-ಜಿಲ್ಲಾ ಬಣಜಿಗರ ಜಾಗೃತಿ ಚಿಂತನ ಮಂಥನ ಸಭೆಯ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಯಾದಗಿರಿಬಣಜಿಗರ ಸಮುದಾಯದ ಏಳ್ಗೆಗಾಗಿ ಶ್ರಮಿಸುವ ಸಮಯ ಬಂದಿದ್ದು, ಇದಕ್ಕಾಗಿ ಎಲ್ಲರೂ ಒಗ್ಗೂಡಿ ಮುಂದಡಿ ಇಡಬೇಕೆಂದು ಬಣಜಿಗರ ಕ್ಷೇಮಾಭಿವೃದ್ಧಿ ಸಂಘದ ನಿಕಟಪೂರ್ವ ರಾಜ್ಯಾಧ್ಯಕ್ಷ ಶಿವಬಸಪ್ಪ ಹೆಸರೂರು ಹೇಳಿದರು.
ನಗರದ ಚಾಮಾ ಫಂಕ್ಷನ್ ಹಾಲ್ ನಲ್ಲಿ ಜರುಗಿದ ಜಿಲ್ಲಾ ಬಣಜಿಗರ ಜಾಗೃತಿ ಚಿಂತನ ಮಂಥನ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಬಣಜಿಗ ಸಮಾಜ ನಿರಂತರವಾಗಿ ಎಲ್ಲರ ಏಳ್ಗೆಯನ್ನು ಬಯಸುತ್ತಾ ಬಂದು ತನ್ನ ಹಿತವನ್ನೇ ಮರೆತುಬಿಟ್ಟಿತ್ತು. ಈದೀಗ ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ಜಾಗೃತರಾಗುವತ್ತಾ, ಸಂಘಟಿತರಾಗುವತ್ತ ಹೆಜ್ಜೆ ಇರಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಬಣಜಿಗರ ಸಮಾಜದ ಹಿರಿಯ ಮುಖಂಡ ಬಸವರಾಜ ಜೈನ್ ಮಾತನಾಡಿ, ಬಣಜಿಗ ಸಮಾಜದ ಒಗ್ಗೂಡಿಸಲು ಕಳೆದ ಹಲವು ದಿನಗಳಿಂದ ನಡೆಸಿದ ಪ್ರಯತ್ನಕ್ಕೆ ಈದೀಗ ಫಲಪ್ರದವಾಗುತ್ತಿದೆ. ಸಮುದಾಯದವರಿಗೆ ಸಿಗಬೇಕಾದ ಸವಲತ್ತುಗಳು ಒದಗಿಸಿಕೊಡುವುದು ಜೊತೆಗೆ ಸಂಘಟಿತರಾಗುವುದು ಇಂದಿನ ಅಗತ್ಯ ಎಂದು ಹೇಳಿದರು.ಪ್ರಾಧ್ಯಾಪಕ ಪ್ರೊ. ಸಂಜಯ ಮಾಕಲ್ ಮಾತನಾಡಿ, ಬಣಜಿಗರು ಎಂದರೆ ವ್ಯಾಪಾರಸ್ಥರು ಎಂದರ್ಥ. ಕರ್ನಾಟಕದಲ್ಲಿ ಒಂದು ಕಾಲದಲ್ಲಿ ವಾರದ ಮಲ್ಲಪ್ಪ ಎಂಬ ದೊಡ್ಡ ಉದ್ಯಮಿ ರಾಜ್ಯದ ಬೆರಳೆಣಿಕೆ ಉದ್ಯಮಿಗಳಲ್ಲಿ 9ನೇ ಯವರಾಗಿದ್ದರು. ಆದರೆ, ಇಂದು ಯಾವೊಬ್ಬರೂ ಇಲ್ಲದಿರುವುದು ನಮ್ಮ ಸಮುದಾಯ ಅಧ:ಪತನಕ್ಕೆ ಇಳಿದಿರುವುದರ ದ್ಯೋತಕವಾಗಿದೆ. ಇದಕ್ಕೆ ಜಾಗೃತಿಯ ಕೊರತೆಯೇ ಕಾರಣವಾಗಿದೆ ಎಂದರು.
