ದೇವಸ್ಥಾನ ಸುಸ್ಥಿತಿಯಲ್ಲಿದ್ದರೆ ಊರೂ ಸುಭಿಕ್ಷ: ವಿಶ್ವವಲ್ಲಭ ಶ್ರೀ

KannadaprabhaNewsNetwork |  
Published : Mar 14, 2026, 02:45 AM IST
ಸಾಧ್ಯ  | Kannada Prabha

ಸಾರಾಂಶ

ದೇವಸ್ಥಾನಗಳು ಸುಸ್ಥಿತಿಯಲ್ಲಿದ್ದರೆ ಊರೂ ಸುಭಿಕ್ಷವಾಗಿರುತ್ತವೆ. ವ್ಯಕ್ತಿ ಪರಿವರ್ತನೆ ದೇವಾಲಯಗಳಿಂದ ಸಾಧ್ಯ ಎಂದು ಉಡುಪಿ ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಹೇಳಿದರು.

ಬೆಳ್ತಂಗಡಿ : ದೇವಸ್ಥಾನಗಳು ಸುಸ್ಥಿತಿಯಲ್ಲಿದ್ದರೆ ಊರೂ ಸುಭಿಕ್ಷವಾಗಿರುತ್ತವೆ. ವ್ಯಕ್ತಿ ಪರಿವರ್ತನೆ ದೇವಾಲಯಗಳಿಂದ ಸಾಧ್ಯ ಎಂದು ಉಡುಪಿ ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಹೇಳಿದರು.

ಅವರು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಕೊನೆ ದಿನವಾದ ಬುಧವಾರ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಶ್ರೀ ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ, ಸನ್ನಿಧಾನವನ್ನು ಸುಂದರವಾಗಿ ಕಾಪಾಡಿಕೊಳ್ಳುವ ಜವಾಬ್ದಾರಿ ಭಕ್ತರದ್ದು. ದೇವಾಲಯದಲ್ಲಿನ ವೈಭವಗಳು ಭಕ್ತರನ್ನು ಆನಂದಗೊಳಿಸುತ್ತವೆ ಎಂದರು.ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು ಶರತ್‌ಕೃಷ್ಣ ಪಡ್ವೆಟ್ನಾಯರ ನೇತೃತ್ವದಲ್ಲಿ ಸ್ಮರಣೀಯ ಕಾರ್ಯಕ್ರಮಗಳು ನಡೆದಿವೆ. ಭಗವಂತ ಸಂತೃಪ್ತನಾಗಿದ್ದಾನೆ ಎಂಬುದಕ್ಕೆ ಇಲ್ಲಿನ ವಿಜೃಂಭಣೆಯೇ ಸಾಕ್ಷಿ ಎಂದರು. ಅಧ್ಯಕ್ಷತೆಯನ್ನು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೆ. ಪ್ರತಾಪ ಸಿಂಹ ನಾಯಕ್ ವಹಿಸಿದ್ದರು.ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಶಶಿಧರ ಶೆಟ್ಟಿ ಬರೋಡ, ಶಾಸಕ ಹರೀಶ್ ಪೂಂಜ, ಮೆಸ್ಕಾಂ ಜಿಲ್ಲಾ ಅಧ್ಯಕ್ಷ ಕೆ. ಹರೀಶ್ ಕುಮಾರ್, ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಬೆಂಗಳೂರು ಉದ್ಯಮಿ ತ್ರಿವಿಕ್ರಮ ಸಫಲ್ಯ, ಕಿರಣ್ ರಾವ್, ಕುಸುಮಾ ಪಡುವೆಟ್ನಾಯ, ವೃಂದಾ ಪಡುವೆಟ್ನಾಯ, ಲೀಲಾವತಿ ರಾಜು ಮೇಸ್ತ್ರಿ ಉಪಸ್ಥಿತರಿದ್ದರು.

ನೀಲೇಶ್ವರ ಆಲಂಬಾಡಿ ಪದ್ಮನಾಭ ತಂತ್ರಿ, ಪ್ರದಾನ ಅರ್ಚಕ ಶ್ರೀನಿವಾಸ್ ಹೊಳ್ಳ, ಬ್ರಹ್ಮವಾಹಕ ವೆಂಕಟರಾಜ ಹೆಬ್ಬಾರ್, ನಾಗೇಂದ್ರ ಭಾರಧ್ವಜ, ಬೆಂಗಳೂರು ಸಮಿತಿ ಸಂಚಾಲಕ ಮಂಜುನಾಥ ಕನ್ಯಾಡಿ, ಮಹಾದೇವ ಮೂರ್ತಿ ಬೆಂಗಳೂರು, ವೇದಮೂರ್ತಿ ಬಾಲಕೃಷ್ಣ ಹೊಳ್ಳ, ಪ್ರವೀಣ್ ಕುಮಾರ್ ಇಂದ್ರ, ಕೆ.ಮೋಹನ್ ಕುಮಾರ್ ಅಮ್ಮಿ ಪೂಜಾರಿ ಪಾರ ಇವರಿಗೆ ಗೌರವಾರ್ಪಣೆ ನಡೆಯಿತು.ಪತ್ರಕರ್ತ ಶ್ರೀನಿವಾಸ ತಂತ್ರಿ ಅವರ ಸಂಪಾದಕತ್ವದ ತುಳಸಿ ಪತ್ರಿಕೆಯ ವಿಶೇಷ ಸಂಚಿಕೆಯನ್ನು ಸುಬ್ರಹ್ಮಣ್ಯ ಶ್ರೀಗಳು ಬಿಡುಗಡೆಗೊಳಿಸಿದರು. ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯ ಸ್ವಾಗತಿಸಿದರು. ಉಪನ್ಯಾಸಕ‌ ಡಾ. ಶ್ರೀಧರ ಭಟ್ ಕಾರ್ಯಕ್ರಮ ನಿರೂಪಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ರವೀಂದ್ರ ಶೆಟ್ಟಿ ವಂದಿಸಿದರು.ಸಮಗ್ರ ಭಜನಾ ತಂಡಗಳ ಸದಸ್ಯರು ಪ್ರಾರ್ಥನೆ ಗೈದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುಕೆಪಿ ಸಂತ್ರಸ್ತರಿಗೆ ಪರಿಹಾರ ಸಮಸ್ಯೆ ಇಲ್ಲ: ಸಚಿವ ತಿಮ್ಮಾಪುರ
ಕನ್ಯಾಲು ಬ್ರಹ್ಮಕಲಶೋತ್ಸವ ಆಮಂತ್ರಣ ಬಿಡುಗಡೆ