ಬ್ರಹ್ಮಕಲಶ ಸೇವೆಗೆ ದೊರೆತ ಅವಕಾಶ: ಪ್ರತಾಪ ಸಿಂಹ ನಾಯಕ್

KannadaprabhaNewsNetwork |  
Published : Feb 28, 2026, 03:00 AM IST
ಉಜಿರೆ | Kannada Prabha

ಸಾರಾಂಶ

ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ, ವಿಜಯಗೋಪುರ ಲೋಕಾರ್ಪಣೆ, ನೂತನ ಬ್ರಹ್ಮರಥ ಹಾಗೂ ಪುಷ್ಪ ರಥ ಸಮರ್ಪಣಾ ಸಮಾರಂಭ ಮಾ 3 ರಿಂದ 11ರ ವರೆಗೆ ವಿವಿಧ ಧಾರ್ಮಿಕ,ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ತತ್ಸಂಬಂಧ ರಚಿಸಲಾದ ವಿವಿಧ ಸಮಿತಿಗಳ ಅಂತಿಮ ಹಂತದ ಸಿದ್ಧತಾ ತಯಾರಿ ಬಗ್ಗೆ ವಿಶೇಷ ಸಭೆ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ , ವಿ.ಪ.ಸದಸ್ಯ ಪ್ರತಾಪ ಸಿಂಹ ನಾಯಕ್ ಅವರ ಅಧ್ಯಕ್ಷತೆಯಲ್ಲಿ ಶ್ರೀ ರಾಮಕೃಷ್ಣ ಸಭಾಮಂಟಪದಲ್ಲಿ ನಡೆಯಿತು.

ಬೆಳ್ತಂಗಡಿ: ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ, ವಿಜಯಗೋಪುರ ಲೋಕಾರ್ಪಣೆ, ನೂತನ ಬ್ರಹ್ಮರಥ ಹಾಗೂ ಪುಷ್ಪ ರಥ ಸಮರ್ಪಣಾ ಸಮಾರಂಭ ಮಾ 3 ರಿಂದ 11ರ ವರೆಗೆ ವಿವಿಧ ಧಾರ್ಮಿಕ,ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ತತ್ಸಂಬಂಧ ರಚಿಸಲಾದ ವಿವಿಧ ಸಮಿತಿಗಳ ಅಂತಿಮ ಹಂತದ ಸಿದ್ಧತಾ ತಯಾರಿ ಬಗ್ಗೆ ವಿಶೇಷ ಸಭೆ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ , ವಿ.ಪ.ಸದಸ್ಯ ಪ್ರತಾಪ ಸಿಂಹ ನಾಯಕ್ ಅವರ ಅಧ್ಯಕ್ಷತೆಯಲ್ಲಿ ಶ್ರೀ ರಾಮಕೃಷ್ಣ ಸಭಾಮಂಟಪದಲ್ಲಿ ನಡೆಯಿತು. ಈ ಸಂದರ್ಭ ಮಾತನಾಡಿದ ಅವರು ಉಜಿರೆಯ ಬ್ರಹ್ಮಕಲಶೋತ್ಸವ ನಮ್ಮೆಲ್ಲರ ಭಕ್ತಿಯ ಸೇವೆಗೆ ದೊರೆತ ಅಪೂರ್ವ ಅವಕಾಶ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಸಂದರ್ಭ. ಊರಿನ ಸಂಭ್ರಮದ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಬಂದ ಅತಿಥಿಗಳನ್ನು ಗೌರವದಿಂದ ಸ್ವಾಗತಿಸಿ, ಯಾವುದೇ ಲೋಪವಾಗದಂತೆ ಬ್ರಹ್ಮಕಲಶ ಎಲ್ಲರ ಮನಸ್ಸಿನಲ್ಲಿ ಶಾಶ್ವತವಾಗಿ ನೆನಪಿನಲ್ಲುಳಿಯುವಂತೆ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕಿದೆ ಎಂದರು. ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯರು ಪ್ರಸ್ತಾವಿಸಿ ಬ್ರಹ್ಮಕಲಶೋತ್ಸವ ಐತಿಹಾಸಿಕ ಕಾರ್ಯಕ್ರಮವಾಗಿ ನಡೆಯಲಿದ್ದು ಎಲ್ಲ ಸಮಿತಿಯ ಸದಸ್ಯರು ನಿಸ್ವಾರ್ಥವಾಗಿ, ಭಕ್ತಿ, ಅರ್ಪಣಾ ಮನೋಭಾವದಿಂದ ಶ್ರೀ ಜನಾರ್ದನ ಸ್ವಾಮಿಯ ಸೇವಾ ಕಾರ್ಯದಲ್ಲಿ ತಮ್ಮನ್ನು ಪೂರ್ಣವಾಗಿ ತೊಡಗಿಸಿಕೊಂಡು ಮಹೋತ್ಸವದ ಯಶಸ್ಸಿಗೆ ಕಾರಣರಾಗಬೇಕೆಂದರು.

