ಅಪರಿಚಿತ ಮಹಿಳೆ, ಪುರುಷ ಪ್ರತ್ಯೇಕವಾಗಿ ನೇಣು ಬಿಗಿದು ಆತ್ಮಹತ್ಯೆ

KannadaprabhaNewsNetwork |  
Published : Jun 14, 2025, 01:15 AM IST
ಆತ್ಮಹತ್ಯೆ | Kannada Prabha

ಸಾರಾಂಶ

ಸುಮಾರು 5 ಅಡಿ ಎತ್ತರ, ಬಿಳಿ ತಲೆಗೂದಲು, ನೇರಳೆ ಕೆಂಪು ಸೀರೆ ಧರಿಸಿದ್ದು, 60 ರಿಂದ 65 ವರ್ಷದ ಮಹಿಳೆ ಮತ್ತು 5.3 ಅಡಿ ಎತ್ತರ, ಬಿಳಿ ತಲೆಗೂದಲು, ಬಿಳಿ ಕುರುಚಲು ಗಡ್ಡ ಹೊಂದಿರುವ ತಿಳಿ ಹಸಿರು ಬಣ್ಣದ ಟೀ ಶರ್ಟ್, ಬೆಲ್ಟ್ , ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದು, 65 ರಿಂದ 70 ವರ್ಷದ ಪುರುಷ ಇಬ್ಬರೂ ಪ್ರತ್ಯೇಕವಾಗಿ ಮರಕ್ಕೆ ಪ್ಲಾಸ್ಟಿಕ್ ಹಗ್ಗದಿಂದ ನೇಣು ಬಿಗಿದುಕೊಂಡಿದ್ದು, ಸಂಪೂರ್ಣವಾಗಿ ಇಬ್ಬರ ಶವಗಳು ಕೊಳೆತಿವೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತಾಲೂಕಿನ ಬೆಳಗೊಳ ಗ್ರಾಮದ ಕೆ.ಆರ್.ಸಾಗರ- ಬೆಳಗೊಳ ರಸ್ತೆಯ ಈದ್ಗಾ ಮೈದಾನ ಬಳಿಯ ರಾಚಯ್ಯ ಎಂಬುವವರ ಜಮೀನಿನಲ್ಲಿ ಅಪರಿಚಿತ ಮಹಿಳೆ ಮತ್ತು ಪುರುಷ ಇಬ್ಬರೂ ಪ್ರತ್ಯೇಕವಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಶುಕ್ರವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

ಜಮೀನಿನ ಮಾಲೀಕ ರಾಚಯ್ಯ ಜೆಸಿಬಿ ಮೂಲಕ ಕೆಲಸ ಮಾಡಿಸುತ್ತಿದ್ದಾಗ ಹರಿಕ್ಯೂಲಸ್ ಮರಕ್ಕೆ ಪ್ಲಾಸ್ಟಿಕ್ ಹಗ್ಗದಿಂದ ಇಬ್ಬರ ಶವ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಕಂಡು ಬಂದಿದೆ. ತಕ್ಷಣ ಕೆ.ಆರ್.ಸಾಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಮಾಹಿತಿ ಮೇರೆಗೆ ಸ್ಥಳಕ್ಕೆ ಕೆ.ಆರ್.ಎಸ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸುಮಾರು 5 ಅಡಿ ಎತ್ತರ, ಬಿಳಿ ತಲೆಗೂದಲು, ನೇರಳೆ ಕೆಂಪು ಸೀರೆ ಧರಿಸಿದ್ದು, 60 ರಿಂದ 65 ವರ್ಷದ ಮಹಿಳೆ ಮತ್ತು 5.3 ಅಡಿ ಎತ್ತರ, ಬಿಳಿ ತಲೆಗೂದಲು, ಬಿಳಿ ಕುರುಚಲು ಗಡ್ಡ ಹೊಂದಿರುವ ತಿಳಿ ಹಸಿರು ಬಣ್ಣದ ಟೀ ಶರ್ಟ್, ಬೆಲ್ಟ್ , ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದು, 65 ರಿಂದ 70 ವರ್ಷದ ಪುರುಷ ಇಬ್ಬರೂ ಪ್ರತ್ಯೇಕವಾಗಿ ಮರಕ್ಕೆ ಪ್ಲಾಸ್ಟಿಕ್ ಹಗ್ಗದಿಂದ ನೇಣು ಬಿಗಿದುಕೊಂಡಿದ್ದು, ಸಂಪೂರ್ಣವಾಗಿ ಇಬ್ಬರ ಶವಗಳು ಕೊಳೆತಿವೆ.

ಮಂಡ್ಯ ಜಿಲ್ಲಾ ಸೋಕೊ ತಂಡ, ಮಂಡ್ಯ ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ ಮತ್ತು ಡಿವೈಎಸ್ಪಿ ಶಾಂತಮಲ್ಲಪ್ಪ ಸ್ಥಳಕ್ಕೆ ಭೇಟಿ ನೀಡಿ ಶವಗಳನ್ನು ಪರಿಶೀಲಿಸಿದರು.

ಸುಮಾರು 20 ರಿಂದ 25 ದಿನಗಳ ಹಿಂದೆ ಇಬ್ಬರೂ ಸಾವನ್ನಪ್ಪಿರಬಹುದೆಂದು ಪೊಲೀಸರು ಮತ್ತು ಸೋಕೊ ತಂಡ ಶಂಕೆ ವ್ಯಕ್ತಪಡಿಸಿದ್ದು, ಇಬ್ಬರ ಶವ ಕೂಡ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದ ಕಾರಣ ಮೈಸೂರು ಕೆ.ಆರ್.ಆಸ್ಪತ್ರೆ ಶವಾಗಾರದಲ್ಲಿ ಶವ ಪರೀಕ್ಷೆ ನಡೆಸಿ, ಸಮೀಪದ ರುದ್ರ ಭೂಮಿಯಲ್ಲಿ ಕೆ.ಆರ್.ಸಾಗರ ಪೊಲೀಸರು ಅಂತ್ಯಕ್ರಿಯೆ ನಡೆಸಿದರು.

ಈ ಇಬ್ಬರ ಬಗ್ಗೆ ಮಾಹಿತಿ ಇದ್ದರೆ ಅಥವಾ ಹೆಚ್ಚಿನ ಮಾಹಿತಿಗಾಗಿ ಕೆ.ಆರ್.ಸಾಗರ ಪೊಲೀಸ್ ಠಾಣೆ ಪಿ.ಎಸ್.ಐ ಮೊ ಸಂಖ್ಯೆ 9480804856 ಸಂಪರ್ಕಿಸಲು ಕೋರಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''