ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಕಂಟೈನರ್ ಚಾಲಕನಾಗಿದ್ದ ಯಶವಂತ್ ಅಪಘಾತದಲ್ಲಿ ಮೃತಪಟ್ಟಿದ್ದರು ಹಾಗೂ ಅವರ ಮೃತದೇಹವನ್ನು ಸ್ವಗ್ರಾಮಕ್ಕೆ ತರಲು ಸಾಧ್ಯವಾಗದೇ ಪೋಷಕರು ಸಂಕಷ್ಟಕ್ಕೆ ಸಿಲುಕಿದ್ದರು. ಈ ವಿಷಯವನ್ನು ಗ್ರಾಮಸ್ಥರು ಶಾಸಕ ಎಚ್. ಡಿ. ರೇವಣ್ಣ ಅವರ ಗಮನಕ್ಕೆ ತಂದಿದ್ದಾರೆ. ಮಾಹಿತಿ ತಿಳಿದ ತಕ್ಷಣವೇ ಸ್ಪಂದಿಸಿದ ಶಾಸಕರು ಸಹೋದರ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮೊಬೈಲ್‌ನಲ್ಲಿ ಪರಿಸ್ಥಿತಿಯ ವಿವರ ನೀಡಿದ್ದಾರೆ. ಸಮಸ್ಯೆಗೆ ಸ್ಪಂದಿಸಿದ ಎಚ್. ಡಿ. ಕುಮಾರಸ್ವಾಮಿ ಅವರು ಮೃತ ಚಾಲಕನ ಪೋಷಕರಿಗೆ ಕರೆ ಮಾಡಿ ಸಾಂತ್ವನ ಹೇಳಿ, ಜಾರ್ಖಂಡ್‌ನಿಂದ ಮೃತದೇಹವನ್ನು ಸ್ವಗ್ರಾಮಕ್ಕೆ ತರಲು ಅಗತ್ಯ ವ್ಯವಸ್ಥೆ ಮಾಡುವುದಾಗಿ ತಿಳಿಸಿ, ಅದರಂತೆ ಸೋಮವಾರ ಮೃತದೇಹವು ಸ್ವಗ್ರಾಮಕ್ಕೆ ಆಗಮಿಸಿತು. ನಂತರ ಅಂತ್ಯಕ್ರಿಯೆ ನಡೆಯಿತು. ಮೃತರಿಗೆ ತಂದೆ- ತಾಯಿ, ಹಿರಿಯ ಸಹೋದರಿ ಇದ್ದಾರೆ. ಬಡ ರೈತ ಕುಟುಂಬದ ಆಧಾರ ಸ್ಥಂಬದಂತಿದ್ದ ಒಬ್ಬನೇ ಮಗನನ್ನು ಕಳೆದುಕೊಂಡಿದ್ದ ಪೋಷಕರ ಪರಿಸ್ಥಿತಿಯನ್ನು ಶಾಸಕ ರೇವಣ್ಣ ಅವರಿಗೆ ತಿಳಿಸಿದಾಗ ಪೋಷಕರ ಸಂಕಷ್ಟವನ್ನು ಅರ್ಥೈಸಿಕೊಂಡು, ಅಗತ್ಯ ವ್ಯವಸ್ಥೆ ಕಲ್ಪಿಸಿ, ಮೃತದೇಹ ತರಿಸಿಕೊಡುವಲ್ಲಿ ಶಾಸಕರ ಕಾರ್ಯ ಶ್ಲಾಘನೀಯ ಎಂದು ಅರ್ಚಕ ನಾಗರಾಜು ತಿಳಿಸಿದರು.