ನಿರಂತರ ಭಜನೆ

ಸುನಾದ ನಿರಂತರ ಭಜನಾ ಕಾರ್ಯಕ್ರಮದ ಬಗೆಗೆ ಪ್ರೊ.ಪ್ರಕಾಶ್ ಪ್ರಭು ಮಾತನಾಡಿ ಮಾ.4 ರಿಂದ 8 ದಿನಗಳ ಕಾಲ ಬೆಳಿಗ್ಗೆ 6.3೦ ರಿಂದ ಸಂಜೆ 6.3೦ ರವರೆಗೆ ಜಿಲ್ಲೆಯ 96 ಭಜನಾ ತಂಡಗಳಿಂದ ನಿರಂತರ ಸೂರ್ಯಾಸ್ತಮಾನ ಭಜನೆ ಹಾಗೂ ಮಾ.11ರಂದು ಸಂಜೆ 65 ಭಜನಾ ತಂಡಗಳಿಂದ ಭಜನೋತ್ಸವ ಹಾಗೂ ಮಾ.3 ರಂದು ಬೆಳಾಲು ಕ್ರಾಸ್ನಿಂದ ದೇವಸ್ಥಾನದವರೆಗೆ ನಗರ ಭಜನೆಯ ಭಜನೋತ್ಸವ ನಡೆಯಲಿದೆ ಎಂದರು.

ವಿವಿಧ ಸಮಿತಿಗಳು

ಸ್ವಾಗತ ಸಮಿತಿ ಯ ಬಗೆಗೆ ಪಾಂಡುರಂಗ ಬಾಳಿಗಾ, ಬೆಂಗಳೂರು ಸಮಿತಿಯ ಪರವಾಗಿ ವೆಂಕಟ್ರಮಣ ರಾವ್, ಆರ್ಥಿಕ ಸಮಿತಿ ಯ ಲಕ್ಷ್ಮಣ ಸಫಲ್ಯ, ಆಮಂತ್ರಣ ಪತ್ರಿಕೆ ವಿತರಣೆ ಕುರಿತು ಮೋಹನ ಶೆಟ್ಟಿಗಾರ್, ಮಾತೃ ಶಕ್ತಿ ಶಿಲಾ ಸಂಚಯನ ಕುರಿತು ವನಿತಾ ಶೆಟ್ಟಿ, ಪ್ರಸಾದ ತಯಾರಿ ಹಾಗೂ ವಿತರಣೆ ವ್ಯವಸ್ಥೆ ಬಗೆಗೆ ಮುರಲೀಕೃಷ್ಣ ಆಚಾರ್, ಸಾಂಸ್ಕೃತಿಕ ಹಾಗೂ ಸಭಾ ಕಾರ್ಯಕ್ರಮದ ಕುರಿತು ಡಾ.ಶ್ರೀಧರ ಭಟ್ ಮತ್ತು ಪ್ರಸಾದ್ ಬಿ ಎಸ್ , ಮಹಿಳಾ ಮತ್ತು ಸ್ವಯಂಸೇವಕ ಸಮಿತಿ ಕುರಿತು ವನಿತಾ ಶೆಟ್ಟಿ ಮತ್ತು ಸಂತೋಷ್ ಅತ್ತಾಜೆ, ಆಹಾರ ಸಮಿತಿ ವ್ಯವಸ್ಥೆ ಬಗೆಗೆ ಅರುಣಕುಮಾರ್ ಎಂ ಎಸ್ , ನೀರಾವರಿ ಮತ್ತು ವಿದ್ಯುತ್ ವ್ಯವಸ್ಥೆ ಕುರಿತು ರಾಧಾಕೃಷ್ಣ ಶೆಟ್ಟಿ, ವ್ಯಾಪಾರ ಮಳಿಗೆಗಳ ಕುರಿತು ಪ್ರಕಾಶ್ ಕುದ್ದಣ್ಣಾಯ, ಪೂರ್ಣಕುಂಭ ಸ್ವಾಗತ ಬಗೆಗೆ ಪುಷ್ಪಾವತಿ ಆರ್ ಶೆಟ್ಟಿ, ಮಾಧ್ಯಮ ಸಮಿತಿ ಬಗೆಗೆ ಶ್ರೀನಿವಾಸ ತಂತ್ರಿ, ದೃಶ್ಯ ಮಾಧ್ಯಮ ಕುರಿತು ದಿನೇಶ್ ಕೋಟಿಯಾನ್ , ಹಸಿರುವಾಣಿ ಹೊರೆ ಕಾಣಿಕೆ ವ್ಯವಸ್ಥೆ ಮತ್ತು ವಿಶೇಷವಾಗಿ ಕೊಪ್ಪರಿಗೆಗೆ ಅಕ್ಕಿ ಸಮರ್ಪಿಸುವ ಸೇವೆ ಕುರಿತು ರವಿಕುಮಾರ್ ಬರಮೇಲು ,ಪಾನೀಯ ವ್ಯವಸ್ಥೆ ಕುರಿತು ಯಶೋಧರ, ವಾಹನ ನಿಲುಗಡೆ ವ್ಯವಸ್ಥೆ ಕುರಿತು ಸುಧಾಕರ, ಅತಿಥಿ ಸತ್ಕಾರ ಬಗೆಗೆ ಪ್ರೊ.ಟಿ.ಕೃಷ್ಣಮೂರ್ತಿ, ಮುದ್ರಣ ವ್ಯವಸ್ಥೆ ಕುರಿತು ಶೇಖರ್ ಟಿ., ಉಗ್ರಾಣ ಸಮಿತಿ ವ್ಯವಸ್ಥೆ ಕುರಿತು ರಾಮಣ್ಣ ಗೌಡ, ಚಪ್ಪರ ಸಮಿತಿ ವ್ಯವಸ್ಥೆ ಕುರಿತು ಪ್ರಕಾಶ್ ಗೌಡ ಅಪ್ರಮೇಯ, ಕಾರ್ಯಾಲಯ ವ್ಯವಸ್ಥೆ ಕುರಿತು ಸಂಜೀವ ಶೆಟ್ಟಿ ಕುಂಟಿನಿ ಕಾರ್ಯಗಳ ಪ್ರಗತಿಯ ಬಗೆಗೆ ಮಾಹಿತಿ ನೀಡಿದರು.

