ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಮನೆಗಳಿಗೆ ನುಗ್ಗಿದ ಚರಂಡಿ ನೀರು
ಮೂರು ದಿನಗಳ ಹಿಂದೆ ಬಿದ್ದ ಬಾರಿ ಮಳೆಗೆ 9 ನೇ ವಾರ್ಡು ಹೈರಾಣಾಗಿ ಹೋಗಿದೆ. ಅವೈಜ್ಞಾನಿಕ ವಾಗಿ ನಿರ್ಮಿಸಿದ ಯುಜಿಡಿ ಚೇಂಬರ್ ಗಳಿಗೆ ನುಗ್ಗಿದ ನೀರು ಉಕ್ಕಿ ಚರಂಡಿಗಳ ಮೂಲಕ ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿವೆ ಮೂರು ದಿನಗಳಿಂದ ನಗರಸಭೆ ಅಧಿಕಾರಿಗಳಿಗೆ ಹೇಳಿದ್ರೂ ಎನೂ ಕ್ರಮ ಜರುಗಿಸಿಲ್ಲ ಎಂದು ಕುಪಿತಗೊಂಡ ನಾಗರೀಕರು ತಮ್ಮ ವಾರ್ಡಿನ ನಗರಸಭಾ ಸದಸ್ಯ ಆರ್.ಮಟಮಪ್ಪರೊಂದಿಗೆ ನಗರಸಭೆಗೆ ಮುತ್ತಿಗೆ ಹಾಕಿದರು.ವಾರದೊಳಗೆ ಸರಿಪಡಿಸುವ ಭರವಸೆಪ್ರತಿಭಟನಾಕಾರರ ಅಹವಾಲು ಸ್ವೀಕರಿಸಿದ ಪೌರಾಯುಕ್ತ ಮಂಜುನಾಥ್, ಕೂಡಲೆ ಸ್ಥಳಕ್ಕೆ ದಾವಿಸಿ ಎಲ್ಲೆಲ್ಲಿ ಎನೇನು ಸಮಸ್ಯೆಯಾಗುತ್ತಿದೆ ಎಂದು ಸ್ಥಳಕ್ಕೆ ತೆರಳಿ ವೀಕ್ಷಿಸಿದರು. ಬಳಿಕ ಇಲ್ಲಿಯ ಅವಾಂತರಗಳನ್ನು ಸರಿಪಡಿಸಲು ಸ್ವಲ್ಪ ಸಮಯ ಕೇಳಿದರು. ಅದಕ್ಕೆ ಒಪ್ಪದ ಕಾಲೋನಿ ವಾಸಿಗಳು ರೇಗಾಡಿದರು. ಕೊನೆಗೂ ಸಮಾದಾನಪಡಿಸಿದ ಪೌರಾಯುಕ್ತರು ಒಂದು ವಾರದೊಳಗೆ ದುರಸ್ತಿ ಮಾಡಿಸುವ ಬರವಸೆ ನೀಡಿದರು. ಪ್ರತಿಭಟನೆಯಲ್ಲಿ ನಗರಸಭಾ ಸದಸ್ಯ ಆರ್.ಮಟಮಪ್ಪ, ಪಟೇಲ್ ನಾರಾಯಣಸ್ವಾಮಿ, ಕೃಷ್ಣಪ್ಪ, ಚಂದ್ರಶೇಖರ್, ಐರನ್ ಮಂಜಮ್ಮ, ಜೈ ಕಾಂತಮ್ಮ, ಸೋಮಶೇಖರ್, ರಮೇಶ್, ಚಿಕ್ಕ ಬೈರಪ್ಪ, ಅಂಜನಮ್ಮ,ವಿನೋದ್, ನವೀನ್, ಮತ್ತಿತರರು ಇದ್ದರು.