ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿಗೆ ಯುಜಿಸಿ ಸ್ವಾಯತ್ತ ಸ್ಥಾನಮಾನ

KannadaprabhaNewsNetwork |  
Published : Jul 08, 2024, 12:33 AM IST
ಆಳ್ವಾಸ್ ಎಂಜಿನಿಯರಿಂಗ್  ಕಾಲೇಜಿಗೆ ಯುಜಿಸಿಯಿಂದ ಸ್ವಾಯತ್ತ ಸ್ಥಾನಮಾನ (ಅಟೋನೋಮಸ್)  | Kannada Prabha

ಸಾರಾಂಶ

ಇತ್ತೀಚೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮಂಗಳೂರು ವಿವಿ ಅಧೀನದಲ್ಲಿದ್ದ ಆಳ್ವಾಸ್ ಪದವಿ ಕಾಲೇಜು ೨೦೨೩-೨೪ನೇ ಶೈಕ್ಷಣಿಕ ವರ್ಷದಿಂದ ಸ್ವಾಯತ್ತ ಸ್ಥಾನಮಾನ ಪಡೆದುಕೊಂಡಿದೆ.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಮೂಡುಬಿದಿರೆ ತಾಲೂಕಿನ ಮಿಜಾರಿನಲ್ಲಿರುವ ‘ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜು’ (ಎಐಇಟಿ) ಸ್ವಾಯತ್ತ ಸ್ಥಾನಮಾನ ಪಡೆದಿದ್ದು, ೨೦೩೪-೩೫ನೇ ಸಾಲಿನ ವರೆಗೆ ಅನ್ವಯಿಸಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ನ್ಯಾಕ್‌ನ ಮೊದಲ ಸೈಕಲ್‌ನಲ್ಲೇ (ಓಂಂಅ) ಂ+ ಶ್ರೇಣಿಯನ್ನು ಸಿಜಿಪಿಎ ೩.೩೨ (೪ ಸ್ಕೇಲ್) ಗ್ರೇಡ್‌ನೊಂದಿಗೆ ೧೬ ಜನವರಿ ೨೦೨೮ರ ವರೆಗೆ ಅನ್ವಯವಾಗುವಂತೆ ಪಡೆದಿದೆ. ನಿರ್ಫ್ ಇನ್ನೋವೇಷನ್ ರ‍್ಯಾಂಕಿಂಗ್ ಅನ್ನು ೧೫೦ರಿಂದ ೩೦೦ ಬ್ಯಾಂಡ್‌ನಲ್ಲಿ ಪಡೆದಿದೆ. ಜೊತೆಯಲ್ಲಿ ಕಾಲೇಜಿನ ಹಲವು ಎಂಜಿನಿಯರಿಂಗ್‌ಗೆ ವಿಭಾಗಗಳು ರಾಷ್ಟ್ರೀಯ ಮಾನ್ಯತಾ ಮಂಡಳಿಯಿಂದ (ಓಃಂ) ಮಾನ್ಯತೆಯನ್ನು ಪಡೆದಿವೆ. ಬಹುರಾಷ್ಟ್ರೀಯ ಕಂಪೆನಿಗಳಾದ ಇನ್ಫೋಸಿಸ್, ಸ್ಟೇಲಿಯಂ, ಸ್ಟ್ರೆöÊಕಾನ್, ಬಿಟಾ ಸಿಸ್ಟಮ್ಸ್ ಇಂಡಿಯಾ ಪ್ರೆöÊ.ಲಿ. ಮತ್ತು ರಹ್ಮತ್-ಟೆಕ್, ಇಂಟರ್‌ನ್ಯಾಷನಲ್ ಎಫ್‌ಝಇ ಸಂಸ್ಥೆಗಳ ಘಟಕಗಳು ಕಾಲೇಜಿನ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿವೆ. ‘ಸ್ವಾಯತ್ತ’ದಿಂದ ಪ್ರಮುಖವಾಗಿ ‘ಪಠ್ಯಕ್ರಮ ನಮ್ಯತೆ’ (ಪ್ರಸ್ತುತ ಬೇಡಿಕೆಗೆ ಅನುಗುಣವಾದ ಉದ್ಯೋಗಾಧರಿತ ಪಠ್ಯಕ್ರಮ ರೂಪಿಸಲು ಅವಕಾಶ), ನವನವೀನ ಬೋಧನಾ ಕ್ರಮಗಳ ಅಳವಡಿಕೆ, ಶೈಕ್ಷಣಿಕ ಅವಧಿಯನ್ನು ಇನ್ನಷ್ಟು ಕಾಲಬದ್ಧ ಹಾಗೂ ಸುಸಂಘಟಿತವಾಗಿ ನಡೆಸಲು ಅವಕಾಶ, ಪರೀಕ್ಷಾ ಪ್ರಕ್ರಿಯೆಯಲ್ಲಿ ಸುಧಾರಣೆ, ಸಂಶೋಧನಾ ಅವಕಾಶಗಳ ಹೆಚ್ಚಳ, ಒಟ್ಟು ಗುಣಮಟ್ಟದ ಉನ್ನತೀಕರಣ, ಕೈಗಾರಿಕೆಗಳ ಜೊತೆ ಹೆಚ್ಚಿನ ಸಹಯೋಗ, ಉದ್ಯಮಶೀಲತಾ ಬೆಳವಣಿಗೆ, ಜಾಗತಿಕ ಮಾನ್ಯತೆಗೆ ನೆರವು ದೊರೆಯಲಿದೆಇತ್ತೀಚೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮಂಗಳೂರು ವಿವಿ ಅಧೀನದಲ್ಲಿದ್ದ ಆಳ್ವಾಸ್ ಪದವಿ ಕಾಲೇಜು ೨೦೨೩-೨೪ನೇ ಶೈಕ್ಷಣಿಕ ವರ್ಷದಿಂದ ಸ್ವಾಯತ್ತ ಸ್ಥಾನಮಾನ ಪಡೆದುಕೊಂಡಿದೆ. ಮಂಗಳೂರು ವಿವಿಯ ಸಂಯೋಜಿತ ಆಳ್ವಾಸ್ ಪದವಿ ಕಾಲೇಜು ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಧೀನದಲ್ಲಿದ್ದ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜುಗಳಿಗೆ ಇದೀಗ ಸ್ವಾಯತ್ತಾ ಸ್ಥಾನಮಾನ ಲಭಿಸಿರುವುದು ಮುಂದಿನ ದಿನಗಳಲ್ಲಿ ಈ ಶಿಕ್ಷಣ ಸಂಸ್ಥೆಗಳು ಗುಣಾತ್ಮಕ ಶಿಕ್ಷಣವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನೀಡಲು ಸಹಕಾರಿಯಾಗಲಿದೆ. ಪತ್ರಿಕಾಗೋಷ್ಠಿಯಲ್ಲಿ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಚರ‍್ಯ ಡಾ ಪೀಟರ್ ಫೆರ್ನಾಂಡೀಸ್, ಅಕಾಡೆಮಿಕ್ಸ್ ಡೀನ್ ಡಾ ದಿವಾಕರ ಶೆಟ್ಟಿ, ರಿಸರ್ಚ್ ಡೀನ್ ಡಾ ರಿಚರ್ಡ ಪಿಂಟೋ ಉಪಸ್ಥಿತರಿದ್ದರು.

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು