ಕನ್ನಡಪ್ರಭ ವಾರ್ತೆ, ಕೊಳ್ಳೇಗಾಲ
ಮೂರು ದಿನಗಳ ಮಾನಸೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಯುವ ಜಡನತೆ ತಮ್ಮ ಸಾಮರ್ಥ್ಯ ಮತ್ತು ಧೈರ್ಯದಿಂದ ವಯೋವೃದ್ದರನ್ನು ರಕ್ಷಿಸುವ ಕೆಲಸ ಮಾಡಬೇಕು, ಇಂದಿನ ಸಮಾಜ ಹೆಚ್ಚುಗಾರಿಕೆ ಎಂಬ ಹುಂಬತನಕ್ಕೆ ಸಿಲುಕಿ ತತ್ತರಿಸುತ್ತಿದೆ ಎಂದರು.
ಮೂರು ದಿನಗಳ ಕಾಲ ಜರುಗುವ ಮಾನಸೋತ್ಸವ ನಮ್ಮ ಸಂಸ್ಕೃತಿಯ ಭವ್ಯತೆ ಮೆರೆಯಲಿ. ಪ್ರಸ್ತುತ ಮೊಬೈಲ್ ಎಂಬ ಕಾಯಿಲೆಯಿಂದ ಹೊರಬರಬೇಕಾದರೆ ನಾಟಕ ಎಂಬ ಔಷಧಿಯೇ ಇದಕ್ಕೆ ಪರಿಹಾರವಾಗಿದೆ. ನಾಟಕ ಎಂಬ ನಟನಾಭಿನಯದ ಮೂಲಕ ಸತ್ಯವನ್ನು ಅರ್ಥ ಮಾಡಿಕೊಳ್ಳಬೇಕಿದೆ. ಮೊಬೈಲ್ ನಲ್ಲಿ ಒಳ್ಳೇಯದ್ದು ಇದೆ, ಕೆಟ್ಟದ್ದು ಇದೆ. ವಿಪರೀತವಾಗಿ ಬಳಸಿದರೆ ಇದು ಕೆಟ್ಟ ಚಟವಾಗಿ ಬದಲಾಗುತ್ತೆ ಎಂದು ಹೇಳಿದರು.ಕೆಂಗೇರಿಯ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠಾಧ್ಯಕ್ಷ ಡಾ.ಶ್ರೀ ಶ್ರೀ ನಿಶ್ಚಲಾನಂದಸ್ವಾಮಿಜಿ ಮಾತನಾಡಿ, ರಾಷ್ಟ್ರ ನಾಯಕರ ಆದರ್ಶ ಪಾಲಿಸಬೇಕಾದ ಯುವ ಸಮುದಾಯ ದೇಶ ದ್ರೋಹಗಳಂತಹ ಕೖತ್ಯಗಳಲ್ಲಿ
ಮಕ್ಕಳು ಸಮಾಜ ಮುಖಿಗಳಾಗುವ ಮೂಲಕ ಶೋಭೆ ತರಬೇಕೆ ಹೊರತು ಕ್ಷೋಭೆಯನ್ನು ಉಂಟುಮಾಡಬಾರದು,
ದೀನಬಂಧು ಸಂಸ್ಥಾಪಕ ಡಾ. ಜಿ.ಎಸ್. ಜಯದೇವ ಮಾತನಾಡಿ, ಸಂತೋಷಕ್ಕಾಗಿ ಹಣವೊಂದು ಕಾರಣವಾಗದು, ಯಶಸ್ಸು ಜೀವನದ ಮುಖ್ಯ ಉದ್ದೇಶವಲ್ಲ, ಪರಸ್ಪರ ಒಬ್ಬರನ್ನು ಒಬ್ಬರು ಪ್ರೀತಿಸುವ ಮುಗ್ದತೆ ಪಾವಿತ್ರ್ರತೆಯನ್ನು ಬೆಳೆಸಿಕೊಳ್ಳಬೇಕು, ಶಿಕ್ಷಣ ಸಂಸ್ಥೆಗಳು ಹಣಕ್ಕಾಗಿ ಕಾರ್ಯನಿರ್ವಹಿಸಬಾರದು, ಸಮಾಜ ಮುಖ್ಯಭಾಗವಾಗಿ, ಮಾನವೀಯ ಮೌಲ್ಯದ ಶಿಕ್ಷಣ ನೀಡುವಲ್ಲಿ ಮುಂದಾಗಬೇಕು, ಈನಿಟ್ಟಿನಲ್ಲಿ ಮಾನಸ ಸಂಸ್ಥೆ ಕಾರ್ಯ ಶ್ಲಾಘನೀಯವಾದುದು ಎಂದರು.
ನಾಗಭೂಷಣ್, ಶಂಕರ್, ನಯನ ಕ್ಲಾರಿಬಲ್ ಇನ್ನಿತರಿದ್ದರು