ಶಹಾಪುರ: ಬೆಳೆನಷ್ಟದಿಂದ ನೊಂದಿದ್ದ ರೈತನೊಬ್ಬ, ಸಾಲದ ಬಾಧೆಯಿಂದ ಆತಂಕಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ದರ್ಶನಾಪುರ ಗ್ರಾಮದಲ್ಲಿ ವರದಿಯಾಗಿದೆ. ಗ್ರಾಮದ ರೈತ ಚಂದ್ರಕಾಂತ್ (37) ಮಾ.12 ಬುಧವಾರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ರೈತನ ಹೆಸರಲ್ಲಿ ದರ್ಶನಾಪುರ ಗ್ರಾಮದಲ್ಲಿ 2 ಎಕರೆ, ಹಾರಣಗೇರಾ ಸೀಮೆಯಲ್ಲಿ 2 ಎಕರೆ ಜಮೀನಿದ್ದು, 15ಲಕ್ಷ ರು. ಕೈಸಾಲ, 6.80 ಲಕ್ಷಕ್ಕೆ ಖಾಸಗಿ ವ್ಯಕ್ತಿಯೊಬ್ಬರಿಗೆ ಭೂ ಸ್ವಾಧೀನ ರಹಿತ ಒತ್ತಿ ರಜಿಸ್ಟರ್ ಮಾಡಲಾಗಿದೆ. ಹಾಗೂ ಗೋಗಿಯ ಎಸ್ಬಿಐ ಬ್ಯಾಂಕಿನಲ್ಲಿ ಸಾಲ ಇದೆ ಎನ್ನಲಾಗಿದೆ. ಗೋಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಗ್ರಾಮ ಆಡಳಿತ ಅಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ತನಿಖೆ ನಡೆಸಲಾಗುತ್ತದೆ ಎಂದು ಪಿಎಸ್ಐ ದೇವೇಂದ್ರ ರೆಡ್ಡಿ ತಿಳಿಸಿದ್ದಾರೆ.
ಫೋಟೊ: ಆತ್ಮಹತ್ಯೆ ಮಾಡಿಕೊಂಡ ದರ್ಶನಾಪೂರ ಗ್ರಾಮದ ರೈತ ಚಂದ್ರಕಾಂತ್.
13ವೈಡಿಆರ್6