ಸುದರ್ಶನ ಸಭಾಭವನ ಹಾಗೂ ಅನ್ನಛತ್ರದ ವ್ಯವಸ್ಥೆ ಬಗೆಗೆ ಪ್ರಧಾನ ಸಂಚಾಲಕ ಕೆ.ಮೋಹನ ಕುಮಾರ್ ಮಾಹಿತಿ ನೀಡಿ ಕಾರ್ಯಕ್ರಮಗಳ ಯಶಸ್ಸಿನ ಹಿಂದೆ ತೆರೆಯ ಮರೆಯಲ್ಲಿ ಶ್ರಮದಾನ ಮಾಡಿ, ದುಡಿದವರ ಪರಿಶ್ರಮ ಗಣನೀಯವಾದುದು. ಮಾ 11ರಂದು ಕೊನೆ ದಿನ ಸಂಜೆ 4.3೦ಕ್ಕೆ ಗಣ್ಯ ಅತಿಥಿಗಳನ್ನು ಎಸ್ ಡಿ ಎಂ ಕಾಲೇಜು ಮುಂಭಾಗದಿಂದ ಬೃಹತ್ ಮೆರವಣಿಗೆಯಲ್ಲಿಧರ್ಮಯಾನದ ಮೂಲಕ ವೇದಿಕೆಗೆ ಬರಮಾಡಿಕೊಳ್ಳುವ ಯೋಜನೆಯನ್ನು ಪ್ರಕಟಿಸಿದರು. ವೇದಿಕೆಯಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಯಶೋಧರ ಉಪಸ್ಥಿತರಿದ್ದರು. ಸಮಿತಿ ಕಾರ್ಯದರ್ಶಿ ರವೀಂದ್ರ ಶೆಟ್ಟಿ ನಿರೂಪಿಸಿದರು ಮತ್ತೋರ್ವ ಕಾರ್ಯದರ್ಶಿ ಸಂಜೀವ ಶೆಟ್ಟಿ ಕುಂಟಿನಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೇಸಿಗೆಯಲ್ಲಿ ಕುಡಿವ ನೀರಿನ ಬಗ್ಗೆ ಎಚ್ಚರವಿರಲಿ
ಶಾಲಾ ಕಾಲೇಜುಗಳು ಮೊದಲು ನಶಾಮುಕ್ತವಾಗಲಿ:ಡಾ.ಭಗವಾನ್