ಕನ್ನಡಪ್ರಭ ವಾರ್ತೆ ಶಿರಾ
ಅವರು ನಗರದ ಶ್ರೀ ವಿವೇಕಾನಂದ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಏರ್ಪಡಿಸಿದ್ದ ೭೭ನೇ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿರಾದಲ್ಲಿರುವ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಹಲವಾರು ಕೈಗಾರಿಕೆಗಳು ಸ್ಥಾಪನೆಯಾಗುತ್ತಿದ್ದು, ಇನ್ನೊಂದು ವರ್ಷದ ಒಳಗೆ ೮ ರಿಂದ ೧೦ ಸಾವಿರ ಉದ್ಯೋಗ ಸೃಷ್ಠಿಯಾಗುತ್ತವೆ. ಎಲ್ಲಾ ಉದ್ಯೋಗಗಳನ್ನು ಸ್ಥಳೀಯರಿಗೆ ನೀಡುವಂತೆ ಕ್ರಮ ಕೈಗೊಳ್ಳುತ್ತೇನೆ ಎಂದರು.
ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ ಗೌಡ ಮಾತನಾಡಿ ಸರಕಾರಗಳಿಂದ ರೈತಾಪಿ ವರ್ಗದ ಸಮಸ್ಯೆಗೆ ಸ್ಪಂದಿಸುವ ಕೆಲಸ ಆಗಬೇಕಿದೆ. ನಾವೆಲ್ಲರೂ ಸರಕಾರದ ಗಮನ ಸೆಳೆಯಬೇಕು. ಸಂವಿಧಾನದಲ್ಲಿ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಅರಿವು ಅದಕ್ಕೆ ಅನುಗುಣವಾಗಿ ಪ್ರಜೆಗಳು ನಡೆದುಕೊಳ್ಳಬೇಕು ಎಂದರು.ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಆನಂದ್ ಕುಮಾರ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ನಗರಸಭೆ ಅಧ್ಯಕ್ಷ ಜೀಶಾನ್ ಮೋಹಮೂದ್, ಉಪಾಧ್ಯಕ್ಷ ಲಕ್ಷ್ಮಿಕಾಂತ್, ಅಜಯ್ ಕುಮಾರ್, ಹಾರೋಗೆರೆ ಮಹೇಶ್. ಎಂ, ಪೌರಯುಕ್ತ ರುದ್ರೇಶ್, ಮಂಜುನಾಥ್, ಸುನೀಲ್, ನವನೀತ್, ನೂರುದ್ದಿನ್, ರಾಮಚಂದ್ರಪ್ಪ, ಈರಣ್ಣ ಪಟೇಲ್ ಇತರರಿದ್ದರು.