ರಾಷ್ಟ್ರಪತಿ ಜತೆ ಕೇಂದ್ರ ಸಚಿವಸೋಮಣ್ಣ ಆಫ್ರಿಕಾ ಪ್ರವಾಸ

KannadaprabhaNewsNetwork |  
Published : Nov 09, 2025, 02:15 AM IST
ಸೋಮಣ್ಣ  | Kannada Prabha

ಸಾರಾಂಶ

ಭಾರತ ಮತ್ತು ಅಂಗೋಲಾ ದೇಶಗಳ ನಡುವಿನ ಸಂಬಂಧದ 50 ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ನೇತೃತ್ವದ ನಿಯೋಗದಲ್ಲಿ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ನ.8ರಿಂದ 14ರ ವರೆಗೆ ಆಫ್ರಿಕಾದ ಅಂಗೋಲಾ ಮತ್ತು ಬೊಟ್ಸ್ವಾನಾ ದೇಶಗಳಿಗೆ ಪ್ರವಾಸಕ್ಕೆ ತೆರಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಭಾರತ ಮತ್ತು ಅಂಗೋಲಾ ದೇಶಗಳ ನಡುವಿನ ಸಂಬಂಧದ 50 ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ನೇತೃತ್ವದ ನಿಯೋಗದಲ್ಲಿ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ನ.8ರಿಂದ 14ರ ವರೆಗೆ ಆಫ್ರಿಕಾದ ಅಂಗೋಲಾ ಮತ್ತು ಬೊಟ್ಸ್ವಾನಾ ದೇಶಗಳಿಗೆ ಪ್ರವಾಸಕ್ಕೆ ತೆರಳಿದ್ದಾರೆ.

ಈ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಣ್ಣ ಅವರು, ರಾಷ್ಟ್ರಪತಿ ಮುರ್ಮು ಅವರ ನೇತೃತ್ವದಲ್ಲಿ 2 ದೇಶಗಳಿಗೆ 6 ದಿನಗಳ ಪ್ರವಾಸ ನಿಗದಿ ಮಾಡಲಾಗಿದೆ. ಈ ನಿಯೋಗದಲ್ಲಿ ಕೇಂದ್ರದ ಪರವಾಗಿ ನನಗೂ ಅವಕಾಶ ನೀಡಲಾಗಿದೆ. ಮೂವರು ಸಂಸದರೂ ಈ ನಿಯೋಗದಲ್ಲಿ ಇದ್ದಾರೆ. ನನಗೂ ಅವಕಾಶ ನೀಡಿದ ಪ್ರಧಾನಿ ಮೋದಿ ಮತ್ತು ರಾಷ್ಟ್ರಪತಿ ಮುರ್ಮು ಅವರಿಗೆ ಆಭಾರಿಯಾಗಿದ್ದಾನೆ. ತುಮಕೂರು ಹಾಗೂ ರಾಜ್ಯದ ಜನರ ಪರವಾಗಿ ಅನಂತ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.

ಭಾರತ ಮತ್ತು ಅಂಗೋಲಾ ನಡುವಿನ ರಾಜತಾಂತ್ರಿಕ ಸಂಬಂಧಕ್ಕೆ 50 ವರ್ಷ ತುಂಬಿದ ಸವಿನೆನಪಿಗಾಗಿ ವಾರ್ಷಿಕೋತ್ಸವ ಕಾರ್ಯಕ್ರಮ ಜರುಗಲಿದೆ. ಅಂಗೋಲಾ ದೇಶದ ಅಧ್ಯಕ್ಷರ ಆಮಂತ್ರಣದ ಮೇರೆಗೆ ರಾಷ್ಟ್ರಪತಿಗಳ ನೇತೃತ್ವದ ನಿಯೋಗವು ಪ್ರವಾಸ ಕೈಗೊಂಡಿದೆ. ಈ ಕಾರ್ಯಕ್ರಮದ ಬಳಿಕ ನಿಯೋಗವು ಬೊಟ್ಸ್ವಾನಾಕ್ಕೆ ತೆರಳಲಿದೆ. ಮೋದಿ ಅವರು ಈ ಎರಡೂ ರಾಷ್ಟ್ರಗಳ ನಡುವಿನ ಸಂಬಂಧ, ವ್ಯಾಪಾರ ಹಾಗೂ ಸ್ನೇಹವನ್ನು ಮುಂದುವರೆಸುವುದು ಮತ್ತು ದೇಶದ ಸರ್ವಾಂಗೀಣ ಅಭ್ಯುದಯಕ್ಕೆ ದೊಡ್ಡ ಅಡಿಪಾಯ ಹಾಕಿದ್ದಾರೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ನಿರಾಶ್ರಿತರಿಗೆ 5ರ ನಂತರ ವಸತಿ ಭಾಗ್ಯ
ಹೊಸ ವರ್ಷಕ್ಕೆ ಶೇ.40 ಮದ್ಯ ಮಾರಾಟ ಹೆಚ್ಚಳ!