ಹೊಣೆಗಾರಿಕೆ ಇಲ್ಲದ ಡಿಜಿಟಲ್‌ ಮಾಧ್ಯಮ ಕೂಡ ಕೆಟ್ಟದ್ದು

KannadaprabhaNewsNetwork |  
Published : Sep 07, 2026, 02:00 AM IST
6ಎಚ್ಎಸ್ಎನ್15:  | Kannada Prabha

ಸಾರಾಂಶ

ಡಿಜಿಟಲ್ ಮಾಧ್ಯಮವನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಂಡರೆ ಯಾವುದೇ ಅಭ್ಯಂತರ ಇಲ್ಲ, ಆದರೆ ಯಾರದೋ ಮರ್ಯಾದೆ ತೆಗೆಯಲು, ತೇಜೋವಧೆ ಮಾಡಲು ಬಳಸಿಕೊಳ್ಳಬಾರದು. ಏಕೆಂದರೆ ಇದು ಎಷ್ಟು ಪರಿಣಾಮ ಕಾರಿಯೋ ಅಷ್ಟೇ ಭಯಾನಕವೂ ಆಗಬಹುದು ಎಂದು ಎಚ್ಚರಿಸಿದರು. ಯಾರದೋ ವಿರುದ್ಧ ಸುದ್ದಿ ಪ್ರಕಟಿಸಿದರೆ ಅವರ ಅಭಿಪ್ರಾಯವನ್ನೂ ಹಾಕಬೇಕು. ಅವರ ಸಮರ್ಥನೆಗೆ ಅವಕಾಶ ಕೊಡಲ್ಲ ಅಂದ್ರೆ ಹೇಗೆ ಎಂದು ಪ್ರಶ್ನಿಸಿದರು. ಮಾಧ್ಯಮ ನೈತಿಕವಾಗಿರಬೇಕು.ವೈಯಕ್ತಿಕ ಹಿತಾಸಕ್ತಿಯಿಂದ ಸುದ್ದಿ ಮಾಡುವುದು ತಪ್ಪು ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಡಿಜಿಟಲ್ ಮಾಧ್ಯಮದಿಂದ ಒಳ್ಳೆಯದೂ ಇದೆ, ಹಾನಿಯೂ ಇದೆ. ಜವಾಬ್ದಾರಿಯಿಂದ ಬಳಸಿದರೆ ಒಳ್ಳೆಯದು. ಜವಾಬ್ದಾರಿ ಮರೆತರೆ ಅದು ಕೆಟ್ಟದ್ದು ಎಂದು ಡಾ. ನಿರಂಜನ ವಾನಳ್ಳಿ ಹೇಳಿದರು.ಜಿಲ್ಲಾ ಪತ್ರಕರ್ತರ ಸಂಘದ ಸ್ಟಡೀ ವಿತ್ ಸೊಸೈಟಿ ಕಲಿಕೆಯ ತಾಣ ವತಿಯಿಂದ ಮಾಸಿಕ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಡಿಜಿಟಲ್ ಯುಗದಲ್ಲಿ ಮಾಧ್ಯಮ ನೈತಿಕತೆ ಕುರಿತು ಉಪನ್ಯಾಸ ನೀಡಿ ಮಾತನಾಡಿದರು. ಡಿಜಿಟಲ್ ಮಾಧ್ಯಮ ಇಂದು ಭಾಷೆ ಬಳಕೆಯನ್ನೂ ಬದಲು ಮಾಡಿದೆ. ಅಪರಾಧ ಇತ್ಯಾದಿ ಅನೇಕ ಸುದ್ದಿ ಸಂಗತಿಗಳು ಮುದ್ರಣ ಮಾಧ್ಯಮಗಳಿಗಿಂತ ಮೊದಲೇ ಬರಲಿದೆ. ಆದರೆ ಇದರಿಂದ ಒಳ್ಳೆಯದೂ ಇದೆ, ಕೆಟ್ಟದ್ದೂ ಇದೆ ಎಂದರು. ಡಿಜಿಟಲ್ ಮಾಧ್ಯಮವನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಂಡರೆ ಯಾವುದೇ ಅಭ್ಯಂತರ ಇಲ್ಲ, ಆದರೆ ಯಾರದೋ ಮರ್ಯಾದೆ ತೆಗೆಯಲು, ತೇಜೋವಧೆ ಮಾಡಲು ಬಳಸಿಕೊಳ್ಳಬಾರದು. ಏಕೆಂದರೆ ಇದು ಎಷ್ಟು ಪರಿಣಾಮ ಕಾರಿಯೋ ಅಷ್ಟೇ ಭಯಾನಕವೂ ಆಗಬಹುದು ಎಂದು ಎಚ್ಚರಿಸಿದರು. ಯಾರದೋ ವಿರುದ್ಧ ಸುದ್ದಿ ಪ್ರಕಟಿಸಿದರೆ ಅವರ ಅಭಿಪ್ರಾಯವನ್ನೂ ಹಾಕಬೇಕು. ಅವರ ಸಮರ್ಥನೆಗೆ ಅವಕಾಶ ಕೊಡಲ್ಲ ಅಂದ್ರೆ ಹೇಗೆ ಎಂದು ಪ್ರಶ್ನಿಸಿದರು. ಮಾಧ್ಯಮ ನೈತಿಕವಾಗಿರಬೇಕು.ವೈಯಕ್ತಿಕ ಹಿತಾಸಕ್ತಿಯಿಂದ ಸುದ್ದಿ ಮಾಡುವುದು ತಪ್ಪು ಎಂದರು.ಗಮನಿಸಬೇಕಾದ ಸಂಗತಿ ಎಂದರೆ ಸುದ್ದಿ ಜಾಗ ಎಂದೂ ಮಾರಾಟವಾಗಬಾರದು. ಸುದ್ದಿ ಪ್ರಕಟ ಮಾಡಲು ದುಡ್ಡು ಕೇಳೋದು ಮಾಧ್ಯಮ ಸಂಹಿತೆ ಅಲ್ಲ, ಇಲ್ಲಿ ಒಳ್ಳೆಯದು, ಕೆಟ್ಟದ್ದು ನಿರ್ಧರಿಸಲು ಸಂಹಿತೆ, ಪ್ರತ್ಯೇಕ ಕಾನೂನು ಇಲ್ಲ, ಆದರೆ ನಮಗೆ ನಾವೇ ಕೆಲವು ಸಂಹಿತೆ ಅಳವಡಿಸಿಕೊಳ್ಳಬೇಕು. ಕಳ್ಳತನ ಮಾಡುವುದು ನೈತಿಕತೆ ಅಲ್ಲ, ಜವಾಬ್ದಾರಿ ಇಲ್ಲದೆ ನಡೆದುಕೊಂಡಾಗ ನೈತಿಕತೆ ಮರೆತು ಬಿಡುವ ಸಾಧ್ಯತೆ ಇರುತ್ತದೆ ಎಂದರು.

