ಯುಗಾದಿ ಹಬ್ಬಕ್ಕೆ ಸಾಮಗ್ರಿ ಖರೀದಿ ಸಂಭ್ರಮ

KannadaprabhaNewsNetwork |  
Published : Mar 30, 2025, 03:06 AM IST
29ಕೆಆರ್ ಎಂಎನ್ 4.ಜೆಪಿಜಿರಾಮನಗರದಲ್ಲಿ ಯುಗಾದಿ ಹಬ್ಬಕ್ಕೆ ಮಾವಿನ ಸೊಪ್ಪು-ಬೇವಿನ ಸೊಪ್ಪು ಖರೀದಿಸುತ್ತಿರುವ ಮಹಿಳೆಯರು | Kannada Prabha

ಸಾರಾಂಶ

ರಾಮನಗರ: ಹೊಸ ಸಂವತ್ಸರವನ್ನು ಅದ್ಧೂರಿಯಾಗಿ ಸ್ವಾಗತಿಸಲು ಜಿಲ್ಲೆಯ ಜನರು ಭರದ ಸಿದ್ಧತೆ ನಡೆಸಿದ್ದಾರೆ. ಹಬ್ಬದ ವಸ್ತುಗಳ ಖರೀದಿ ಭರಾಟೆ ಜೋರಾಗಿದ್ದು, ಹೊಸ ವರ್ಷಕ್ಕೆ ಹೊಸ ಬಟ್ಟೆ ಖರೀದಿಯಲ್ಲಿ ಜನರು ಕುಟುಂಬದವರೊಂದಿಗೆ ನಿರತರಾಗಿದ್ದರು.

ರಾಮನಗರ: ಹೊಸ ಸಂವತ್ಸರವನ್ನು ಅದ್ಧೂರಿಯಾಗಿ ಸ್ವಾಗತಿಸಲು ಜಿಲ್ಲೆಯ ಜನರು ಭರದ ಸಿದ್ಧತೆ ನಡೆಸಿದ್ದಾರೆ. ಹಬ್ಬದ ವಸ್ತುಗಳ ಖರೀದಿ ಭರಾಟೆ ಜೋರಾಗಿದ್ದು, ಹೊಸ ವರ್ಷಕ್ಕೆ ಹೊಸ ಬಟ್ಟೆ ಖರೀದಿಯಲ್ಲಿ ಜನರು ಕುಟುಂಬದವರೊಂದಿಗೆ ನಿರತರಾಗಿದ್ದರು.

ದಿನಸಿ ಪದಾರ್ಥಗಳನ್ನು ಕಳೆದ ಬಾರಿಗೆ ಹೋಲಿಸಿದರೆ, ಈ ಬಾರಿ ಪದಾರ್ಥಗಳ ದರ ಹೆಚ್ಚಾಗಿದೆ. ಇದರೊಟ್ಟಿಗೆ ತರಕಾರಿ ಹಾಗೂ ತೆಂಗಿನ ಕಾಯಿ ಬೆಲೆಯೂ ಗಗನಮುಖಿಯಾಗಿದ್ದು, ದರ ಏರಿಕೆ ಹಬ್ಬದ ಆಚರಣೆ ಮಾಡಬೇಕಾದ ಸ್ಥಿತಿಗೆ ಜನರು ಬಂದಿದ್ದಾರೆ.

ಹಬ್ಬದ ಮುನ್ನಾ ದಿನ ಶನಿವಾರ ನಗರದ ಎಂ.ಜಿ.ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳೆಲ್ಲವೂ ಜನಜಂಗುಳಿಯಿಂದ ತುಂಬಿತ್ತು. ನಗರ ಮತ್ತು ಗ್ರಾಮೀಣ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಮಾರುಕಟ್ಟೆಯ ಇಕ್ಕೆಲಗಳಲ್ಲಿ ಹಣ್ಣು, ಹೂವು, ತರಕಾರಿ ಮಾರಾಟ ಜೋರಾಗಿಯೇ ನಡೆದಿತ್ತು. ಮಹಿಳೆಯರು, ಮಕ್ಕಳೊಂದಿಗೆ ಅಂಗಡಿಗಳಿಗೆ ಬಂದು ಹೊಸ ಬಟ್ಟೆ ಖರೀದಿಯಲ್ಲಿ ತೊಡಗಿದ್ದರು. ಬಟ್ಟೆ ಅಂಗಡಿಯವರು ಹಬ್ಬದ ಪ್ರಯುಕ್ತ ರಿಯಾಯಿತಿ ದರದಲ್ಲಿ ಬಟ್ಟೆಗಳನ್ನು ಮಾರಾಟ ಮಾಡುವ ಬ್ಯುಸಿಯಲ್ಲಿದ್ದರು.

