ಜಮೆ ಆಗದ ಮಾಶಾಸನ: ಬಿಡುಗಡೆಗೆ ಆಗ್ರಹ

KannadaprabhaNewsNetwork |  
Published : May 23, 2026, 02:45 AM IST
22ಬಿಎಸ್ವಿ01- ಮೌಲಾಲಿ ಮಂಟೂರ. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿರಾಜ್ಯದ ಎಲ್ಲ ವಿಕಲಚೇತನರ ಪ್ರತಿ ತಿಂಗಳ ಮಾಶಾಸನ ಕಳೆದ 2-3 ತಿಂಗಳಿಂದ ಜಮೆಯಾಗದೆ ವಿಕಲಚೇತನರು ಹಾಗೂ ವಯೋವೃದ್ಧರು ತೊಂದರೆ ಎದುರಿಸುತ್ತಿದ್ದಾರೆ ಎಂದು ತಾಲೂಕಿನ ಮುತ್ತಗಿ ಗ್ರಾಮದ ಹಿರಿಯ ನಾಗರಿಕರ ಸೇವಾ ಸಂಘದ ಕಾರ್ಯದರ್ಶಿ ಮೌಲಾಲಿ ಮಂಟೂರ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ರಾಜ್ಯದ ಎಲ್ಲ ವಿಕಲಚೇತನರ ಪ್ರತಿ ತಿಂಗಳ ಮಾಶಾಸನ ಕಳೆದ 2-3 ತಿಂಗಳಿಂದ ಜಮೆಯಾಗದೆ ವಿಕಲಚೇತನರು ಹಾಗೂ ವಯೋವೃದ್ಧರು ತೊಂದರೆ ಎದುರಿಸುತ್ತಿದ್ದಾರೆ ಎಂದು ತಾಲೂಕಿನ ಮುತ್ತಗಿ ಗ್ರಾಮದ ಹಿರಿಯ ನಾಗರಿಕರ ಸೇವಾ ಸಂಘದ ಕಾರ್ಯದರ್ಶಿ ಮೌಲಾಲಿ ಮಂಟೂರ ತಿಳಿಸಿದ್ದಾರೆ.

ಆರೋಗ್ಯದ ಚಿಕಿತ್ಸೆ ಪಡೆಯಲು ಔಷಧಿಗಳನ್ನು ಖರೀದಿಸಲು, ನಿತ್ಯದ ಹಾಲು, ರೇಷನ್ ಸಾಮಗ್ರಿಗಳು ಖರೀದಿಸಲು ಮತ್ತು ಮನೆ ಬಾಡಿಗೆ ಕಟ್ಟಲು ಹಣ ಇಲ್ಲದೆ ಪರದಾಡುವಂತಾಗಿದೆ. ಮುಖ್ಯಮಂತ್ರಿಗಳು ವಿಕಲಚೇತನರ ಕಡೆ ಗಮನ ಹರಿಸಿ ಆದಷ್ಟು ಬೇಗ ರಾಜ್ಯದ ಎಲ್ಲ ವಿಕಲಚೇತನರಿಗೆ ಮಾಸಾಶನ ಹಣ ಅವರ ಖಾತೆಗೆ ಜಮೆ ಮಾಡುವಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಪ್ರಕಟಣೆ ಮೂಲಕ ವಿನಂತಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಟಲಿ ಪ್ರಧಾನಿಗೆ ಚಾಕೋಲೇಟ್ ಕೊಟ್ಟಿದ್ದರಲ್ಲಿ ತಪ್ಪೇನಿದೆ?
ಅನಧಿಕೃತ ಹೋಂ ಸ್ಟೇ ವಿರುದ್ಧ ಕಾನೂನು ಕ್ರಮ