ದೊಡ್ಡ ದೊಡ್ಡ ಉದ್ದಿಮೆಗಳು ಸ್ಥಾಪಿಸಬೇಕು. ವ್ಯಾಪಾರ ವಹಿವಾಟನ್ನು ವಿಸ್ತರಿಸಿಕೊಳ್ಳಬೇಕು. ಆದರೆ, ಇದಾವುದು ಮಾಡದೇ ಸಂಘಟಿತರಾಗದೇ ಇರುವುದರಿಂದ ಎಲ್ಲದರಿಂದ ದೂರವಾಗಿದ್ದೇವೆ. ಧರ್ಮ, ಆಚಾರ-ವಿಚಾರಗಳ ಜೊತೆಗೆ ವ್ಯವಹಾರ, ವ್ಯಾಪಾರ ಮಾಡುವುದರಿಂದ ಮತ್ತೆ ಗತವೈಭವ ಪಡೆಯಲು ಸಾಧ್ಯ ಎಂದು ಹೇಳಿದರು.ಮುಖಂಡರಾದ ಶರಣು ದಂಡಿನ ಹುಣಸಗಿ, ಸೂಗೂರೇಶ ವಾರದ ಸುರಪುರ, ಲಕ್ಷ್ಮಿಕಾಂತ ಪಾಟೀಲ್ ಮದ್ದರಕಿ (ಕಾಂತು ಪಾಟೀಲ್) ಮತ್ತು ಚೆನ್ನಬಸವರಾಜ ವಾಲಿ ಸಾಹುಕಾರ ಮಾತನಾಡಿ, ಸಮಾಜದಕ್ಕೆ 2ಎ ಮೀಸಲಾತಿ ಸರಿಯಾಗಿ ಪಡೆದುಕೊಂಡು ಏಳ್ಗೆ ಹೊಂದುವ ನಿಟ್ಟಿನಲ್ಲಿ ಶ್ರಮಿಸಬೇಕೆಂದು ಸಲಹೆ ನೀಡಿದರು.
ಮುಖಂಡ ವಿಲಾಸ್ ಪಾಟೀಲ್ ಮಾತನಾಡಿ, ಮುಂಬರುವ ಮೂರು ತಿಂಗಳಲ್ಲಿ ಸಮಾಜದ ಸಂಘಟನೆ ಬಲಿಷ್ಠಗೊಳಿಸಲಾಗುವುದು. ಇದಕ್ಕಾಗಿ ಎಲ್ಲ ಗುರು ಹಿರಿಯರು ಸಲಹೆ ಸೂಚನೆ ನೀಡಿ ಮಾರ್ಗದರ್ಶನ ಮಾಡಬೇಕೆಂದರು. ಆರಂಭದಲ್ಲಿ ಯುವ ಮುಖಂಡ ಸಮಾಜ ಸಂಘಟಕರಾದ ಶಿವರಾಜ ಕಲ್ಕೇರಿ ಮಾತನಾಡಿದರು.ಬನ್ನಪ್ಪ ಸುಂಕದ, ಚಂದ್ರಶೇಖರ ಸುಬೇದಾರ, ಮಹೇಶ್ವಂದ್ರ ವಾಲಿ, ಮಹೇಶ ಆನೆಗುಂದಿ, ಶರಣಪ್ಪ ಕಲಕೇರಿ, ಮಹೇಶ ಗಂವಾರ, ವೀಣಾ ಮೋದಿ, ಮಲ್ಲಣ್ಣ ಸಾಹು ಮುಧೋಳ, ಇಂದೂಧರ ಸಿನ್ನೂರ, ಬಂದಪ್ಪ ಸಾಹು ಅರಳಿ, ಶರಣಪ್ಪ ಸಾಹು ಬಂಡೊಳ್ಳಿ ಕೆಂಭಾವಿ, ಸೂಗೂರೇಶ ವಾರದ ಸುರಪುರ, ಬಸಣ್ಣ ದೇಸಾಯಿ ಹುಣಸಗಿ, ಶರಣು ಬಿ. ಪಡೆಶೆಟ್ಟಿ ವಡಗೇರಿ, ದೇವಿಂದ್ರಪ್ಪ ಮಾಲಗತ್ತಿ, ಭೀಮರಾಯ ಸಾಹು ದೇವತ್ಕಲ್, ವೀರೇಶ ನಿಷ್ಟಿ ಇತರರಿದ್ದರು. ರಾಘವೇಂದ್ರ ಸುಗಂಧಿ ಗೋಗಿ ನಿರೂಪಿಸಿದರು. ಶಂಕ್ರಣ್ಣ ಸಾಹು ಕರಣಿಗಿ ವಂದಿಸಿದರು.
-6ವೈಡಿಆರ್15: ಯಾದಗಿರಿ ನಗರದ ಚಾಮಾ ಫಂಕ್ಷನ್ ಹಾಲ್ ನಲ್ಲಿ ನಡೆದ ಜಿಲ್ಲಾ ಬಣಜಿಗರ ಜಾಗೃತಿ ಚಿಂತನ ಮಂಥನ ಸಭೆಯ ಉದ್ಘಾಟನೆ ನೆರವೇರಿತು.
-6ವೈಡಿಆರ್16: ಯಾದಗಿರಿ ನಗರದ ಚಾಮಾ ಫಂಕ್ಷನ್ ಹಾಲ್ ನಲ್ಲಿ ನಡೆದ ಜಿಲ್ಲಾ ಬಣಜಿಗರ ಜಾಗೃತಿ ಚಿಂತನ ಮಂಥನ ಸಭೆಯಲ್ಲಿ ಭಾಗವಹಿಸಿದ್ದ ಸಮುದಾಯದ ಮುಖಂಡರು.