- ಸೌಮ್ಯ ಪ್ರದೀಪ್ ಗೌಡ, ಟ್ರಸ್ಟ್‌ನವರಿಂದ ₹2,21,550 ಮೊತ್ತದ ಚೆಕ್ ಹಸ್ತಾಂತರ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶಾಲಾ ಕಾರ್ಯಕ್ರಮದಲ್ಲಿ ಹೊನ್ನಾಳಿಯ ಎಚ್. ಕಡದಕಟ್ಟೆ ಸಮೀಪದ ಶ್ರೀ ಗುರುಕುಲ ಚಾರಿಟಬಲ್ ಟ್ರಸ್ಟ್ ವತಿಯಿಂದ ಶಾಲೆಯ ಅತ್ಯಂತ ಕಡು ಬಡ ಕುಟುಂಬದ ಮಕ್ಕಳಿಗೆ ಸಮವಸ್ತ್ರ ಹಾಗೂ ಟ್ರ್ಯಾಕ್ ಸೂಟ್ ಖರೀದಿಸಲು ಶಾಲೆ ಉಪ ಪಾಂಶುಪಾಲೆ ಕೆ.ರೇಣುಕಮ್ಮ ಮತ್ತು ಎಸ್.ಡಿ.ಎಂ.ಸಿ. ಸಮಿತಿಗೆ ಟ್ರಸ್ಟ್ ಕಾರ್ಯದರ್ಶಿ ಸೌಮ್ಯ ಪ್ರದೀಪ್ ಗೌಡ ಹಾಗೂ ಟ್ರಸ್ಟ್‌ನವರು ₹2,21,550 ಮೊತ್ತದ ಚೆಕ್ ಶಾಲೆಗೆ ದೇಣಿಗೆ ನೀಡಿದರು.ಶಾಲೆಗೆ ಚೆಕ್ ವಿತರಿಸಿದ ಟ್ರಸ್ಟ್ ಕಾರ್ಯದರ್ಶಿ ಸೌಮ್ಯ ಪ್ರದೀಪ್ ಗೌಡ ಮಾತನಾಡಿ, ಟ್ರಸ್ಟ್ ಅಧ್ಯಕ್ಷರು, ಸ್ಥಳೀಯ ಶಾಸಕರೂ ಆಗಿರುವ ಡಿ.ಜಿ.ಶಾಂತನಗೌಡ, ತಮ್ಮ ಮಾವನವರು. ಅವರು ಶಾಲಾ ಆರಂಭೋತ್ಸವ ಸಮಾರಂಭಕ್ಕೆ ಅಗಮಿಸಿದ್ದ ಸಂದರ್ಭ ಶಾಲೆಯ ಶಿಸ್ತಿಗೆ ಸಹಕಾರಿ ಆಗುತ್ತದೆ ಎಂಬ ಕಾರಣಕ್ಕೆ ಶಾಲಾ ಮುಖ್ಯಸ್ಥರು ಶಾಲಾ ಮಕ್ಕಳಿಗೆ ಸಮವಸ್ತ್ರ ಹಾಗೂ ಟ್ರ್ಯಾಕ್ ಶೋಟ್‌ಗಳನ್ನು ಪೋಷಕರು ಕೊಡಿಸಬೇಕೆಂದು ಸೂಚಿಸಿದ್ದರು. ಆಗ ಈ ಬಗ್ಗೆ ಕೆಲ ಪೋಷಕರಿಂದ ಅರ್ಥಿಕ ಹಿನ್ನಲೆ ಕಾರಣ ವಿರೋಧ ವ್ಯಕ್ತವಾಗಿತ್ತು ಎಂದರು.
ಶಾಲೆ ಉಪ ಪ್ರಾಂಶುಪಾಲೆ ಕೆ.ರೇಣುಕಮ್ಮ ಮಾತನಾಡಿ, ಸಾಮಾನ್ಯವಾಗಿ ಸರ್ಕಾರಿ ಶಾಲೆಗಳಲ್ಲಿ ತೀರಾ ಬಡ ಕುಟುಂಬಗಳಿಂದ ಬಂದ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿರುತ್ತಾರೆ. ಅವರ ಪೋಷಕರಿಗೆ ತಮ್ಮ ಮಕ್ಕಳಿಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಕೂಡ ಅಗದ ಪರಿಸ್ಥಿತಿಯಲ್ಲಿ ಇರುತ್ತಾರೆ. ಇದನ್ನು ಮನಗಂಡು ಗುರುಕುಲ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರು, ಸ್ಥಳೀಯ ಶಾಸಕರೂ ಅಗಿರುವ ಡಿ.ಜಿ.ಶಾಂತನಗೌಡ ಅವರು ಈ ಶಾಲೆ ಮಕ್ಕಳು ಸಮವಸ್ತ್ರ ಖರೀದಿಸಲಾಗದ ಸ್ಥಿತಿ ಇರುವುದನ್ನುಗುರುತಿಸಿ, ತಾವು ಟ್ರಸ್ಟ್ ವತಿಯಿಂದ ಧನಸಹಾಯ ಮಾಡುವುದಾಗಿ ಹೇಳಿದ್ದರು. ಜೊತೆಗೆ ಶಾಲೆಗೆ ಅಗತ್ಯವಿರುವ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹೇಳಿದ್ದರು. ಅವರ ಸೂಚನೆಯಂತೆ ಧನಸಹಾಯದ ಚೆಕ್ ನೀಡಲಾಗಿದೆ. ಇದಕ್ಕಾಗಿ ಅವರಿಗೆ ಹಾಗೂ ಟ್ರಸ್ಟ್ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
- - -
₹2.21 ಲಕ್ಷ ಮೊತ್ತದ ಚೆಕ್ ಉಪ ಪ್ರಾಂಶುಪಾಲೆ ರೇಣುಕಮ್ಮ ಅವರಿಗೆ ನೀಡಲಾಯಿತು.