ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಮೈಸೂರು-ಊಟಿ ಹೆದ್ದಾರಿಯ ತಾಲೂಕಿನ ಅಗತಗೌಡನಹಳ್ಳಿ ಗೇಟ್ ಬಳಿ ಬುಧವಾರ ಸಂಜೆ ಪೆಟ್ರೋಲ್ ಬಂಕ್ ಮುಂದಿನ ಡಿವೈಡರ್ ಓಪನ್ ಆದ ಜಾಗ ಮೂಲಕ ಬೈಕ್ ಸವಾರ ದಾಟಲು ಹೋದಾಗ ಎದುರು ಬಂದ ಕಾರು ಡಿಕ್ಕಿ ಹೊಡೆದು ಮೃತಪಟ್ಟಿದ್ದಾನೆ.
ಮೈಸೂರು-ಊಟಿ ಹೆದ್ದಾರಿಯ ಗುಂಡ್ಲುಪೇಟೆ ಬಳಿಯ ಕಬ್ಬೇಕಟ್ಟೆ, ಅಗತಗೌಡನಹಳ್ಳಿ ಗೇಟ್ ಹಾಗೂ ಹಿರೀಕಾಟಿ-ಚಿಕ್ಕಹುಂಡಿ ಗೇಟ್ ಬಳಿಯ ಪೆಟ್ರೋಲ್ ಬಂಕ್‌ಗಳ ಮುಂದೆ ಹಾಕಲಾಗಿದ್ದ ಡಿವೈಡರ್ ಓಪನ್ ಆಗಿದೆ.ಡಿವೈಡರ್ ಓಪನ್ ಆಗದಿದ್ದರೆ ಅಪಘಾತಗಳು ಆಗುವುದು ಬಹುತೇಕ ಕಡಿಮೆ. ಬಂಕ್ ಮುಂದಿನ ಡಿವೈಡರ್ ಓಪನ್ ಮಾಡಿರುವ ಕಾರಣ ಬೈಕ್, ಕಾರು ಸವಾರರು ಬಂಕ್‌ನೊಳಗೆ ಹೋಗಲು ಯತ್ನಿಸಿದಾಗ ಅಪಘಾತಗಳು ಸಂಭವಿಸಿವೆ.
ಹೆದ್ದಾರಿಗಳಲ್ಲಿ ಪೆಟ್ರೋಲ್ ಬಂಕ್ ಆರಂಭಿಸುವ ಮುನ್ನ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಆದೇಶದಂತೆ ಬಂಕ್ ಮುಂದಿನ ಸರ್ವೀಸ್ ರಸ್ತೆಗೆ ಡಿವೈಡರ್ ಮಾಡಲಾಗಿತ್ತು. ಸರ್ವೀಸ್ ರಸ್ತೆಗೆ ಡಿವೈಡರ್ ಹಾಕಿರುವ ಕಾರಣ ಹೆದ್ದಾರಿಯಲ್ಲಿ ತೆರಳುವ ಬಹುತೇಕ ವಾಹನಗಳು ಸರ್ವೀಸ್ ರಸ್ತೆ ಇದ್ದರೆ ವಾಹನಗಳು ಬರುವುದಿಲ್ಲ ಎಂದು ಬಂಕ್ ಮಾಲೀಕರು ಸರ್ವೀಸ್ ರಸ್ತೆಗೆ ಹಾಕಲಾಗಿದ್ದ ಕೆಲ ದೂರವರೆಗಿನ ಡಿವೈಡರ್ ತೆಗೆದು ಹಾಕಿದ್ದಾರೆ.
ಪೊಲೀಸರು ಬಿಸಿ ಮುಟ್ಟಿಸುತ್ತಿಲ್ಲ!:
ಪೆಟ್ರೋಲ್ ಬಂಕ್‌ಗಳ ಮುಂದಿನ ಡಿವೈಡರ್ ಓಪನ್ ಆಗಿರುವುದರಿಂದಲೇ ಅಪಘಾತಗಳು ಹೆಚ್ಚುತ್ತಿವೆ. ಡಿವೈಡರ್ ಮುಚ್ಚಿ ಎಂದು ಇಲ್ಲಿನ ಪೊಲೀಸರು ಬಿಸಿ ಮುಟ್ಟಿಸುತ್ತಿಲ್ಲ. ರಸ್ತೆ ಅಪಘಾತದಿಂದ ಜನರ ಪ್ರಾಣ ಹೋಗುತ್ತಿವೆ. ಡಿವೈಡರ್ ಓಪನ್ ಮಾಡಿದ ಬಂಕ್ ಮಾಲೀಕರ ಮೇಲೆ ಪ್ರಕರಣ ದಾಖಲಿಸುವ ಪ್ರಯತ್ನವನ್ನೂ ಪೊಲೀಸರು ಮಾಡುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.ಬಂಕ್‌ಗಳಿಗೆ ನೋಟಿಸ್ ಜಾರಿ ಮಾಡಿದ್ರೂ ಮುಚ್ಚಿಲ್ಲ:
ಇದಾದ ಬಳಿಕವೂ ಬಂಕ್ ಮಾಲೀಕರು ಓಪನ್ ಮಾಡಿದ ಡಿವೈಡರ್ ಮುಚ್ಚುವ ಗೋಜಿಗೆ ಹೋಗಿಲ್ಲ. ಇದರ ಬೆನ್ನಲ್ಲೇ ಬುಧವಾರ ಸಂಜೆ ಡಿವೈಡರ್ ಬಳಿಯೇ ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಸಾವನ್ನಪ್ಪಿದ್ದಾನೆ.