ಕನ್ನಡಪ್ರಭ ವಾರ್ತೆ ಮಳವಳ್ಳಿ
ತಾಲೂಕಿನ ರಾಗಿಬೊಮ್ಮನಹಳ್ಳಿಯಲ್ಲಿ ಪೂರಿಗಾಲಿಯ ಜೈ ಭೀಮ್ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಗುರುವಾರ ಆಯೋಜಿಸಿದ್ದ ಯುಗಾದಿ ಸಂಭ್ರಮ ಹಾಗೂ ಜನಪದ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ವಿಶ್ವದೆಲ್ಲೆಡೆ ಪ್ರಸ್ತುತ ಸಣ್ಣಪುಟ್ಟ ವಿಚಾರಗಳಿಗಾಗಿ ಧರ್ಮ, ಜಾತಿಯ ನಡುವೆ ಕೋಮು ಸಂಘರ್ಷಗಳು ನಡೆಯುತ್ತಿವೆ. ಜಗತ್ತಿನಲ್ಲಿಡೆ ಅಶಾಂತಿ ಉಂಟಾಗಿ ತಲ್ಲಣಿಸುವಂತಹ ಸನ್ನಿವೇಶಗಳನ್ನು ನಾವು ಕಾಣುತ್ತಿದ್ದೇವೆ. ಇಂತಹ ಸನ್ನಿವೇಶಗಳು ಇಲ್ಲಿಗೆ ಕೊನೆಯಾಗಿ ಮುಂದಿನ ದಿನಗಳಲ್ಲಿ ಸುಖ, ಶಾಂತಿ, ನೆಮ್ಮದಿಯೊಂದಿಗೆ ಹರ್ಷದಿಂದ ಬಾಳುವಂತಾಗಲಿ ಎಂದು ಹಾರೈಸಿದರು.ಕಸಾಪ ತಾಲೂಕು ಘಟಕದ ಅಧ್ಯಕ್ಷ ಎಲ್.ಚೇತನ್ ಕುಮಾರ್ ಮಾತನಾಡಿ, ತಾಲೂಕು ಪವಾಡ ಪುರುಷರಾದ ಮಲೆ ಮಹದೇಶ್ವರರು, ಸಿದ್ದಪ್ಪಾಜಿ, ಮಂಟೇಸ್ವಾಮಿ ಸೇರಿದಂತೆ ಅನೇಕರು ಜನಪದ ಜಂಗಮರು, ಸಾಹಿತಿಗಳು, ಬುದ್ಧಿಜೀವಿಗಳು ನಡೆದಾಡಿರುವಂತಹ ಹಾಗೂ ಜನಪದ ಪ್ರಕಾರಗಳಾದ ತಂಬೂರಿ, ಸೋಬಾನೆ ಪದಗಳು, ಕೋಲಾಟ, ತಮಟೆ ಸೇರಿದಂತೆ 64 ಜನಪದ ಪ್ರಕಾರಗಳನ್ನು ಮತ್ತು ಕಲಾವಿದರನ್ನು ಹೊಂದಿರುವ ಪವಿತ್ರಸ್ಥಳವಾಗಿದೆ ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಜೈ ಭೀಮ್ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಎಂ.ಎನ್.ಜಯರಾಜ್ ಅಧ್ಯಕ್ಷತೆ ವಹಿಸಿದ್ದರು. ವಿಸ್ಮಯ ಕಲಾ ಬಳಗದ ಅಧ್ಯಕ್ಷ ಆರ್.ಎಂ.ಮಹದೇವಸ್ವಾಮಿ, ಎಂ.ಜಗದೀಶ್, ಮಲ್ಲೇಶ್, ದೇವಪ್ರಸಾದ್, ಶಾಂತಿ ಶ್ರೀನಿವಾಸ್, ನಾಗರಾಜಮೂರ್ತಿ, ಗಾಯಕಿ ನಾಗರತ್ನ ಸೇರಿದಂತೆ ಅನೇಕರು ಜಾನಪದ ಉತ್ಸವದಲ್ಲಿ ಜನಪದ ಗೀತೆಗಳನ್ನು ಹಾಡಿ ರಂಜಿಸಿದರು.
ಮುಖಂಡರಾದ ವಿನೋದ್ ಕುಮಾರ್, ಮಹದೇವ ಪಾಲ್ಗೊಂಡಿದ್ದರು.