ಸೌಲಭ್ಯ ವಂಚಿತ ಯೋಗಮಂದಿರ ವಿಘ್ನೇಶ್ವರ ಬಡಾವಣೆ

KannadaprabhaNewsNetwork |  
Published : Jul 22, 2024, 01:24 AM IST
ಸಾರ್ವಜನಿಕರ ಸಮಸ್ಯೆ ಕೇಳುವವರಿಲ್ಲ. | Kannada Prabha

ಸಾರಾಂಶ

ಕಳೆದ 10 ವರ್ಷಗಳಿಂದ ಇಲ್ಲಿನ ರಸ್ತೆಗಳು ಹಾಗು ಚರಂಡಿಗಳ ನಿರ್ಮಾಣ ಅರಬರೆಯಾಗಿ ನಿರ್ಮಾಣಗೊಂಡಿವೆ. ಚರಂಡಿಗಳು ತುಂಬಿ ತುಳಿಕಿ ರಸ್ತೆಗೆ ಹರಿಯುತ್ತವೆ ಜನರು ನಿತ್ಯ ತೊಂದರೆ ಅನುಭವಿಸುತ್ತಿದ್ದರೂ ಸಹ ನಗರಸಭೆ ಇತ್ತ ಗಮನ ಹರಿಸುತ್ತಿಲ್ಲ

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ಇಲ್ಲಿನ ನಗರಸಭೆಯ 21ನೇ ವಾರ್ಡ್‌ನ ವ್ಯಾಪ್ತಿಗೆಬರುವ ಶ್ರೀ ಪತಂಜಲಿ ಯೋಗಮಂದಿರ ರಸ್ತೆಯ ವಿಘ್ನೇಶ್ವರ ಬಡಾವಣೆಯಲ್ಲಿ ಮೂಲಸೌಕರ್ಯ ಕಾಣದೆ ಸಂಪೂರ್ಣ ನಿರ್ಲಕ್ಷ್ಯ ಕ್ಕೊಳಗಾಗಿದೆ.

ಕಳೆದ 10 ವರ್ಷಗಳಿಂದ ಇಲ್ಲಿನ ರಸ್ತೆಗಳು ಹಾಗು ಚರಂಡಿಗಳ ನಿರ್ಮಾಣ ಅರಬರೆಯಾಗಿ ನಿರ್ಮಾಣಗೊಂಡಿವೆ. ಚರಂಡಿಗಳು ತುಂಬಿ ತುಳಿಕಿ ರಸ್ತೆಗೆ ಹರಿಯುತ್ತವೆ ಜನರು ನಿತ್ಯ ತೊಂದರೆ ಅನುಭವಿಸುತ್ತಿದ್ದರೂ ಸಹ ನಗರಸಭೆ ಇತ್ತ ಗಮನ ಹರಿಸುತ್ತಿಲ್ಲ ಎಂದು ನಿವಾಸಿಗಳು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆಗೆ ಡಾಬರ್‌ ಹಾಕಿಲ್ಲ

ಬಡಾವಣೆಯ ಕೆಲವು ಬೀದಿಗಳಿಗೆ ಇನ್ನೂ ಸುಸಜ್ಜಿತ ರಸ್ತೆಗಳಿಲ್ಲ. ಕಲ್ಲು ಮಣ್ಣಿನ ರಸ್ತೆಯಲ್ಲೇ ಜನರು ಸಂಚರಿಸಬೇಕು. ಪ್ರಾರಂಭದಿಂದಲೂ ರಸ್ತೆಗೆ ಡಾಂಬರು ಕಾಣಲೇ ಇಲ್ಲ ಮಳೆ ಬಂದರೆ ರಸ್ತೆ ಕೆಸರುಮಯವಾಗುತ್ತದೆ ಇಲ್ಲಿಯವರೆಗೆ ಸುಮಾರು ಜನ ಕಾಲುಜಾರಿ ಬಿದ್ದಿರುವ ಸನ್ನಿವೇಶಗಳೆ ಇವೆ. ಇಂತಹ ಜಾಗಕ್ಕೆ ಮಳೆಬಂದಾಗ ಹಾಲಿನವರು, ಪತ್ರಿಕೆಯವರು ಈ ಬಡಾವಣೆ ಸಂಚರಿಸಲು ಪರದಾಡುವಂತಾಗಿದೆ.

