ್ಯಕ್ಷ ಪದವಿಯನ್ನು ಗಳಿಸಿದ್ದಾಳೆ.

ಇವರು 2023ರಲ್ಲಿ ಮಂಗಳೂರಿನಲ್ಲಿ ನಡೆದ ಮಿಸ್ ಟೀನ್ ಮಂಗಳೂರು -2023 ಸ್ಪರ್ಧೆಯಲ್ಲಿ ಭಾಗವಹಿಸಿ ಮಿಸ್ ಟೀನ್ ಆಲ್ ರೌಂಡರ್ ಟೈಟಲ್ ವಿನ್ನರ್ ಆಗಿದ್ದಾಳೆ. ಅಲ್ಲದೆ ಶಾಲಾ ಮಟ್ಟದಲ್ಲಿ ನಡೆದ ಸ್ಪೆಲ್ ಬಿ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ಭಾಗವಹಿಸಿ ಕಲಿಕೆಯಲ್ಲಿಯೂ ಮುಂಚೂಣಿಯಲ್ಲಿರುವ ಈಕೆ ಶಿಕ್ಷಕರ ನೆಚ್ಚಿನ ವಿದ್ಯಾರ್ಥಿನಿಯಾಗಿದ್ದಾಳೆ.

Share this article