ಆನೆಗುಂದಿ, ಅಂಜನಾದ್ರಿ ಬೆಟ್ಟಕ್ಕೆ ಯುನೆಸ್ಕೋ ತಂಡ ಭೇಟಿ, ಪರಿಶೀಲನೆ

KannadaprabhaNewsNetwork |  
Published : Oct 26, 2026, 03:30 AM IST
ಗಂಗಾವತಿ ತಾಲೂಕಿನ ಐತಿಹಾಸಿಕ ಆನೆಗುಂದಿಯ ಗಗನ್ ಮಹಲ್‌ನ್ನು ಯುನಿಸ್ಕೋ ತಂಡ ವೀಕ್ಷಿಸಿತು. | Kannada Prabha

ಸಾರಾಂಶ

ಆ‌ನೆಗೊಂದಿಯ ಗಗನ ಮಹಲ್‌ಗೆ ತೆರಳಿ ಮಾಹಿತಿ ಪಡೆದರು. ಸ್ಥಳೀಯ ಗೈಡ್ ಮತ್ತು ಅಧಿಕಾರಿಗಳು ಆನೆಗೊಂದಿ ಇತಿಹಾಸದ ಕುರಿತು ಮಾಹಿತಿ ನೀಡಿದರು.

ಗಂಗಾವತಿ: ವಿಶ್ವ ಪರಂಪರೆ ಪಟ್ಟಿಯ ತಾಲೂಕಿನ ಆನೆಗೊಂದಿ ಮತ್ತು ಐತಿಹಾಸಿಕ ಅಂಜನಾದ್ರಿ ಬೆಟ್ಟಕ್ಕೆ ಯುನೆಸ್ಕೋ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಭಾನುವಾರ ಯುನೆಸ್ಕೋ ಪ್ರತಿನಿಧಿಗಳು ಭೇಟಿ ನೀಡಿ ಸ್ಮಾರಕಗಳ ಸ್ಥಿತಿಗತಿ ಕುರಿತು ಮಾಹಿತಿ ಪಡೆದರು.

ಯುನೆಸ್ಕೋ ನಿಯೋಗದ ಮುಖ್ಯಸ್ಥ ಜಾರ್ಜ್‌ ಅಬುಂಗಾ, ಐಕೋಮಾಸ್ ಪ್ರತಿನಿಧಿ ಇಚಿತಾ ಶಿಮೋದಾ ನೇತೃತ್ವದ ಅಧಿಕಾರಿಗಳ ತಂಡ ಸಾಣಾಪುರ ಮತ್ತು ಹನುಮನಹಳ್ಳಿಗೆ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿತು‌. ನಿರ್ಮಾಣ ಹಂತದ ಯಾತ್ರಿ ನಿವಾಸ ಮತ್ತು ಶಾಪಿಂಗ್ ಕಾಂಪ್ಲೆಕ್ಸ್ ವೀಕ್ಷಿಸಿ, ಪರಂಪರೆ ಮತ್ತು ಸ್ಮಾರಕಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಅಭಿವೃದ್ಧಿಪಡಿಸಲು ಸೂಚಿಸಿತು. ಹನುಮನಹಳ್ಳಿಯ ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟದ 575 ಮೆಟ್ಟಿಲು ಹತ್ತಿದ ತಂಡ ದೇವಾಲಯವನ್ನು ವೀಕ್ಷಿಸಿತು. ಬೆಟ್ಟದ ಮೇಲಿನಿಂದ ಆನೆಗೊಂದಿ ಹಂಪಿ ಪರಿಸರ ವೀಕ್ಷಿಸಿತು. ದಾರಿಯುದ್ದಕ್ಕೂ ಸ್ಮಾರಕಗಳನ್ನು ವೀಕ್ಷಿಸಿ, ರಕ್ಷಣೆಗೆ ಜಿಲ್ಲಾಡಳಿತ ಮತ್ತು ಹವಾಮಾ ಅಧಿಕಾರಿಗಳಿಗೆ ಸೂಚಿಸಿತು.

