24ರಿಂದ ಯುನೆಸ್ಕೊ ತಂಡದಿಂದ ಹಂಪಿಯ ಸ್ಮಾರಕಗಳ ಪರಿಶೀಲನೆ

KannadaprabhaNewsNetwork |  
Published : Oct 15, 2026, 02:30 AM IST
ಸಸಸಸ | Kannada Prabha

ಸಾರಾಂಶ

ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿರುವ ಹಂಪಿಯ ಸ್ಮಾರಕಗಳ ಸಂರಕ್ಷಣೆ, ಪಾರಂಪರಿಕ ಪ್ರದೇಶದ ನಿರ್ವಹಣೆ ಮತ್ತು ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲಿಸುವುದು ಈ ಭೇಟಿಯ ಪ್ರಮುಖ ಉದ್ದೇಶ

ಹೊಸಪೇಟೆ: ವಿಶ್ವ ಪಾರಂಪರಿಕ ತಾಣ ಹಂಪಿ ಮತ್ತು ಆನೆಗುಂದಿ, ಅಂಜನಾದ್ರಿ ಪ್ರದೇಶಕ್ಕೆ ಯುನೆಸ್ಕೊ ತಂಡ ಅ.24ರಿಂದ 29ರ ವರೆಗೆ ಭೇಟಿ ನೀಡಲಿದ್ದು, ಹಂಪಿಯ ಐತಿಹಾಸಿಕ ಸ್ಮಾರಕ, ಪಾರಂಪರಿಕ ತಾಣಗಳ ಸಂರಕ್ಷಣೆ ಹಾಗೂ ನಿರ್ವಹಣೆಯ ಪರಿಶೀಲನೆಗಾಗಿ ಯುನೆಸ್ಕೋ ಮಾನಿಟರಿಂಗ್ ತಂಡ ಭೇಟಿ ನೀಡಲಿರುವ ಹಿನ್ನೆಲೆ ಹಂಪಿಯು ಮತ್ತೊಮ್ಮೆ ಜಾಗತಿಕ ಗಮನ ಸೆಳೆದಿದೆ.

ಯುನೆಸ್ಕೋ ತಂಡದಲ್ಲಿ ಅಂತಾರಾಷ್ಟ್ರೀಯ ಪಾರಂಪರಿಕ ಪರಿಣಿತ ಕಿನ್ಯಾದ ಜಾರ್ಜ್‌ ಅಬುಂಗ್‌ ನೇತೃತ್ವದಲ್ಲಿ ಯುನೆಸ್ಕೋ ತಂಡದಲ್ಲಿ ಜಪಾನ್‌ನ ಇಚಿಡಾ ಶಿಮೋಡಾ ಇರಲಿದ್ದಾರೆ. ಜತೆಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಹೆಚ್ಚುವರಿ ಮಹಾನಿರ್ದೇಶಕ ಜಾನ್ವಿರ್‌ ಶರ್ಮಾ ಭಾಗವಹಿಸಲಿದ್ದಾರೆ.

ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿರುವ ಹಂಪಿಯ ಸ್ಮಾರಕಗಳ ಸಂರಕ್ಷಣೆ, ಪಾರಂಪರಿಕ ಪ್ರದೇಶದ ನಿರ್ವಹಣೆ ಮತ್ತು ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲಿಸುವುದು ಈ ಭೇಟಿಯ ಪ್ರಮುಖ ಉದ್ದೇಶವಾಗಿದೆ.

ಯುನೆಸ್ಕೋ ತಂಡವು ಅ.22ರಿಂದ 29 ರವರೆಗೆ ಪ್ರವಾಸ ಕೈಗೊಂಡಿದ್ದು, ಅ.22 ರಂದು ದೆಹಲಿಗೆ ಆಗಮಿಸಲಿದ್ದು, ದೆಹಲಿಯಲ್ಲಿ ಯುನೆಸ್ಕೋಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅ.24ರಿಂದ 29 ರವರೆಗೆ ಹಂಪಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

