ಉಡುಪಿ-ಉಚ್ಚಿಲ ದಸರಾ: ಎಲ್ಲಿ ನೋಡಿದರಲ್ಲಿ ಮುದ್ದು ಶಾರದೆಯರು

KannadaprabhaNewsNetwork |  
Published : Sep 27, 2025, 12:02 AM IST
26ಶಾರದೆ | Kannada Prabha

ಸಾರಾಂಶ

ಉಚ್ಚಿಲ ಮಹಾಲಕ್ಷ್ಮೀ ದೇವಾಲಯದಲ್ಲಿ ನಿತ್ಯವೂ ವೈವಿಧ್ಯಮಯವಾಗಿ ನವರಾತ್ರೋತ್ಸವ - ಉಡುಪಿ ಉಚ್ಚಿಲ ದಸರಾವು ಭಕ್ತರನ್ನು ಸೆಳೆಯುತ್ತಿದೆ. ಗುರುವಾರ ಅಕರ್ಷಕವಾದ ರಂಗೋಲಿ ಸ್ಪರ್ಧೆ ನಡೆದರೆ, ಶುಕ್ರವಾರ ಮುದ್ದಮಕ್ಕಳಿಗಾಗಿ ಮುದ್ದುಶಾರದೆ ಛದ್ಮವೇಷ ಸ್ಪರ್ಧೆ ಪ್ರೇಕ್ಷಕರನ್ನು ಮಂತ್ರಮುಗ್ದಗೊಳಿಸಿತು.

ಉಚ್ಚಿಲ: ದ.ಕ. ಜಿಲ್ಲಾ ಮೊಗವೀರ ಮಹಾಜನ ಸಂಘದ ಆಯೋಜನೆಯಲ್ಲಿ, ಇಲ್ಲಿನ ಮಹಾಲಕ್ಷ್ಮೀ ದೇವಾಲಯದಲ್ಲಿ ನಿತ್ಯವೂ ವೈವಿಧ್ಯಮಯವಾಗಿ ನವರಾತ್ರೋತ್ಸವ - ಉಡುಪಿ ಉಚ್ಚಿಲ ದಸರಾವು ಭಕ್ತರನ್ನು ಸೆಳೆಯುತ್ತಿದೆ. ಗುರುವಾರ ಅಕರ್ಷಕವಾದ ರಂಗೋಲಿ ಸ್ಪರ್ಧೆ ನಡೆದರೆ, ಶುಕ್ರವಾರ ಮುದ್ದಮಕ್ಕಳಿಗಾಗಿ ಮುದ್ದುಶಾರದೆ ಛದ್ಮವೇಷ ಸ್ಪರ್ಧೆ ಪ್ರೇಕ್ಷಕರನ್ನು ಮಂತ್ರಮುಗ್ದಗೊಳಿಸಿತು.ಸುಮಾರು 70ಕ್ಕೂ ಹೆಚ್ಚು 3ರಿಂದ 9 ವರ್ಷ ವಯೋಮಾನದ ಪುಟ್ಟ ಮಕ್ಕಳನ್ನು ಹೆತ್ತವರು ಶಾರದೆಯ ವೇಷ ಹಾಕಿ ಕರೆ ತಂದಿದ್ದರು, ಈ ಮಕ್ಕಳು ವೇದಿಕೆಯಲ್ಲಿ ತಮ್ಮ ಮುಗ್ಧ ಪ್ರದರ್ಶನವನ್ನು ನೀಡಿ ತೀರ್ಪಗಾರರು ಅಂಕ ನೀಡುವುದಕ್ಕೆ ಪೇಚಾಡುವಂತೆ ಮಾಡಿದ್ದು ಮಾತ್ರವಲ್ಲದೆ, ವಿಶಾಲವಾದ ದೇವಾಲಯದಲೆಲ್ಲಾ ಓಡಾಡುತ್ತಾ ಪರಿಸರವನ್ನೇ ಶಾರದಾಮಯಗೊಳಿಸಿದ್ದರು.ಶುಕ್ರವಾರ ದೇವಿಯ ದಿನವಾದ್ದರಿಂದ ಎಂದಿಗಿಂತಲೂ ಹೆಚ್ಚು ಭಕ್ತರು ಈ ದಿನ ದೇವಾಲಯಕ್ಕೆ ಭೇಟಿ ನೀಡಿದ್ದರು. ಎಲ್ಲಿ ನೋಡಿದರೂ ಸರದಿಯಲ್ಲಿ ನಿಂತ ಭಕ್ತರು ಕಾಣುತಿದ್ದರು. ಅವರನ್ನೆಲ್ಲಾ ಅಷ್ಟೇ ಗೌರವದಿಂದ ಸ್ವಯಂಸೇವಕರು ಉಪಚರಿಸುತಿದ್ದರು. ಶಿಸ್ತು ಮತ್ತು ಸುವ್ಯವಸ್ಥೆಗೆ ಇನ್ನೊಂದು ಹೆಸರಿನಂತೆ ಉಡುಪಿ ಉಚ್ಚಿಲ ದಸರಾ ನಡೆಯುತ್ತಿದೆ.

ಫಲಿತಾಂಶ: ಮುದ್ದು ಶಾರದೆ ಸ್ಪರ್ಧೆ - ಪ್ರಥಮ : ಅನ್ವಿ ಎಸ್. ನಾಯಕ್ ಬ್ರಹ್ಮಾವರ, ದ್ವಿತೀಯ: ವಿಶ ಎಸ್.ಪೂಜಾರಿ ಕಾರ್ಕಳ, ತೃತೀಯ: ಆಧ್ಯ ಕಲ್ಯ.

ರಂಗೋಲಿ ಸ್ಪರ್ಧೆ- ಮಹಿಳಾ ವಿಭಾಗ ಪ್ರಥಮ : ಪ್ರಮೀಳಾ ಶೆಟ್ಟಿ ಬೆಳ್ಮಣ್ಣು, ದ್ವಿತೀಯ :ವಿದ್ಯಾ ವಿಶ್ವೇಶ್, ತೃತೀಯ : ಮಂಗಳ ಸಾಲ್ಯಾನ್ ನಿಟ್ಟೂರು.ಪುರುಷರ ವಿಭಾಗ ಪ್ರಥಮ: ತಿಲಕ್ ಪುತ್ರನ್ ಬಡಾಎರ್ಮಾಳು, ದ್ವಿತೀಯ : ಕಿರಣ್ ಕುಮಾರ್ ಕುರ್ಕಾಲು, ತೃತೀಯ : ಅತುಲ್ ಮಂಗಳೂರು.

ವಿಜೇತ ಮಕ್ಕಳಿಗೆ ದಸರಾ ಸಮಿತಿಯ ಅಧ್ಯಕ್ಷ ವಿನಯ್ ಕರ್ಕೇರ, ಪ್ರಧಾನ ಕಾರ್ಯದರ್ಶಿ ಸತೀಶ್ ಕುಂದರ್, ದೇವಳದ ಪ್ರಧಾನ ವ್ಯವಸ್ಥಾಪಕ ಸತೀಶ್‌ ಅಮೀನ್ ಪಡುಕರೆ ಬಹುಮಾನಗಳನ್ನು ನೀಡಿ ಅಭಿನಂದಿಸಿದರು.

PREV

Recommended Stories

ಹತ್ತು ವರ್ಷವಾದ್ರೂ ನೇಕಾರರ ಮನೆಗಳಿಗಿಲ್ಲ ಮುಕ್ತಿ
ಭೀಮಾನದಿ ನೀರಿನ ಹರಿವು ಮತ್ತೆ ಏರಿಕೆ