ಪಿಎಲ್ಡಿ ಬ್ಯಾಂಕ್ ಅಧ್ಯಕ್ಷರಾಗಿ ಉಮೇಶ ಪಾಟೀಲ ಆಯ್ಕೆ

KannadaprabhaNewsNetwork |  
Published : Jan 04, 2025, 12:31 AM IST
ಬೈಲಹೊಂಗಲ ಪಿಎಲ್ಡಿ ಬ್ಯಾಂಕಿನ ಅಧ್ಯಕ್ಷರಾಗಿ ಉಮೇಶ  ಪಾಟೀಲ, ಮರಿಕಟ್ಟಿ, ಉಪಾಧ್ಯಕ್ಷರಾಗಿ ಶಿವಾನಂದ  ಕಲ್ಲೂರ ಅವರನ್ನು ಸನ್ಮಾನಿಸಲಾಯತು. ಜಿಲ್ಲಾ ನಿರ್ದೇಶಕ ರಾಜು ಭೈರುಗೋಳ,ಬ ಶಂಕರಗೌಡ ಪಾಟೀಲ, ಪರ್ವತಗೌಡ  ಪಾಟೀಲ ಇತರರು ಇದ್ದರು. | Kannada Prabha

ಸಾರಾಂಶ

ಬೈಲಹೊಂಗಲ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕಿನ (ಪಿಎಲ್ಡಿ) ಅಧ್ಯಕ್ಷರಾಗಿ ನಾಗನೂರ ಭಾಗದ ನಾಗನೂರ ಗ್ರಾಮದ ಉಮೇಶ ಪಾಟೀಲ ಅವಿರೋಧ ಆಯ್ಕೆಯಾದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕಿನ (ಪಿಎಲ್ಡಿ) ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಚುನಾವಣೆ ಶುಕ್ರವಾರ ಜರುಗಿತು.

ಅವಿರೋಧವಾಗಿ ಆಯ್ಕೆಯಾಗಿದ್ದ ನಾಗನೂರ ಭಾಗದ ನಾಗನೂರ ಗ್ರಾಮದ ಉಮೇಶ ಪಾಟೀಲ ಅಧ್ಯಕ್ಷರಾಗಿ ಹಾಗೂ ಮರಿಕಟ್ಟಿ ಭಾಗದ

ನಾವಲಗಟ್ಟಿ ಗ್ರಾಮದ ಶಿವಾನಂದ ಕಲ್ಲೂರ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಅವಿರೋಧ ಆಯ್ಕೆ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಹಾಗೂ ಚನ್ನಮ್ಮ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಇವರ ಮಾರ್ಗದರ್ಶನದಲ್ಲಿ ನಡೆಯಿತು.

ಅಧ್ಯಕ್ಷ ಉಮೇಶ ಪಾಟೀಲ ಮಾತನಾಡಿ, ಆಡಳಿತ ಮಂಡಳಿಯ ಸಹಕಾರದೊಂದಿಗೆ ರೈತ ಸದಸ್ಯರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.

ಬ್ಯಾಂಕಿನ ನೂತನ ನಿರ್ದೇಶಕರಾದ ಶಂಕರಗೌಡ ಪಾಟೀಲ, ಪರ್ವತಗೌಡ ಪಾಟೀಲ, ಶ್ರೀಶೈಲ ಯಡಳ್ಳಿ, ಶಂಕರಕುಮಾರ ಚಿಟ್ಟಿ, ಯಲ್ಲಪ್ಪ ಕೌಜಲಗಿ, ಅಕ್ಷರ ಆನಿಕಿವಿ, ಜಗದೀಶ ಬಜೇರಿ, ರುದ್ರಗೌಡ ಪಾಟೀಲ, ಮಾಲತಿ ಶಿವನಗೌಡ ಪಾಟೀಲ, ಲಕ್ಷ್ಮಪ್ಪ ಮಾಸ್ತಮರ್ಡಿ, ವಿರೇಶ ಏಕ್ಕೇರಿ, ಆನಂದ ಮೂಗಿ ಕಸ್ಕಾರ್ಡ್‌ ಬ್ಯಾಂಕಿನ ಜಿಲ್ಲಾ ನಿರ್ದೇಶಕ ರಾಜು ಭೈರುಗೋಳ ವ್ಯವಸ್ಥಾಪಕ ಎಂ.ಟಿ. ಗಾಣಿಗೇರ ಸಿಬ್ಬಂದಿ ಇತರರು ಇದ್ದರು.

ಸಹಕಾರಿ ಸಂಘಗಳ ಸಹಾಯಕ ನಿಬಂಧಕಿ ಶಾಹೀನ್‌ ಅಕ್ತರ್‌ ಚುನಾವಣಾಧಿಕಾರಿಗಳಾಗಿ ಹಾಗೂ ರೇಶ್ಮಾ ಮಕಾನದಾರ ಸಹಾಯಕ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ಸರ್ಕಾರದ ಯೋಜನೆಗಳನ್ನು ರೈತ ಸದಸ್ಯರಿಗೆ ವ್ಯವಸ್ಥತವಾಗಿ ಮುಟ್ಡಿಸುತ್ತಾ, ತಾಲೂಕು ಮಟ್ಟದ ಬ್ಯಾಂಕಿನ ಪ್ರಗತಿಗೆ ಶ್ರಮಿಸಬೇಕು.

-ಡಾ.ವಿಶ್ವನಾಥ ಪಾಟೀಲ ಮಾಜಿ ಶಾಸಕರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!