ಯುನೆಸ್ಕೋ ತಂಡವು ಹಂಪಿ ಮಾಸ್ಟರ್‌ಪ್ಲಾನ್ ಮೇಲೆ ಹೆಚ್ಚು ಗಮನಹರಿಸುತ್ತಿರುವುದರಿಂದ ಹಂಪಿಯಲ್ಲಿ ಪಾರಂಪರಿಕ ಮೌಲ್ಯ ಉಳಿಸಿಕೊಂಡು ಪ್ರವಾಸೋದ್ಯಮ ಮತ್ತು ಮೂಲಸೌಕರ್ಯ ಅಭಿವೃದ್ಧಿ ಕೈಗೊಳ್ಳಲಾಗಿದೆಯೋ ಅಥವಾ ಹಂಪಿ ಮಾಸ್ಟರ್‌ಪ್ಲಾನ್, ಪಾರಂಪರಿಕ ಪ್ರದೇಶದ ನಿರ್ವಹಣೆ, ಅತಿಕ್ರಮಣ ನಿಯಂತ್ರಣ ಹಾಗೂ ಸ್ಮಾರಕಗಳ ಸಂರಕ್ಷಣೆಗೆ ಸಂಬಂಧಿಸಿದ ಕ್ರಮಗಳ ಪ್ರಗತಿ ಮಹತ್ವ ಕುರಿತು ಹಂಪಿಯ ಸ್ಥಿತಿಗತಿ ವೀಕ್ಷಿಸಲು ಯುನೆಸ್ಕೋ ತಂಡ ಹಂಪಿಗೆ ಬರುತ್ತಿರುವುದು ಅತ್ಯಂತ ಮಹತ್ವ ಪಡೆದುಕೊಂಡಿದೆ.

ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿಯ ಸ್ಮಾರಕಗಳ ಗುಚ್ಚವನ್ನು ಯುನೆಸ್ಕೊ 1986ರಲ್ಲಿ ವಿಶ್ವ ಪಾರಂಪರಿಕ ಪಟ್ಟಿ ಸೇರಿದ ಬಳಿಕ ಹಂಪಿಗೆ ವಿಶ್ವಮನ್ನಣೆ ದೊರೆತಿತ್ತು. ನಂತರ 1999 ರಲ್ಲಿ ವಿಶ್ವ ಪರಂಪರೆ ಪಟ್ಟಿಯಿಂದಲೇ ತೆಗೆದು ಹಾಕುವ ಅಪಾಯ ಪಟ್ಟಿಗೆ ಹಂಪಿ ಸೇರಿಸಲಾಗಿತ್ತು. ಹಂಪಿಯ ಅಭಿವೃದ್ಧಿಗೆ ಯುನೆಸ್ಕೋ ಹಲವು ಕ್ರಮ ಸೂಚಿಸಿತ್ತು. ಆದರೆ ಆಗ ಯಾವುದೇ ಕ್ರಮ ಕೈಗೊಳ್ಳದೇ ಇದ್ದಲ್ಲಿ ಯುನೆಸ್ಕೋ ಪಟ್ಟಿಯಿಂದ ಹಂಪಿ ಕೈ ಬಿಡುವ ಬೆದರಿಕೆ ಯುನೆಸ್ಕೋ ಹಾಕಿತ್ತು. ನಂತರ ಯುನೆಸ್ಕೋ ಮಾರ್ಗದರ್ಶನದಂತೆ ಹಂಪಿಯಲ್ಲಿ ಪ್ರಗತಿ ಕಾರ್ಯ ನಡೆಸಿದಾಗ ಮತ್ತೆ ಹಂಪಿ ಯುನೆಸ್ಕೋ ಪಟ್ಟಿಗೆ ಸೇರಿಕೊಂಡಿತ್ತು.

ನಂತರ ಹಂಪಿಗೆ 2009ರಲ್ಲಿ ಯುನೆಸ್ಕೋ ತಂಡ ಬಂದು ಹೋದ ಮೇಲೆ ಮತ್ತೆ ಈಗ ಯುನೆಸ್ಕೋ ತಂಡ ಬರುತ್ತಿರುವುದರಿಂದ ಅಧಿಕಾರಿಗಳ ವರ್ಗದಲ್ಲಿ ಸಂಚಲನ ಶುರುವಾಗಿದೆ.

ಹಂಪಿಯ ಐತಿಹಾಸಿಕ ವೈಭವ ಮುಂದಿನ ಪೀಳಿಗೆಗೆ ಉಳಿಸುವ ನಿಟ್ಟಿನಲ್ಲಿ ಯುನೆಸ್ಕೋ ಮಾನಿಟರಿಂಗ್ ತಂಡದ ಭೇಟಿಯ ಮಹತ್ವ ಪಡೆದುಕೊಂಡಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಸ್ಕೃತಿ, ಸಂಪ್ರದಾಯ ಮುಂದಿನ ಪೀಳಿಗೆಗೆ ಪರಿಚಯಿಸಿ: ಸುರೇಶ್ ನಂಜಪ್ಪ
ಎನ್‌ಡಿಎ ಪರೀಕ್ಷೆ: ಎಕ್ಸ್‌ಪರ್ಟ್‌ನ ೪೧ ವಿದ್ಯಾರ್ಥಿಗಳಿಗೆ ಎಸ್‌ಎಸ್‌ಬಿ ಅರ್ಹತೆ