ಬೆಳ್ತಂಗಡಿ: ದೇವರಿಗೆ ಭಕ್ತನ ಕರ್ತವ್ಯ ಪ್ರೀತಿಯಾಗುತ್ತದೆ ಹೊರತು ಸಂಪತ್ತಲ್ಲ ಎಂದು ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು
ಶ್ರದ್ಧೆ ನಂಬಿಕೆ ಭಕ್ತಿಯ ಮೂಲವಾಗಿದ್ದು, ಆಸ್ತಿಕತೆ ಎಂಬ ಸಂಪತ್ತನ್ನು ಕಾಪಾಡಿಕೊಳ್ಳಬೇಕು, ದೇವರು ಕೊಟ್ಟ ಸಂಪತ್ತನ್ನು ಪುಣ್ಯಕಾರ್ಯಗಳಿಗೆ ಉಪಯೋಗಿಸಿಕೊಳ್ಳುವುದುರೊಂದಿಗೆ ಹಿರಿಯರ ತ್ಯಾಗ ಪುಣ್ಯವನ್ನು ಸ್ಮರಿಸುತ್ತಾ ತಾಯಿ ನೆಲದ ಬಗ್ಗೆ ಗೌರವ ಇಟ್ಟುಕೊಳ್ಳಬೇಕು. ನಾನು ನನ್ನದು ಎಂಬ ಅಹಂಭಾವದಿಂದ ಹೊರ ಬಂದು ಕಾಲದ ಪ್ರವಾಹವನ್ನು ಎದುರಿಸುತ್ತಾ ಗೌರವಯುತ ಜೀವನವನ್ನು ನಡೆಸಬೇಕು ಎಂದು ಹೇಳಿದರು
ಪುತ್ತೂರು ಜಿ.ಎಲ್. ಆಚಾರ್ಯ ಸಮೂಹ ಸಂಸ್ಥೆಗಳ ಚೇರ್ಮನ್ ಬಲರಾಮ ಆಚಾರ್ಯ ಮಾತನಾಡಿ ಉಜಿರೆ ಸಾಮಾಜಿಕ, ಸಾಂಸ್ಕೃತಿಕ ಶೈಕ್ಷಣಿಕ ನಗರಿಯಾಗಿ ನ್ಯಾಯಯುತವಾಗಿ ಬೇರೆ ಬೇರೆ ರೀತಿಯಲ್ಲಿ ಗುರುತಿಸಿಕೊಂಡಿದೆ. ಇಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವ ಅತ್ಯಂತ ಅಚ್ಚುಕಟ್ಟಿನ ಕಾರ್ಯಕ್ರಮವಾಗಿದೆ. ಇಲ್ಲಿ ಸಮಾಜವನ್ನು ಒಂದುಗೂಡಿಸುವ ಕೆಲಸ ನಡೆಯುತ್ತಿರುವುದು ಅತ್ಯಂತ ಶ್ಲಾಘನೀಯ ಎಂದು ಹೇಳಿದರು.ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರತಾಪಸಿಂಹ ನಾಯಕ್ ಮಾತನಾಡಿ ಬ್ರಹ್ಮಕಲಶ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರು ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಸೇವೆ ನೀಡಿದ್ದಾರೆ. ಅಳಿಲ ಸೇವೆಯು ಅತ್ಯಂತ ಪ್ರಾಮುಖ್ಯವಾಗಿದ್ದು ಇದು ಪ್ರತಿ ಕಾರ್ಯದ ಅಡಿಪಾಯವಾಗಿದೆ. ದೇವರು ಭಕ್ತನಿಂದ ತನ್ನ ಇಚ್ಛೆಯಂತೆ ಸೇವೆ ಮಾಡಿಸಿಕೊಳ್ಳುತ್ತಾನೆ ಎಂದು ಹೇಳಿದರು. ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಶಶಿಧರ ಶೆಟ್ಟಿ ಬರೋಡ, ವಿಶ್ವಹಿಂದೂ ಪರಿಷತ್ ಬೆಳ್ತಂಗಡಿ ಪ್ರಖಂಡದ ಅಧ್ಯಕ್ಷ ವಿಷ್ಣು ಮರಾಠೆ, ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಬೆಳ್ತಂಗಡಿ ವಿಜಯ ಕ್ರೆಡಿಟ್ ಕೊ- ಆಪರೇಟಿವ್ ಸೊಸೈಟಿ ಉಪಾಧ್ಯಕ್ಷ ಜಯಂತ ಶೆಟ್ಟಿ, ಗುರುವಾಯನಕೆರೆ ಸನಿಹದ ಶಿಕ್ಷಣೋದ್ಯಮಿ ಸುಮಂತ್ ಕುಮಾರ್ ಜೈನ್, ಜಿಲ್ಲಾ ತುಳು ಶಿವಳ್ಳಿ ಸಭಾ ಅಧ್ಯಕ್ಷ ಡಾ. ಎಂ.ಎಂ.ದಯಾಕರ್ ಬೆಳ್ತಂಗಡಿ ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ. ಎನ್. ಜನಾರ್ದನ, ಉಜಿರೆ ಎಸ್ ಡಿ ಎಂ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ಜನಾರ್ದನ, ಉದ್ಯಮಿಗಳಾದ ಪ್ರವೀಣ್ ಕುಮಾರ್, ಇಂದ್ರ, ಜಿ. ಪ್ರಭಾತ್ ಭಟ್, ಕನ್ಯಾಡಿ ಶ್ರೀ ಅಯ್ಯಪ್ಪ ಕ್ಷೇತ್ರದ ಅಧ್ಯಕ್ಷ ಹರೀಶ್ ರಾವ್, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು, ಬೆಳ್ತಂಗಡಿ ಕರ್ಹಾಡ ಬ್ರಾಹ್ಮಣ ಸಭಾ ಅಧ್ಯಕ್ಷ ವಿಷ್ಣು ಭಟ್, ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ. ಸುವರ್ಣ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ತುಕಾರಾಮ ಬಿ. ಉಪಸ್ಥಿತರಿದ್ದರು. ಬ್ರಹ್ಮರಕೂಟ್ಲು ಬಿ. ಎಸ್. ಬ್ಯಾಂಡ್ ನ ಬಿ. ಭೋಜ ಮತ್ತು ತಂಡದವರನ್ನು ಸನ್ಮಾನಿಸಲಾಯಿತು.