ಹಿಂದುಳಿದ ವರ್ಗ ಒಗ್ಗೂಡಿಸಿ ಬಿಜೆಪಿಗೆ ಶಕ್ತಿ ತುಂಬಿ

KannadaprabhaNewsNetwork |  
Published : Nov 06, 2026, 02:45 AM IST
ಕುರುಗೋಡಿನಲ್ಲಿ 01 ಪಟ್ಟಣದ ಬಿಜೆಪಿ ಕಚೇರಿಯಲ್ಲಿ  ಗುರುವಾರ ಜರುಗಿದ ಬಿಜೆಪಿ ಒಬಿಸಿ ಮೋರ್ಚಾ ಪದಗ್ರಹಣ ಕಾರ್ಯಕ್ರಮದಲ್ಲಿ ಜಿಲ್ಲಾ ಅಧ್ಯಕ್ಷ ತಿರುಮಲ ಮಾತನಾಡಿದರು | Kannada Prabha

ಸಾರಾಂಶ

ಕುರುಬ ಸಮಾಜದವರು ಮಾತ್ರ ಹಿಂದುಳಿದ ವರ್ಗದವರು ಎಂದು ಕಾಂಗ್ರೆಸ್ ಪಕ್ಷ ಬಿಂಬಿಸುತ್ತಿದೆ.

ಕುರುಗೋಡು: ಹಿಂದುಳಿದ ವರ್ಗಗಳನ್ನು ಸಂಘಟಿಸಿ ಬಿಜೆಪಿಗೆ ಮತ್ತಷ್ಟು ಶಕ್ತಿ ತುಂಬುವುದು ನಮ್ಮ ಸಂಕಲ್ಪವಾಗಿದೆ ಎಂದು ಬಿಜೆಪಿ ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ತಿರುಮಲ ಹೇಳಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಹಿಂದುಳಿದ ವರ್ಗಗಳ ಒಬಿಸಿ ವಿಭಾಗದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕುರುಬ ಸಮಾಜದವರು ಮಾತ್ರ ಹಿಂದುಳಿದ ವರ್ಗದವರು ಎಂದು ಕಾಂಗ್ರೆಸ್ ಪಕ್ಷ ಬಿಂಬಿಸುತ್ತಿದೆ. ಹಿಂದುಳಿದ ವರ್ಗಕ್ಕೆ ಸೇರಿದ ಹಲವಾರು ಸಮಾಜದವರನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿದರು.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಟಿ.ಎಚ್.ಸುರೇಶ್ ಬಾಬು ಅವರನ್ನು ಬೆಂಬಲಿಸುವ ಮೂಲಕ ಹಿಂದುಳಿದ ವರ್ಗಗಳ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡೋಣ ಎಂದರು.

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ವೈ. ತಿಮ್ಮಾರೆಡ್ಡಿ ಮಾತನಾಡಿ, ಕಾಂಗ್ರೆಸ್ ಪಕ್ಷ ಸಮಾಜಗಳ ಮಧ್ಯೆ ಕಂದಕ ಸೃಷ್ಟಿಸಿ ಜಾತಿ ಕಲಹಕ್ಕೆ ಕಾರಣವಾಗುತ್ತಿದೆ. ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ಐಕ್ಯತೆ ಮೂಡಿಸುವ ಕೆಲಸ ಮಾಡಿದೆ ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ಮದಿರೆ ಕುಮಾರಸ್ವಾಮಿ ಮಾತನಾಡಿ, ೧೦೦ ಹಾಸಿಗೆ ಆಸ್ಪತ್ರೆ ಕಟ್ಟಡ, ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣ ಪೂರ್ಣಗೊಂಡರು ಶಾಸಕರು ಉದ್ಘಾಟನೆಗೆ ಆಸಕ್ತಿ ತೋರುತ್ತಿಲ್ಲ. ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆಯಿಂದ ಚಿಕಿತ್ಸೆ ದೊರೆಯುತ್ತಿಲ್ಲ. ಡಯಾಲಿಸಿಸ್ ಕೇಂದ್ರ ಘಟಕ ಶಾಸಕರು ಉದ್ಘಾಟಿಸಿದ್ದಾರೆ. ಆರಂಭಿಸಿದರೂ ಕಾರ್ಯ ನಿರ್ವಹಿಸುತ್ತಿಲ್ಲ ರೋಗಿಗಳಿಗೆ ರಕ್ತ ಶುದ್ಧೀಕರಣಕ್ಕಾಗಿ ದೂರದ ಬಳ್ಳಾರಿಗೆ ಹೋಗಿ ಚಿಕಿತ್ಸೆ ಪಡೆಯಬೇಕಿದೆ ಎಂದು ಆರೋಪಿಸಿದರು.

ಬಿಜೆಪಿ ಹಿಂದುಳಿದ ವರ್ಗಗಳ ವಿಭಾಗದ ಮಂಡಲ ಅಧ್ಯಕ್ಷ ಆಗಲೂರು ಸುರೇಶ್ ಬಾಬು ಮಾತನಾಡಿದರು.

ಬಿಜೆಪಿ ವಿವಿಧ ವಿಭಾಗದ ಪದಾಧಿಕಾರಿ ಆಗಲೂರು ಲತಾ, ಬಿ. ವೀರಭದ್ರಗೌಡ, ನಟರಾಜ ಗೌಡ, ತಿಪ್ಪೇರುದ್ರಗೌಡ, ವೀರನಗೌಡ, ಕೆ.ವಿರುಪಾಕ್ಷಗೌಡ, ಬಾಸ ರವಿರೆಡ್ಡಿ, ಪುರಸಭೆ ಸದಸ್ಯ ನರಸಪ್ಪ ಯಾದವ್, ಮೇಲಗಿರಿ ಬಸವರಾಜ, ಪುರಸಭೆ ಸದಸ್ಯ ವೀರೇಶ್ ವಡ್ಡರ, ಹೂಗಾರ್ ಯೋಗೇಶ್, ಗುರುರಾಜ ವಡ್ಡರ, ಶರತ್ ಗೌಡ ಮತ್ತು ಕೆ.ಶಂಕ್ರಪ್ಪ ಇದ್ದರು.

ಕುರುಗೋಡ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಗುರುವಾರ ಜರುಗಿದ ಬಿಜೆಪಿ ಒಬಿಸಿ ಮೋರ್ಚಾ ಪದಗ್ರಹಣ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ತಿರುಮಲ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸುಬ್ರಹ್ಮಣ್ಯ: ನೀರಿಗೆ ಹಾರಿ ಆತ್ಮಹತ್ಯೆ ಗೆ ಯತ್ನಿಸಿದ ಮಹಿಳೆ
ಬ್ರಹ್ಮಾವರ: ಬಾಳೆಕುದ್ರು ಮಠದ ಶ್ರೀಗಳು ನಾಪತ್ತೆ !