ಕೃಷಿ ಪರಿಕರ ಮಾರಾಟ ಮಳಿಗೆಗಳಿಗೆ ದಿಢೀರ ಭೇಟಿ, ಪರಿಶೀಲನೆ

KannadaprabhaNewsNetwork |  
Published : Aug 05, 2025, 11:45 PM IST
ಪೋಟೋ: ೫-೮ ಸಿಟಿಪಿಅರ್ ೨ಚಿತ್ತಾಪುರ ಪಟ್ಟಣದಲ್ಲಿ ಸೇಡಂನ ಉಪ ಕೃಷಿ ನಿರ್ದೇಶಕಿ ಅನುಸೂಯ ಹೂಗಾರ, ತಹಸೀಲ್ದಾರ ನಾಗಯ್ಯ ಹಿರೆಮಠ ಅವರು ಕೃಷಿ ಪರಿಕರ ಮಾರಾಟ ಮಳಿಗೆಗಳಿಗೆ ಧಿಡೀರ ಭೆಟ್ಟಿ ನೀಡಿ ಪರಿಇಲನೆ ನಡೆಸಿದರು. | Kannada Prabha

ಸಾರಾಂಶ

ಕೃಷಿ ಪ್ರದಾನವಾಗಿರುವ ತಾಲೂಕಿನಲ್ಲಿ ಸರ್ಕಾರವು ನಿಗದಿ ಮಾಡಿರುವ ದರಕ್ಕಿಂತ ಹೆಚ್ಚಿನ ದರದಲ್ಲಿ ಕೃಷಿ ಪರಿಕರಗಳನ್ನು ಮಾರಾಟ ಮಾಡಬಾರದು ಎಂದು ಸೇಡಂನ ಉಪ ಕೃಷಿ ನಿದೇರ್ಶಕಿ ಅನುಸೂಯಾ ಹೂಗಾರ ಮತ್ತು ತಹಸೀಲ್ದಾರ ನಾಗಯ್ಯ ಹಿರೆಮಠ ಹೇಳಿದರು.

ಕನ್ನಡ ಪ್ರಭವಾರ್ತೆ ಚಿತ್ತಾಪುರ

ಕೃಷಿ ಪ್ರದಾನವಾಗಿರುವ ತಾಲೂಕಿನಲ್ಲಿ ಸರ್ಕಾರವು ನಿಗದಿ ಮಾಡಿರುವ ದರಕ್ಕಿಂತ ಹೆಚ್ಚಿನ ದರದಲ್ಲಿ ಕೃಷಿ ಪರಿಕರಗಳನ್ನು ಮಾರಾಟ ಮಾಡಬಾರದು ಎಂದು ಸೇಡಂನ ಉಪ ಕೃಷಿ ನಿದೇರ್ಶಕಿ ಅನುಸೂಯಾ ಹೂಗಾರ ಮತ್ತು ತಹಸೀಲ್ದಾರ ನಾಗಯ್ಯ ಹಿರೆಮಠ ಹೇಳಿದರು.

ಕೃಷಿ ಪರಿಕರ ಮಳಿಗೆಗಳಿಗೆ ಜಂಟಿಯಾಗಿ ದಿಢೀರ್‌ ಭೆಟ್ಟಿ ನೀಡಿದ ಅವರು ತಾಲೂಕಿನ ರೈತರಿಗೆ ಬೀಜ, ಗೊಬ್ಬರ, ಕೀಟನಾಶಕ ಮತ್ತು ಬಿತ್ತನೆ ಬೀಜಗಳು ಸೇರಿದಂತೆ ಯಾವುದೇ ಕೃಷಿ ಪರಿಕರ ಖರೀದಿ ಮಾಡುವಾಗ ಮೋಸ ಹೊಗಬಾರದು ಮತ್ತು ಹೆಚ್ಚಿನ ದರಗಳನ್ನು ನೀಡಬಾರದು ಎನ್ನುವ ಉದ್ದೇದಿಂದ ಅವರಿಗೆ ಜಾಗೃತಿ ಮೂಡಿಸುವ ಹಾಗೂ ಪರಿಕರ ಮಳಿಗೆಗಳಿಗೆ ದಿಢೀರ್‌ ಭೇಟಿ ನೀಡಿ ಅಲ್ಲಿ ವಸ್ತುಸ್ಥಿತಿ ಮಾಹಿತಿ ಪಡೆಯಲಾಗುತ್ತಿದೆ. ಅಂಗಡಿಗಳಲ್ಲಿ ಇರುವ ದರಪಟ್ಟಿಯಂತೆ ಪರಿಕರಗಳನ್ನು ನೀಡಬೇಕು ಎಂದರು.

ರೈತರಿಗೆ ಹೆಚ್ಚಿನ ದರದಲ್ಲಿ ಮಾರಾಟ ಮಾಡುವುದು ಕಂಡು ಬಂದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವದು ಮತ್ತು ಅವರ ಪರವಾನಿಗೆಯನ್ನು ರದ್ದು ಮಾಡುವಂತಹ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೃಷಿ ಇಲಾಖೆ ಅಧಿಕಾರಿಗಳಾದ ಕರಣಕುಮಾರ, ರವೀಂದ್ರಕುಮಾರ, ಅಪರಾಧ ವಿಭಾಗದ ಪಿಎಸ್‌ಐ ಚಂದ್ರಮಪ್ಪಾ ಬಳಿಚಕ್ರ, ಕಂದಾಯ ನಿರೀಕ್ಷಕ ಮಹ್ಮದ ಸುಭಾನ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯ ರಾಜಕಾರಣಕ್ಕೆ ಎಚ್‌ಡಿಕೆ ಪರೋಕ್ಷ ಇಂಗಿತ
ಜೈಲಿನ ಬ್ಯಾರಕ್‌ಗಳಿಗೆ ಸಿಸಿಟಿವಿ ಕ್ಯಾಮೆರಾ!