ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣಮನುಷ್ಯ ಸ್ವಾರ್ಥವನ್ನು ಹೋಗಲಾಡಿಸಿ ಸಾರ್ಥಕ ಜೀವನ ನಡೆಸಬೇಕೆಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿದ್ಯಾನಿಲಯ ಶಿಕ್ಷಣ ಕೇಂದ್ರದ ರಾಜಯೋಗಿನಿ ಬ್ರಹ್ಮಕುಮಾರಿ ಮೋಹನ್ ಕುಮಾರಿ ಅಕ್ಕನವರು ಆಶೀರ್ವದಿಸಿದರು. ಪಟ್ಟಣದ ಸಮೀಪ ಇರುವ ಶೆಟ್ಟಳ್ಳಮ್ಮ ದೇವಸ್ಥಾನದ ಸಮೀಪ ಸಮುದಾಯ ಭವನದಲ್ಲಿ ಗ್ರಾಮಗಳ ಸುಭೀಕ್ಷೆಗಾಗಿ ಹಮ್ಮಿಕೊಂಡಿದ್ದ ಶೆಟ್ಟಳಮ್ಮ ದೇವಿ ಅಭಿಷೇಕ ಮತ್ತು ಕುಂಕುಮಾರ್ಚನೆ ಕಾರ್ಯಕ್ರಮದ ನಂತರ ಸಭೆಯಲ್ಲಿ ಮಾತನಾಡಿದರು. ಮನುಷ್ಯ ಉತ್ತಮ ಆಲೋಚನೆ ಉತ್ತಮ ನಡವಳಿಕೆಗಳನ್ನ ರೂಢಿಸಿಕೊಳ್ಳಬೇಕು. ಮಾತಿನ ವ್ಯತ್ಯಾಸದಿಂದ ಜಗಳಗಳು ಯುದ್ಧಗಳು ಆಗುತ್ತವೆ. ಹಿತವಾದುದನ್ನ ಕೇಳಬೇಕು ಈ ರೀತಿಯ ಸಜ್ಜನ ಸತ್ಸಂಗದಲ್ಲಿ ಭಾಗವಹಿಸಬೇಕು. ಆರೋಗ್ಯ ಚೆನ್ನಾಗಿರಬೇಕೆಂದರೆ ನಾಲಿಗೆ ರುಚಿಯ ಮೇಲೆ ನಿಯಂತ್ರಣ ಇಟ್ಟುಕೊಳ್ಳಬೇಕು. ಹಿರಿಯರ ಬಗ್ಗೆ ಗೌರವ ಕಿರಿಯರ ಬಗ್ಗೆ ಪ್ರೀತಿ ಇಟ್ಟುಕೊಳ್ಳಬೇಕು ಏನನ್ನು ಬಿತ್ತುತ್ತೇವೆ, ಅದೇ ಬೆಳೆ ಬರುತ್ತದೆ ಕರ್ಮಕ್ಕೆ ಫಲ ಆತನೇ ಅನುಭವಿಸಬೇಕು. ಆದ್ದರಿಂದ ಪರಿಶುದ್ಧವಾದ ಜೀವನದಲ್ಲಿ ಉತ್ತಮ ಶಕ್ತಿ ಅಡಗಿರುತ್ತದೆ ಎಂದು ತಿಳಿಸಿದರು. ಇಂದ್ರೀಯಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ದೇವರ ಪೂಜೆ ಧ್ಯಾನದಲ್ಲಿ ತೊಡಗಿಕೊಳ್ಳಬೇಕು ಎಂದರು. ಚನ್ನರಾಯಪಟ್ಟಣ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ನಿರ್ದೇಶಕಿ ಲೀಲಾವತಿ ಧರ್ಮಸ್ಥಳ ಸಂಘದ ವಿವಿಧ ಯೋಜನೆಗಳನ್ನು ಕುರಿತು ವಿವರಿಸಿದರು ಧರ್ಮಸ್ಥಳ ಸಂಘ ಇದುವರೆಗೆ ೫೫ ಲಕ್ಷ ಜನರಿಗೆ ೨೮,೦೦೦ ಕೋಟಿ ಹಣ ಕಡಿಮೆ ಬಡ್ಡಿದರದಲ್ಲಿ ವಿತರಿಸಿದೆ. ೫,೦೦೦ಕ್ಕೂ ಹೆಚ್ಚು ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡಕ್ಕೆ ನೆರವು ನೀಡಿದೆ ೩೦ ಕೋಟಿ ಹಣವನ್ನು ಸರ್ಕಾರಿ ಶಾಲೆಯ ಶಿಕ್ಷಕರನ್ನ ನೇಮಿಸಿ ಅವರಿಗೆ ಸಂಬಳ ನೀಡುತ್ತಿದೆ. ರೈತರನ್ನು ಒಗ್ಗೂಡಿಸುವಿಕೆ, ಮಧ್ಯವರ್ಜನ ಶಿಬಿರ, ಕೆರೆ ಸ್ವಚ್ಛತೆ ಹೂಳೆತ್ತುವುದು, ದೇವಸ್ಥಾನಗಳ ಜೀರ್ಣೋದ್ಧಾರ ಹೀಗೆ ಅನೇಕ ಸಾಮಾಜಿಕ ಕಾರ್ಯಗಳನ್ನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ. ಧಾರಾವಾಹಿಗಳನ್ನು ವೀಕ್ಷಿಸಿ ಅನುಕರಿಸುವ ಮಹಿಳೆಯರು ತನ್ನ ಜೀವನಕ್ಕೆ ತಾನೇ ಕಥಾನಾಯಕಿ ಎಂಬುದನ್ನು ಅರಿತು ದುಡಿಮೆ ಮಾಡಬೇಕು ಎಂದು ಸಲಹೆ ನೀಡಿದರು. ಪತ್ರಕರ್ತರ ಸಂಘದ ಅಧ್ಯಕ್ಷ ದಯಾನದ ಶೆಟ್ಟಿಹಳ್ಳಿ ಮಾತನಾಡುತ್ತಾ ಹಿಂದೆ ಹಳ್ಳಿಗಳಲ್ಲಿ ಜಾನಪದ ಹಾಡುಗಳಿಂದ ಎಲ್ಲರನ್ನೂ ಒಗ್ಗೂಡಿಸುತ್ತಿದ್ದರು. ಸೋಬಾನೆ ಪದ, ಕೋಲಾಟ, ತಿಂಗಳ ಮಾವನ ಬಿಡಿಸುವುದು ಈ ರೀತಿ ಎಲ್ಲರೂ ಒಟ್ಟಾಗಿ ಒಂದೆಡೆ ಕಲೆತು ತಮ್ಮ ಕಷ್ಟ-ಸುಖಗಳನ್ನು ಹಂಚಿಕೊಳ್ಳುತ್ತಿದ್ದರು. ಈಗ ವಿಭಕ್ತ ಕುಟುಂಬಗಳು ಹೆಚ್ಚಾಗಿ ಮನುಷ್ಯನ ಮನಸ್ಸಿನ ಶಾಂತಿ ಹಾಳಾಗುತ್ತಿದೆ. ಮುಂದಿನ ಜನಾಂಗಕ್ಕೆ ಉತ್ತಮ ನೀರು, ಉತ್ತಮ ಗಾಳಿ, ಭೂಮಿಯನ್ನ ಕಲುಷಿತಗೊಳ್ಳದಂತೆ ಕಾಪಾಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು. ಕಾರ್ಯಕ್ರಮದಲ್ಲಿ ಶೆಟ್ಟಿಹಳ್ಳಿ ವಲಯದ ಮೇಲ್ವಿಚಾರಕ ಸುರೇಶ್ ಸ್ವಾಗತಿಸಿದರು, ದಿಂಡಗೂರು ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾಮಚಂದ್ರ ಉದ್ಘಾಟಿಸಿದರು, ಅಧ್ಯಕ್ಷತೆಯನ್ನು ಸತೀಶ್ ವಹಿಸಿದ್ದರೆ ಗ್ರಾಮದ ಹಿರಿಯರಾದ ದೇವರಾಜೇಗೌಡ ಹಾಗೂ ಜೋಗಿಪುರ ಗ್ರಾಮದ ಮುಖಂಡ ನಂದನ್ ಹಾಗೂ ಶೆಟ್ಟಿಹಳ್ಳಿ ಅರಳಾಪುರ ಜೋಗಿಪುರ ಬಂಡಿಹಳ್ಳಿ ಗ್ರಾಮದ ಮಹಿಳಾ ಹಾಗೂ ಪುರು? ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘಗಳ ಸದಸ್ಯರು ಉಪಸ್ಥಿತರಿದ್ದರು.