ಉಕಗೆ ಆಕ್ಸಫರ್ಡ್ ನೀಟ್ ಅಕಾಡೆಮಿ ನಂ.1

KannadaprabhaNewsNetwork |  
Published : Jun 17, 2025, 12:35 AM IST
ಎಂ.ಎಸ್.ಪಾಟೀಲ | Kannada Prabha

ಸಾರಾಂಶ

ಸಂಸ್ಥೆಯ ನೀಟ್ ವಿಭಾಗವು ಕಳೆದ ಕೆಲ ವರ್ಷಗಳಿಂದ ಸತತ 150ಕ್ಕೂ ಹೆಚ್ಚು ಮೆಡಿಕಲ್ ಸೀಟ್ ಗಿಟ್ಟಿಸುತ್ತಿದೆ.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ/ನಾಲತವಾಡ

ಸಮೀಪದ ನಾಗರಬೆಟ್ಟ ಗುಡ್ಡದ ಬಳಿ ಇರುವ ಆಕ್ಸಫರ್ಡ್ ಪಾಟೀಲ್ಸ್ ಸಮೂಹ ಶಿಕ್ಷಣ ಸಂಸ್ಥೆಯ ಆಕ್ಸಫರ್ಡ್ ಪಾಟೀಲ್ಸ್ ನೀಟ್ ಅಕಾಡೆಮಿಯ 170ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೆಡಿಕಲ್ ಶಿಕ್ಷಣ ಎಂಬಿಬಿಎಸ್ ಪದವಿಗೆ ಪ್ರವೇಶ ಪಡೆದುಕೊಳ್ಳುವ ಅರ್ಹತೆ ಗಳಿಸಿದ್ದಾರೆ. ಕಳೆದ ವರ್ಷದ ಸಾಧನೆಯನ್ನು ಈ ವರ್ಷವೂ ನಾವು ಮುಂದುವರೆಸಿದ್ದೇವೆ. ಉತ್ತರ ಕರ್ನಾಟಕದ ನಂಬರ್ ಒನ್ ನೀಟ್ ತರಬೇತಿ ಅಕಾಡೆಮಿಯ ಹೆಗ್ಗಳಿಕೆಯನ್ನು ಈ ವರ್ಷವೂ ಉಳಿಸಿಕೊಂಡಿದ್ದೇವೆ ಎಂದು ಸಂಸ್ಥೆಯ ಅಧ್ಯಕ್ಷ ಎಂ.ಎಸ್.ಪಾಟೀಲ, ಆಡಳಿತಾಧಿಕಾರಿ ಅಮಿತ್‌ಗೌಡ ಪಾಟೀಲ ತಿಳಿಸಿದರು.

ನೀಟ್ ಫಲಿತಾಂಶ ಪ್ರಕಟಗೊಂಡ ಹಿನ್ನೆಲೆ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಭಾಗದ ನೈಸರ್ಗಿಕವಾಗಿ ಉತ್ತಮ ಪರಿಸರದಲ್ಲಿ ತಲೆಎತ್ತಿ ನಿಂತಿರುವ ನಮ್ಮ ಸಂಸ್ಥೆಯ ಪ್ರೌಢಶಾಲಾ ವಿಭಾಗ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ರ್‍ಯಾಂಕ್ ಪಡೆದುಕೊಂಡಿತ್ತು. ಪಿಯುಸಿ ವಿಜ್ಞಾನ ವಿಭಾಗವು ಪಿಯುಸಿ ಪರೀಕ್ಷೆಯಲ್ಲಿ ರಾಜ್ಯವೇ ಗುರುತಿಸುವಂತಹ ಸಾಧನೆ ಮಾಡಿತ್ತು. ಇದೀಗ ಅತ್ಯಂತ ಕಠಿಣವಾಗಿದ್ದ ನೀಟ್ ಪರೀಕ್ಷೆಯಲ್ಲೂ ನಮ್ಮ ವಿದ್ಯಾರ್ಥಿಗಳು ಸಾಧನೆ ತೋರುವಲ್ಲಿ ಹಿಂದೆ ಬಿದ್ದಿಲ್ಲ. ಇದು ನಮ್ಮಲ್ಲಿ ಸಿಗುತ್ತಿರುವ ಗುಣಮಟ್ಟದ ಶಿಕ್ಷಣಕ್ಕೆ ಕನ್ನಡಿ ಹಿಡಿದಂತಾಗಿದೆ ಎಂದರು.