ಇಂದು ಪತ್ರಿಕೆಯೂ ಡಿಜಿಟಲ್ ರೂಪಕ್ಕೆ ಬದಲಾಗಿದೆ. ಕಾಲಕ್ಕೆ ತಕ್ಕಂತೆ ಬದಲಾಗುವುದು ಅನಿವಾರ್ಯ. ಹಾಗಂತ ಮುದ್ರಣ ಮಾಧ್ಯಮಕ್ಕೆ ಭವಿಷ್ಯ ಇಲ್ಲ ಎಂದು ಹೇಳಲಾಗಲ್ಲ. ಭಾರತದಲ್ಲಿ ಹಾಗಾಗುವುದಿಲ್ಲ ಎಂದು ತಿಳಿಸಿದರು.ಪ್ರತಿಯೊಬ್ಬರ ಅಭಿಪ್ರಾಯ, ಅವರ ಸಮರ್ಥನೆಗೆ ಅವಕಾಶ ಕೊಡದೇ ಇರೋದು ನೈತಿಕ ಪತ್ರಿಕೋದ್ಯಮ ಅಲ್ಲ, ಭಾಷೆ ಇಲ್ಲದ ಪತ್ರಕರ್ತರು ಹಾಗೂ ಜನಾಂಗವನ್ನು ಸೃಷ್ಟಿ ಮಾಡುತ್ತಿರುವುದು ಇವತ್ತಿನ ಶಿಕ್ಷಣದ ದುರಂತ ಎಂದು ಕೊನೆಯಲ್ಲಿ ನಡೆದ ಪತ್ರಿಕೋದ್ಯಮ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದಲ್ಲಿ ಹೇಳಿದರು. ಪತ್ರಿಕೋದ್ಯಮ ಇಂದು ಸಾಕಷ್ಟು ಬೆಳೆದಿರುವ ಕ್ಷೇತ್ರ, ಆದರೂ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಆಗಿ ಅನೇಕ ಕಡೆಗಳಲ್ಲಿ ಸುಸಜ್ಜಿತ ಸೌಲಭ್ಯ ಇದ್ದರೂ, ವಿಭಾಗಗಳನ್ನು ಮುಚ್ಚುತ್ತಿದ್ದಾರೆ. ಯಾಕೆ ವಿದ್ಯಾರ್ಥಿಗಳನ್ನು ಸೆಳೆಯಲು ಆಗುತ್ತಿಲ್ಲ ಎಂಬ ಪ್ರಶ್ನೆ ಮೂಡಿದೆ ಎಂದರು.ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆಂಜೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಂಸ್ಕೃತಿಕ ಸಮಿತಿಯ ಸಂಚಾಲಕ ಚಲಂ ಹಾಡ್ಲಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ನಂಜುಂಡೇಗೌಡ, ಕಾರ್ಯದರ್ಶಿಗಳಾದ ಬೊಮ್ಮೇಗೌಡ, ಹರೀಶ್, ಖಜಾಂಚಿ ಪ್ರಕಾಶ್ ಬೆಳವಾಡಿ, ನಿವೃತ್ತ ಅಧಿಕಾರಿ ಅಣ್ಣಾಜಿರಾಜ್ ಇದ್ದರು ,. ಹಿಂದೂಪ್ರಕಾಶ್ ಸ್ವಾಗತಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾವಿರ ಕವಿತೆಗಳಿಗಿಂತ ಸಾವು ಇರದ ಕವಿತೆಗಳ ರಚಿಸಬೇಕು
ಗುರು-ಶಿಷ್ಯರ ಸಂಬಂಧ ಜ್ಞಾನಕ್ಕಿಂತಲೂ ಮಿಗಿಲಾದ ಭಾವ-ಬಂಧ