ಉಡುಪಿ ಶ್ರೀ ಕೃಷ್ಣ ಯೋಗ ಕೇಂದ್ರ: ಯೋಗ ನೃತ್ಯ ಕಾರ್ಯಕ್ರಮ ಸಂಪನ್ನ

KannadaprabhaNewsNetwork |  
Published : Jun 27, 2025, 12:50 AM ISTUpdated : Jun 27, 2025, 12:51 AM IST
25ಯೋಗ | Kannada Prabha

ಸಾರಾಂಶ

ಶ್ರೀ ಕೃಷ್ಣ ಯೋಗ ಕೇಂದ್ರ ವತಿಯಿಂದ 11ನೇ ವಿಶ್ವ ಯೋಗ ದಿನಾಚರಣೆ ಕುಂಜಿಬೆಟ್ಟಿನ ಯಕ್ಷಗಾನ ಕಲಾಕೇಂದ್ರದ ಐವೈಸಿ ಸಭಾಂಗಣದಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ಶ್ರೀ ಕೃಷ್ಣ ಯೋಗ ಕೇಂದ್ರ ವತಿಯಿಂದ 11ನೇ ವಿಶ್ವ ಯೋಗ ದಿನಾಚರಣೆ ಕುಂಜಿಬೆಟ್ಟಿನ ಯಕ್ಷಗಾನ ಕಲಾಕೇಂದ್ರದ ಐವೈಸಿ ಸಭಾಂಗಣದಲ್ಲಿ ನಡೆಯಿತು.ಮುಖ್ಯ ಅತಿಥಿಯಾಗಿದ್ದ ಉಡುಪಿಯ ಮನೋವೈದ್ಯ ಡಾ. ಪಿ.ವಿ. ಭಂಡಾರಿ ಮಾತನಾಡಿ, ಶ್ರೀ ಕೃಷ್ಣ ಯೋಗ ಕೇಂದ್ರದ ಕಾರ್ಯಕ್ರಮ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಹಿರಿಯ ನಾಗರಿಕರ ಬಗ್ಗೆ ಸಾರ್ವಜನಿಕರ ಆರೋಗ್ಯದ ಬಗ್ಗೆ ಕೇಂದ್ರ ಕೈಗೊಂಡ ವಿವಿಧ ಕಾರ್ಯಕ್ರಮಗಳ ಬಗ್ಗೆ ಉಚಿತ ಯೋಗಾಸನ ಪ್ರಾಣಾಯಾಮ ತರಗತಿಗಳ ಬಗ್ಗೆ ಹರ್ಷ ವ್ಯಕ್ತಪಡಿಸಿ, ಇಂದು ಯುವ ಜನಾಂಗ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿವರಿಸಿ ಯೋಗದ ಮೂಲಕ ಅವನ್ನು ಪರಿಹರಿಸಲು ಸಾಧ್ಯ. ಈ ಬಗ್ಗೆ ಸಂಶೋಧನೆಗಳು ಪ್ರಗತಿಯಲ್ಲಿದೆ ಎಂದರು.ಇನ್ನೊಬ್ಬ ಅತಿಥಿ ಕಟೀಲು ದುರ್ಗಾಪರಮೇಶ್ವರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಬಾಲಕೃಷ್ಣ ಶೆಟ್ಟಿ, ಹದಿಹರೆಯದ ಯುವ ಜನಾಂಗದ ಸಮಸ್ಯೆಗಳನ್ನು ಬಗೆಹರಿಸಲು ಯೋಗ, ಧ್ಯಾನ, ಪ್ರಾಣಯಾಮದಿಂದ ಸಾಧ್ಯ ಎಂದು ಹೇಳಿದರು.ಕೇಂದ್ರದ ಪ್ರಮುಖರಾದ ವಿಶ್ವನಾಥ್ ಹೆಗ್ಡೆ, ಸದಾನಂದ್ ಹೆಗ್ಡೆ, ನಾಗರಾಜ ರಾವ್, ಇಂದಿರಾ, ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಸುಪರ್ಣ ಶೆಟ್ಟಿ, ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೇಕಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರಾಘವೇಂದ್ರ ಆಚಾರ್ಯ ಸ್ವಾಗತ ಗೀತೆ ಹಾಡಿದರು. ಪ್ರೇಮ ಸ್ವಾಗತಿಸಿದರು. ಕಾರ್ಯದರ್ಶಿ ಅಮಿತ್ ಶೆಟ್ಟಿ ವಾರ್ಷಿಕ ವರದಿ ಮಂಡಿಸಿದರು. ಮಮತಾ ಮತ್ತು ನಯನಾ, ಅಖಿಲ್ ಶೆಟ್ಟಿ ಸಹಕರಿಸಿದರು. ಮಮತಾ ಕೊರಡ್ಕಲ್ ವಂದಿಸಿದರು. ನಂತರ ವಿವಿಧ ಶ್ರೀ ಕೃಷ್ಣ ಯೋಗದ ಶಾಖೆಗಳ ವಿದ್ಯಾರ್ಥಿಗಳಿಂದ ಯೋಗ ನೃತ್ಯ, ಲಘು ಪ್ರಹಸನ ಪ್ರೇಕ್ಷಕರ ಮನಸೊರೆಗೊಂಡವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ ಕುರಿತು ಇಂದು ರಾಜ್ಯ ವಿಶೇಷ ಸಂಪುಟ ಸಭೆ
ಫೆ.13ಕ್ಕೆ ಕಾಂಗ್ರೆಸ್‌ ಸರ್ಕಾರಕ್ಕೆ 1000 ದಿನ