ನಮ್ಮ ಸಂಸ್ಥೆಯ ನೀಟ್ ವಿಭಾಗವು ಕಳೆದ ಕೆಲ ವರ್ಷಗಳಿಂದ ಸತತ 150ಕ್ಕೂ ಹೆಚ್ಚು ಮೆಡಿಕಲ್ ಸೀಟ್ ಗಿಟ್ಟಿಸುತ್ತಿದೆ. ಕಳೆದ ವರ್ಷವೂ 170ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೆಡಿಕಲ್ ಸೀಟು ಪಡೆದುಕೊಂಡಿದ್ದರು. ಈ ವರ್ಷವೂ ಅಷ್ಟೇ ಪ್ರಮಾಣದ ವಿದ್ಯಾರ್ಥಿಗಳು ಮೆಡಿಕಲ್ ಸೀಟ್ ಪಡೆದುಕೊಳ್ಳುವ ಮೂಲಕ ಸಾಧನೆ ಮುಂದುವರೆಸಿದ್ದಾರೆ. ನಮ್ಮಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ನಮ್ಮ ನಿರೀಕ್ಷೆ ಹುಸಿಗೊಳಿಸಲಿಲ್ಲ. ಸಾಧನೆ ತೋರಿದ ವಿದ್ಯಾರ್ಥಿಗಳಿಗೆ, ಅತ್ಯುತ್ತಮ ಮಾರ್ಗದರ್ಶನ ನೀಡಿದ ಉಪನ್ಯಾಸಕ ವೃಂದಕ್ಕೆ ಸಂಸ್ಥೆಯ ವತಿಯಿಂದ ಅಭಿನಂದಿಸುತ್ತೇವೆ ಎಂದರು.

ಕಳೆದ ಕೆಲವು ವರ್ಷಗಳಿಂದ ನಮ್ಮ ನೀಟ್ ಅಕಾಡೆಮಿ ಉತ್ತರ ಕರ್ನಾಟಕದಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ. ಈ ವರ್ಷವೂ ನಂಬರ್ ಒನ್ ಸ್ಥಾನವನ್ನು ಉಳಿಸಿಕೊಂಡಿದ್ದೇವೆ. ಈ ಬಾರಿ ನೀಟ್ ಪರೀಕ್ಷೆ ಅತ್ಯಂತ ಕಠಿಣವಾಗಿತ್ತು. ಪರೀಕ್ಷೆ ಮುಗಿದ ಮೇಲೆ ಫಲಿತಾಂಶ ಪ್ರಕಟಣೆ ವಿಳಂಬಗೊಂಡಿತಾದರೂ ನಮ್ಮ ವಿದ್ಯಾರ್ಥಿಗಳ ಸಾಧನಾ ಶಕ್ತಿಯ ಮೇಲೆ, ನಮ್ಮ ತರಬೇತಿಯ ಮೇಲೆ ನಮಗೆ ಹೆಚ್ಚು ವಿಶ್ವಾಸ ಇತ್ತು. ಅದೀಗ ಈಡೇರಿದಂತಾಗಿದೆ ಎಂದರು.

ಮುಂದಿನ ನೀಟ್‌ನಲ್ಲಿ ನಮ್ಮ ಗುರಿ 200-250ರವರೆಗೆ ಮೆಡಿಕಲ್ ಸೀಟು ಪಡೆಯುವಂಥ ವಿದ್ಯಾರ್ಥಿಗಳನ್ನು ತಯಾರಿಸುವುದಾಗಿದೆ. ಇದಕ್ಕೆ ಪೂರಕವಾಗಿ ನಮ್ಮಲ್ಲಿನ ನೀಟ್ ತರಬೇತಿಯ ಗುಣಮಟ್ಟವನ್ನು ಹೆಚ್ಚಿಸಿದ್ದೇವೆ. ಪಿಯುಸಿ ಹಂತದಲ್ಲೇ ನೀಟ್ ತರಬೇತಿ ನೀಡುತ್ತಿರುವುದು ಮಾತ್ರವಲ್ಲದೆ ನಮ್ಮಲ್ಲಿ ಪ್ರೌಢಶಾಲೆ ಹಂತದಲ್ಲೂ ಫೌಂಡೇಶನ್ ಕೋರ್ಸ್‌ ನಡೆಸುವ ಮೂಲಕ ಪ್ರಾರಂಭದ ಹಂತದಿಂದಲೇ ನೀಟ್‌ಗಾಗಿ ವಿದ್ಯಾರ್ಥಿಗಳನ್ನು ತಯಾರಿಸುವ ಯೋಜನೆ ಜಾರಿಯಲ್ಲಿದೆ. ಈ ಬಾರಿಯ ಫಲಿತಾಂಶ ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದರು.

ಈ ವೇಳೆ ಸಂಸ್ಥೆಯ ನಿರ್ದೇಶಕರಾದ ವಿಜಯಕುಮಾರ ಪಾಟೀಲ, ದರ್ಶನಗೌಡ ಪಾಟೀಲ, ಪ್ರಾಂಶುಪಾಲ ರೇವಣಸಿದ್ದ ಚಲವಾದಿ (ಮುರಾಳ), ರಾಜಶೇಖರ ಹಿರೇಮಠ, ಮಂಜುನಾಥ ಮಂಕಣಿ, ಮಹಾಂತೇಶ ಬಿರಾದಾರ, ಸಂಗಮೇಶ ಬಡಿಗೇರ, ನೀಟ್ ಪಾಂಡಿತ್ಯ ಹೊಂದಿದ ಉಪನ್ಯಾಸಕರು ಇದ್ದರು.

