ಉಡುಪಿ ಶ್ರೀ ಲಕ್ಷ್ಮೀವೆಂಕಟೇಶ ದೇವಸ್ಥಾನ ಶ್ರೀ ನರಸಿಂಹ ಹವನ

KannadaprabhaNewsNetwork |  
Published : Jun 07, 2026, 02:45 AM IST
01ಎಲ್‌ವಿಟಿ | Kannada Prabha

ಸಾರಾಂಶ

ಉಡುಪಿ: ನಗರದ ತಂಕಪೇಟೆಯ ಶ್ರೀ ಲಕ್ಷ್ಮೀವೆಂಕಟೇಶ ದೇವಸ್ಥಾನದಲ್ಲಿ ಶ್ರೀ ದೇವರ ಸನ್ನಿಧಿಯಲ್ಲಿ ಅಧಿಕ ಜೇಷ್ಠ ಮಾಸ ಪ್ರಯುಕ್ತ ಮೇ 30ರಂದು ಶ್ರೀ ನರಸಿಂಹ ಹವನ ಹಾಗೂ ಲಕ್ಷ್ಮೀ ಸಹಸ್ರನಾಮ ಸಹಿತ ಕುಂಕುಮಾರ್ಚನೆ ಹಾಗೂ ಪುಷ್ಪಾರ್ಚನೆ ಜರುಗಿತು.

ಉಡುಪಿ: ನಗರದ ತಂಕಪೇಟೆಯ ಶ್ರೀ ಲಕ್ಷ್ಮೀವೆಂಕಟೇಶ ದೇವಸ್ಥಾನದಲ್ಲಿ ಶ್ರೀ ದೇವರ ಸನ್ನಿಧಿಯಲ್ಲಿ ಅಧಿಕ ಜೇಷ್ಠ ಮಾಸ ಪ್ರಯುಕ್ತ ಮೇ 30ರಂದು ಶ್ರೀ ನರಸಿಂಹ ಹವನ ಹಾಗೂ ಲಕ್ಷ್ಮೀ ಸಹಸ್ರನಾಮ ಸಹಿತ ಕುಂಕುಮಾರ್ಚನೆ ಹಾಗೂ ಪುಷ್ಪಾರ್ಚನೆ ಜರುಗಿತು.ಈ ಪ್ರಯುಕ್ತ ಶ್ರೀ ದೇವರಿಗೆ ವಿಶೇಷ ಅಲಂಕಾರ, ಮಹಾಪೂಜೆ ಬಳಿಕ ಸಮಾರಾಧನೆ ಜರುಗಿತು. ದೇವಳದ ಪ್ರಧಾನ ಅರ್ಚಕ ದಯಾಘನ್ ಭಟ್ ನೇತೃತ್ವದಲ್ಲಿ ವಿನಾಯಕ ಭಟ್, ರವೀಂದ್ರ ಭಟ್, ದೀಪಕ್ ಭಟ್, ಗಿರೀಶ್ ಭಟ್, ರಮೇಶ್ ಭಟ್ ಹೋಮಾದಿ ಅನುಷ್ಠಾನಗಳನ್ನು ನೆರವೇರಿಸಿದರು.

ದೇವಸ್ಥಾನದ ಆಡಳಿತ ಮೊಕ್ತೇಸರ ಗುಜ್ಜಾಡಿ ಪ್ರಭಾಕರ ನಾಯಕ್ ಉಪಸ್ಥಿತರಿದ್ದರು. ಹವನದ ಪೂಜೆಯಲ್ಲಿ ವಿಶಾಲ್ ಶೆಣೈ ದಂಪತಿ ಸಹಕರಿಸಿದರು, ವಿಶ್ವಸ್ಥ ಮಂಡಳಿ ಸದಸ್ಯರು, ವಿವಿಧ ಭಜನಾ ಮಂಡಳಿ ಸದಸ್ಯರು, ಜಿಎಸ್ ಬಿ ಯುವಕ /ಮಹಿಳಾ ಮಂಡಳಿ ಸದಸ್ಯರು, ನೂರಾರು ಸಮಾಜ ಬಾಂಧವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನ ಪೈಪ್‌ಲೈನ್‌ ಸಂಪರ್ಕ ಮುಂದಿನ ವರ್ಷ ಪೂರ್ಣ
ಎನ್‌ಎಂಪಿಎಯಲ್ಲಿ ವಿಶ್ವ ಪರಿಸರ ದಿನಾಚರಣೆ