ಕೆಲವು ಬೀದಿಗಳಲ್ಲಿ ಚರಂಡಿ ಇದ್ದರೂ ನೀರು ಸರಾಗವಾಗಿ ಹರಿಯುವುದಿಲ್ಲ. ಸರಿಯಾದ ಚರಂಡಿ ಇಲ್ಲದೆ ಮಳೆಗಾಲದಲ್ಲಿ ನೀರು ಮನೆಗಳಿಗೆ ನುಗ್ಗುತ್ತದೆ. ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಉಂಟಾಗುತ್ತದೆ. ಇದರಿಂದ ಸಾಂಕ್ರಾಮಿಕ ರೋಗ ಬರಬಹುದು ಎಂಬ ಭೀತಿಯಲ್ಲಿ ಜನರಿದ್ದಾರೆ. ಚರಂಡಿ ನೀರು ರಸ್ತೆಗೆ ಬರಲು ಚರಂಡಿ ಕಾಮಗಾರಿಯನ್ನು ಅವೈಜ್ಷಾನಿಕವಾಗಿ ಮಾಡಿರುವುದೇ ಕಾರಣ. ಕಾಮಗಾರಿ ವೇಳೆಯಲ್ಲಿ ಗುತ್ತಿಗೆದಾರ ಅಥವಾ ಇಂಜಿನಿಯರ್ ಸ್ಥಳಕ್ಕೆ ಭೇಟಿ ನೀಡುತ್ತಿರಲಿಲ್ಲ ಎನ್ನಲಾಗಿದೆ. ಇನ್ನೂ ಕೆಲವು ಬೀದಿಗಳಲ್ಲಿ ಚರಂಡಿ ಇಲ್ಲ. ಹೀಗಾಗಿ ನಿವಾಸಿಗಳು ಮನೆಯ ಹಿಂಭಾಗದ ಖಾಲಿ ನಿವೇಶನದಲ್ಲಿ ಚರಂಡಿ ನೀರನ್ನು ಬಿಟ್ಟಿದ್ದಾರೆ. ತ್ಯಾಜ್ಯವನ್ನು ಖಾಲಿ ಜಾಗಲದಲ್ಲೇ ಡಸೆಯಲಾಗುತ್ತಿದೆ. ನಮ್ಮ ವಾರ್ಡ್‌ ಸಮಸ್ಯಗಳಿಂದ ಯಾವಾಗ ಮುಕ್ತಿ ಹೊಂದುತ್ತದೆಯೋ ತಿಳಿದಿಲ್ಲ ಸರಿಯಾದ ರಸ್ತೆ ಮತ್ತು ಚರಂಡಿ ಇಲ್ಲದೆ ಮಳೆಗಾಲದಲ್ಲಿ ನೀರು ಮನೆಗಳಿಗೆ ನುಗ್ಗುತ್ತದೆ. ಇದರಿಂದಾಗಿ ನಾವೆಲ್ಲ ತುಂಬಾ ತೊಂದರೆ ಅನನುಭವಿಸುವಂತಾಗಿದೆ. ಅಧಿಕಾರಿಗಳು ರಸ್ತೆ ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದು ಬಡಾವಣೆ ನಿವಾಸಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಪ್ಪ ಕ್ರಿಸ್ ಮಸ್ ಪ್ರಯುಕ್ತ ೨೧ರಂದು ಸೌಹಾರ್ದ ರ‍್ಯಾಲಿ
ಪ್ರತಿ ಮಹಿಳೆ ಸಮತೋಲನ ಆಹಾರ ಸೇವಿಸಬೇಕು: ಸೋನಾ ಮ್ಯಾಥ್ಯೂ