ಅತಿಹೆಚ್ಚು ಅಂಕ ಗಳಿಸಿದ ನೀಟ್ ಸಾಧಕರು

ಆಕಾಶ್ ಜಾಧವ (720ಕ್ಕೆ 604), ಅಮೃತ ಹಡಗಲಿ (588), ಆದಿತ್ಯ ಬಿರಾದಾರ (576), ಶ್ರೇಯಸ್ ಮದ್ದರಕಿ (572), ವಿಶ್ವನಾಥ ಸಜ್ಜನ (569), ಸಂಪತ್‌ಕುಮಾರ ಹುಗ್ಗಿ (569), ಪ್ರಾಂಜಲ ಕಸಬೇಗೌಡರ (561), ಹೊನ್ನಲಿಂಗ ಸಾಲೋಟಗಿ (555), ಸಮರ್ಥ ಇಂಗಳೇಶ್ವರ (555), ಸದಾಶಿವ ಹಡಗಲಿ (553), ಸಂಜಯ್ ನಾಗರಾಳ (547), ವೆಂಕನಗೌಡ ಪಾಟೀಲ (547), ಸಿಂಧೂ ಪಾಟೀಲ (547), ಸಿದ್ದನಗೌಡ ಏವೂರ (539), ಶರತ್ ಜೋಗಿ (538) ಈ ವಿದ್ಯಾರ್ಥಿಗಳು ನೀಟ್‌ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ನಾಗರಬೆಟ್ಟ ಕೇಂದ್ರ ಸ್ಥಾನವಾಗಿದ್ದು ಮುದ್ದೇಬಿಹಾಳ ಮತ್ತು ಬಾಗಲಕೋಟೆ ನಗರಗಳಲ್ಲೂ ನೀಟ್ ತರಬೇತಿ ಪ್ರಾರಂಭಿಸಿದ್ದೇವೆ. ನಮ್ಮ ಸಂಸ್ಥೆಯ ಪ್ರೌಢಶಾಲೆ, ಪಿಯು ಸೈನ್ಸ್ ಕಾಲೇಜು ನೀಟ್‌ಗೆ ಪೂರಕ ತರಬೇತಿ ನೀಡುವಂತಹದ್ದಾಗಿದೆ. ಗ್ರಾಮೀಣ ಪ್ರತಿಭೆಗಳಿಗೆ ನ್ಯಾಯ ದೊರಕಿಸಿಕೊಡುವ ನಮ್ಮ ಪ್ರಯತ್ನ ನಿರಂತರವಾಗಿರಲಿದೆ. ಅಮಿತ್‌ಗೌಡ ಪಾಟೀಲ, ಆಡಳಿತಾಧಿಕಾರಿ, ಆಕ್ಸಫರ್ಡ್ ಸಮೂಹ ಶಿಕ್ಷಣ ಸಂಸ್ಥೆ, ನಾಗರಬೆಟ್ಟ

ಪ್ರತಿಭೆಗಳಿಗೆ ನ್ಯಾಯ ಒದಗಿಸುವ ನಮ್ಮ ಗುರಿ ಸಾಧನೆಯಲ್ಲಿ ನಾವು ಯಶಸ್ಸು ಕಾಣುತ್ತಿದ್ದೇವೆ. ವಾರ್ಷಿಕ ಕೋಟಿ ರು.ಗಳಿಗೂ ಹೆಚ್ಚು ಶಿಷ್ಯವೇತನವನ್ನು ನಮ್ಮಲ್ಲಿ ಕಲಿಯುವ ಪ್ರತಿಭಾವಂತರಿಗೆ ನೀಡುತ್ತಿದ್ದೇವೆ. ಲಾಭದ ಅಪೇಕ್ಷೆಯಿಂದ ಸಂಸ್ಥೆ ನಡೆಸುತ್ತಿಲ್ಲ. ಪ್ರತಿಭಾವಂತರ ಭವಿಷ್ಯದ ಬದುಕು ರೂಪಿಸಲು ನೆರವಾಗುವುದರಲ್ಲಿ ತೃಪ್ತಿ ಕಾಣುತ್ತೇವೆ.

ಎಂ.ಎಸ್.ಪಾಟೀಲ, ಅಧ್ಯಕ್ಷರು, ಆಕ್ಸಫರ್ಡ್ ಪಾಟೀಲ್ಸ್ ಸಮೂಹ ಶಿಕ್ಷಣ ಸಂಸ್ಥೆ, ನಾಗರಬೆಟ್ಟ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