ಆ‌ನೆಗೊಂದಿಯ ಗಗನ ಮಹಲ್‌ಗೆ ತೆರಳಿ ಮಾಹಿತಿ ಪಡೆದರು. ಸ್ಥಳೀಯ ಗೈಡ್ ಮತ್ತು ಅಧಿಕಾರಿಗಳು ಆನೆಗೊಂದಿ ಇತಿಹಾಸದ ಕುರಿತು ಮಾಹಿತಿ ನೀಡಿದರು. ರಂಗನಾಥ ದೇವಾಲಯ, ಹೋಂ ಸ್ಟೇಗೆ ತೆರಳಿ ಅಲ್ಲಿ ವ್ಯವಸ್ಥೆ, ಅತಿಥ್ಯ ಮತ್ತು ಪರಂಪರೆ ಕುರಿತು ವಿಚಾರಿಸಿದರು. ಸ್ಥಳಕ್ಕೆ ಆಗಮಿಸಿದ ರಾಜಾವಂಶಸ್ಥ ರಾಜಾಕೃಷ್ಣದೇವರಾಯ ಅವರೊಂದಿಗೆ ಸಮಾಲೋಚನೆ ನಡೆಸಿದರು. ಆನೆಗೊಂದಿಯಲ್ಲಿ ಯುನೆಸ್ಕೋ ಮತ್ತು ಹವಾಮಾ ಗೈಡ್‌ಲೈನ್ ಪಾಲಿಸುತ್ತಿರುವ ಮತ್ತು ಪರಂಪರೆಗೆ ಧಕ್ಜೆಯಾಗದ ರೀತಿಯಲ್ಲಿ ಅಭಿವೃದ್ಧಿ ಮತ್ತು ಐತಿಹಾಸಿಕ ಸ್ಮಾರಕಗಳ ರಕ್ಷಣೆ ಕುರಿತು ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ್ ಮಾಹಿತಿ ನೀಡಿದರು‌.

ಈ ವೇಳೆ ಮಾತನಾಡಿದ ಅವರು, ಸ್ಮಾರಕ ವ್ಯಾಪ್ತಿಯಲ್ಲಿ ಕೈಗೊಂಡ ಪಾರಂಪರಿಕ ರೀತಿಯ ಅಭಿವೃದ್ಧಿ ಕುರಿತು ತಂಡಕ್ಕೆ ಮಾಹಿತಿ ನೀಡಿದ್ದು, ವಾಸ್ತುಶಿಲ್ಪಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಪ್ರವಾಸೋದ್ಯಮ ಮತ್ತು ಪಾರಂಪರಿಕ ರೀತಿಯಲ್ಲಿ ಕ್ರಮ ಕೈಗೊಳ್ಳಲು ತಂಡ ತಿಳಿಸಿದೆ. ವಿಜಯನಗರದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಸಮಗ್ರ ಮಾಹಿತಿ ನೀಡಲಾಗಿದೆ. ವಿಶ್ವ ಪರಂಪರೆ ಪಟ್ಟಿಯಲ್ಲಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಯುನೆಸ್ಕೋ ಮತ್ತು ಹವಾಮಾ ನಿಯಮ ಪಾಲಿಸುತ್ತಿರುವ ಬಗ್ಗೆ ತಿಳಿಸಲಾಗಿದೆ. ಹೊಸಪೇಟೆಯಲ್ಲಿ ಆಯೋಜಿಸಿರುವ ಸ್ಟೇಕ್ ಹೋಲ್ಡರ್‌ಗಳ ಸಭೆಯಲ್ಲಿ ಆನೆಗೊಂದಿ ಭಾಗದ 15 ಜನರಿಗೆ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ ಎಂದರು.

ಕೇಂದ್ರ ಪುರಾತತ್ವ ಇಲಾಖೆ ಅಧೀಕ್ಷಕ ರಾಮಕೃಷ್ಣ ರೆಡ್ಡಿ, ಕೊಪ್ಪಳ ಎಡಿಸಿ ಸಿದ್ದರಾಮೇಶ, ಎಸ್ಪಿ ಸಾಹಿಲ್ ಬಾಗ್ಲಾ, ಡಿವೈಎಸ್ಪಿ ಜೆ.ಎಸ್. ನ್ಯಾಮಗೌಡರ್, ಹವಾಮಾ ಆಯುಕ್ತ ಬಾಲಕೃಷ್ಣಪ್ಪ, ಪ್ರಭಾರ ತಹಸೀಲ್ದಾರ್ ವಿನಾಯಕ ಗೋಡಬೋಲೆ, ಪ್ರವಾಸೋದ್ಯಮ ಇಲಾಖೆ ಪ್ರಭಾರ ಸಹಾಯಕ ವಿಠ್ಠಲ ಜಾಬಗೌಡರ್ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶತ ಶತಮಾನದಿಂದಲೂ ಅಭಿವೃದ್ಧಿ ಕಾಣದ ಸ್ಮಾರಕ
ಅಯೋಡಿನ್ ಯುಕ್ತ ಉಪ್ಪು ಕುಟುಂಬದ ಆರೋಗ್ಯ ಸಂರಕ್ಷಕ: ಡಾ. ಪ್ರೀತ್