ನಗರದ ಕೆಂಗಲ್ ಹನುಮಂತಯ್ಯ ವೃತ್ತ, ವಾಟರ್ ಟ್ಯಾಂಕ್ ಸರ್ಕಲ್ ಸೇರಿ ಪ್ರಮುಖ ರಸ್ತೆಗಳಲ್ಲಿ ಮಾವಿನ ಸೊಪ್ಪನ್ನು ರಾಶಿ ಹಾಕಿಕೊಂಡು ಮಾರಾಟದಲ್ಲಿ ನಿರತರಾಗಿದ್ದರು. ಮಾವಿನಸೊಪ್ಪಿಗೆ ಎಲ್ಲೆಡೆ ಭರ್ಜರಿ ಬೇಡಿಕೆ ಇತ್ತು. ಮಾವಿನ ಸೊಪ್ಪು ಪ್ರತಿ ಕಟ್ಟಿಗೆ- 10 ರು., ಬೇವಿನಸೊಪ್ಪು- 10 ರು.ಗೆ ಮಾರಾಟವಾಗುತ್ತಿತ್ತು.

ಹೂವು, ಹಣ್ಣು ಬೆಲೆ ಹೆಚ್ಚಳ :

ಯುಗಾದಿ ಹಬ್ಬಕ್ಕೆ ಹೂವು, ಹಣ್ಣು ಬೆಲೆಯಲ್ಲಿ ಏರಿಕೆಯಾಗಿದೆ. ಪ್ರತಿ ಮಾರು ಕನಕಾಂಬರ - 300 ರು., ಮಲ್ಲಿಗೆ - 100 ರು., ಕಾಕಡ - 100 ರು., ಸೇವಂತಿಗೆ 150 ರು.ನಿಂದ 120 ರು., ಬಟನ್ಸ್- 120 ರು., ಗಣಗಲೆ ಹೂ- 80 ರು., ಚೆಂಡು ಹೂ- 60 ರು., ತುಳಸಿ- 50 ರು., ಸುಗಂಧರಾಜ ಕೆಜಿ 400 ರು., ಹೂವಿನ ಹಾರಗಳು 150 ರು.ನಿಂದ 600 ರು.ವರೆಗೆ ಮಾರಾಟವಾಗುತ್ತಿತ್ತು.

ಹಣ್ಣುಗಳ ಬೆಲೆ ಏರುಗತಿಯಲ್ಲಿತ್ತು. ಪ್ರತಿ ಕೆಜಿ ಮಿಕ್ಸ್ ಹಣ್ಣು- 150 ರು., ಕಿತ್ತಳೆ - 150 ರು., ಮೂಸಂಬಿ - 100 ರು., ಸೇಬು - 200 ರು.ನಿಂದ 290 ರು,, ದಾಳಿಂಬೆ- 260 ರು., ಸಿಹಿ ದ್ರಾಕ್ಷಿ - 100 ರು., ಕಪ್ಪುದ್ರಾಕ್ಷಿ - 120 ರು., ಬಾಳೆಹಣ್ಣು - 100 ರು., ಪಚ್ಚಬಾಳೆ - 40 ರು., ಪರಂಗಿ ಹಣ್ಣು - 30 ರು., ಅನಾನಸ್- 70 ರು.ನಿಂದ 80 ರು., ಸೀಬೆ-80 ರಿಂದ 120 ರು., ಕರ್ಬೂಜ - 40 ರು. ತರಕಾರಿ ಬೆಲೆಗಳು ಸಾಮಾನ್ಯವಾಗಿತ್ತು. ಬೀನಿಸ್ ಮಾತ್ರ ಪ್ರತಿ ಕೆಜಿಗೆ 100 ರು., ಸೌತೆಕಾಯಿ 4 ಕ್ಕೆ 20 ರು., 4 ನಿಂಬೆಹಣ್ಣು - 20 ರು., ಕೊತ್ತಂಬರಿ ಸೊಪ್ಪು - 20 ರು. ಟೊಮೋಟೊ - 10೦ ರು.,ಅವರೆಕಾಯಿ - 60 ರು., ಚಪ್ಪರದವರೆಕಾಯಿ- 80 ರು., ಹೂಕೋಸು - 50 ರು., ಕ್ಯಾರೆಟ್ - 30 ರು., ಗೆಡ್ಡೆಕೋಸು - 30 ರು., ಬೀಟ್‌ರೂಟ್ - 30 ರು., ದಪ್ಪಮೆಣಸಿನಕಾಯಿ - 80 ರು., ಮೆಣಸಿನಕಾಯಿ ಕೆಜಿ 120 ರು. ಇತ್ತು.

29ಕೆಆರ್ ಎಂಎನ್ 4.ಜೆಪಿಜಿ

ರಾಮನಗರದಲ್ಲಿ ಯುಗಾದಿ ಹಬ್ಬಕ್ಕೆ ಮಾವಿನ ಸೊಪ್ಪು-ಬೇವಿನ ಸೊಪ್ಪು ಖರೀದಿಸುತ್ತಿರುವ ಮಹಿಳೆಯರು

---------------------------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