- ರೇಣುಕಾಚಾರ್ಯ ಕೆಂಪಗಿದಾನೆಂದು ಅಪ್ಕೊಂಡೆ, ಹರೀಶ ಬಗ್ಗೆ ಮಾತಾಡಲ್ಲ: ಎಸ್ಸೆಸ್ಸೆಂ
ಕನ್ನಡಪ್ರಭ ವಾರ್ತೆ ದಾವಣಗೆರೆ
ಇಸ್ಪೀಟ್, ಮಟ್ಕಾ ಜೂಜಾಟ ಸ್ಥಳಗಳ ಮೇಲೆ ಪೊಲೀಸರು ದಾಳಿ ಮಾಡುತ್ತಿದ್ದು, ಚನ್ನಗಿರಿ ಶಾಸಕ ಬಸವರಾಜ ಶಿವಗಂಗಾ ಐಜಿಪಿ, ಎಸ್ಪಿ ವರ್ಗಾವಣೆ ಪತ್ರ ಬರೆದ ಬಗ್ಗೆ ನನಗೆ ಗೊತ್ತಿಲ್ಲ. ವಿಚಾರಿಸುವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ತಿಳಿಸಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಜಿಪಿ, ಎಸ್ಪಿ ವರ್ಗಾವಣೆಗೆ ಪತ್ರ ಬರೆದಿರುವ ಬಗ್ಗೆ ಶಿವಗಂಗಾ ಬಸವರಾಜಗೆ ಕೇಳುತ್ತೇನೆ. ಸ್ವಲ್ಪ ಬಿಗಿ ಇದ್ದರೂ ಕಷ್ಟ, ಬಿಗಿ ಇಲ್ಲವೆಂದರೂ ಕಷ್ಟ ಎಂದರು.
ನಮ್ಮ ತಂದೆ ಕಾಲಿಗೆ ಮಾಜಿ ಸಚಿವ ಎಸ್.ಎ.ರವೀಂದ್ರನಾಥ ಬೀಳೋರು. ನಾನು ರವೀಂದ್ರನಾಥ್ ಕಾಲಿಗೆ ಬಿದ್ದಿದ್ದೇನೆ. ಕಾಲಿಗೆ ಬೀಳುವುದರ ಬಗ್ಗೆ ಮಾತನಾಡುವುದೆಲ್ಲಾ ಸಣ್ಣತನ. ನೋ ಕಾಂಟ್ರವರ್ಸಿ. ಇನ್ನು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸಹ ಅಂದು ಮತ ಕೇಂದ್ರದ ಬಳಿ ಇದ್ದ. ಆತನ ಗಲ್ಲ ತಟ್ಟಿ, ಆತ್ಮೀಯವಾಗಿ ಮಾತನಾಡಿಸಿದೆ. ಕೆಂಪಗಿದ್ದಾನೆಂದು ಸ್ವಲ್ಪ ಅಪ್ಪಿಕೊಂಡೆ ಎಂದು ಅವರು ಟೀಕಾಕಾರರಿಗೆ ಹಾಸ್ಯದ ಧಾಟಿಯಲ್ಲೇ ಪ್ರತಿಕ್ರಿಯಿಸಿದರು.