ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಪಟ್ಟಣದ ಹೇಮಾವತಿ ನದಿಯಲ್ಲಿ ೫೫ ದಿಂದ ೬೦ ವರ್ಷ ವಯೋಮಾನದ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಪಟ್ಟಣದ ಹೇಮಾವತಿ ನದಿಯಲ್ಲಿ ಗುರುವಾರ ಮಧ್ಯಾಹ್ನ ಮೃತದೇಹ ಪತ್ತೆಯಾಗಿದ್ದು, ಮೃತ ವ್ಯಕ್ತಿಯ ಕೊರಳಲ್ಲಿ ಕಂಬಳಿದಾರದಿಂದ ಕಟ್ಟಿದ ತಾಯತವಿದೆ ಮತ್ತು ಹಣೆಯ ಮೇಲ್ಭಾಗದಲ್ಲಿ ಕೂದಲು ಉದುರಿದೆ. ಮೃತ ವ್ಯಕ್ತಿಯ ಬಗ್ಗೆ ಮಾಹಿತಿ ಇದ್ದಲ್ಲಿ ಹತ್ತಿರದ ಪೊಲೀಸ್ ಠಾಣೆ ಅಥವಾ ನಗರ ಪೊಲೀಸ್ ಠಾಣೆ ದೂ. ಸಂಖ್ಯೆ ೦೮೧೭೫ ೨೭೩೩೩೩ ನಂಬರ್‌ಗೆ ಕರೆ ಮಾಡಿ ತಿಳಿಸಲು ಪೊಲೀಸ್ ಪ್ರಕಟಣೆ ತಿಳಿಸಿದೆ.