ಛಲವಾದಿಗಳಲ್ಲಿ ಸಂಘಟನೆ ಒಗ್ಗಟ್ಟು ಮುಖ್ಯ: ಡಿ.ಪ್ರೇಮಕುಮಾರ್

KannadaprabhaNewsNetwork |  
Published : Jul 05, 2026, 01:45 AM IST
4ಕೆಎಂಎನ್ ಡಿ22 | Kannada Prabha

ಸಾರಾಂಶ

ಛಲವಾದಿ ಸಂಘವನ್ನು ಐಐಎಸ್‌ ಅಧಿಕಾರಿ ದಿ.ಕೆ.ಶಿವರಾಂ ಸ್ಥಾಪನೆ ಮಾಡಿದ್ದು, ಇವರ ಆಶಯದಂತೆ ಸಂಘಟಿತರಾಗಿ ಸರ್ಕಾರದಿಂದ ಸಿಗುವ ಸವಲತ್ತು ಸಮರ್ಪಕವಾಗಿ ಪಡೆದು ಸಾಮಾಜಿಕ ಕಳಕಳಿ, ಸಮುದಾಯದ ಅಭಿವೃದ್ಧಿಗೆ ಮುಂದಾಗಬೇಕು.

ಕಿಕ್ಕೇರಿ: ಛಲವಾದಿ ಸಂಘದಲ್ಲಿ ಸಂಘಟನೆಗಾಗಿ ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಛಲವಾದಿ ಮಹಾಸಭಾ ರಾಜ್ಯ ಸಮಿತಿ ಸದಸ್ಯ ಡಿ.ಪ್ರೇಮಕುಮಾರ್ ತಿಳಿಸಿದರು.

ಪ್ರವಾಸಿ ಮಂದಿರ ಬಳಿಯ ಬಯಲು ರಂಗ ಮಂದಿರದಲ್ಲಿ ಛಲವಾದಿ ಮಹಾಸಭಾ ಸಂಘದವರು ಆಯೋಜಿಸಿದ್ದ ಹೋಬಳಿ ಮಟ್ಟದ ಸಮಾಲೋಚನಾ ಸಭೆಯಲ್ಲಿ ಮಾತನಾಡಿ, ಸಂಘವನ್ನು ಐಐಎಸ್‌ ಅಧಿಕಾರಿ ದಿ.ಕೆ.ಶಿವರಾಂ ಸ್ಥಾಪನೆ ಮಾಡಿದ್ದು, ಇವರ ಆಶಯದಂತೆ ಸಂಘಟಿತರಾಗಿ ಸರ್ಕಾರದಿಂದ ಸಿಗುವ ಸವಲತ್ತು ಸಮರ್ಪಕವಾಗಿ ಪಡೆದು ಸಾಮಾಜಿಕ ಕಳಕಳಿ, ಸಮುದಾಯದ ಅಭಿವೃದ್ಧಿಗೆ ಮುಂದಾಗಬೇಕು ಎಂದರು.

ಕಿಕ್ಕೇರಿ ಹೋಬಳಿ ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ತಾಲೂಕು ಅಧ್ಯಕ್ಷ ಊಚನಹಳ್ಳಿ ನಟರಾಜು, ಗೌರವಾಧ್ಯಕ್ಷ ಸೋಮ ಸುಂದರ್, ಕಾರ್ಯದರ್ಶಿ ನರಸಿಂಹ, ಕಿಕ್ಕೇರಿ ಮುರುಳೀಧರ್ ಮತ್ತಿತರರು ಇದರು.ಛಲವಾದಿ ಸಂಘದ ನೂತನ ಪದಾಧಿಕಾರಿಗಳು ಆಯ್ಕೆ

ಕಿಕ್ಕೇರಿ:

ಛಲವಾದಿ ಸಂಘ ಹೋಬಳಿ ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಬೀಚೇನಹಳ್ಳಿ ಸಣ್ಣಯ್ಯ(ಗೌರವಾಧ್ಯಕ್ಷ), ಕಳ್ಳನಕೆರೆ ಕೆ.ಆರ್.ಶಂಕರ್(ಅಧ್ಯಕ್ಷ), ಬಸವನಹಳ್ಳಿ ಚಂದ್ರ(ಉಪಾಧ್ಯಕ್ಷ), ಬೋಳಮಾರನಹಳ್ಳಿ ವೆಂಕಟೇಶ್(ಕಾರ್ಯದರ್ಶಿ) ಮಾರ್ಗೋನಹಳ್ಳಿ ರುದ್ರೇಶ್(ಖಜಾಂಚಿ), ಸದಸ್ಯರು- ಚೌಡೇನಹಳ್ಳಿ ದೇವರಾಜು, ಲಿಂಗಾಪುರ ಬಸವರಾಜು, ಸ್ವಾಮಿ, ಕಿಕ್ಕೇರಿ ಮುರುಳಿ, ಐಕನಹಳ್ಳಿ ಐ.ಕೆ. ಮಂಜು, ಜಗದೀಶ್, ಮಾದಿಹಳ್ಳಿ ರಘು, ಯಲಾದಹಳ್ಳಿ ಶಂಭುಲಿಂಗಯ್ಯ, ತುಳಸಿ ಕರಿಯಪ್ಪ, ವಡ್ಡರಹಳ್ಳಿ ರಮೇಶ್, ಜಕ್ಕನಹಳ್ಳಿ ಲಕ್ಷ್ಮೀನಾರಾಯಣ, ಕೃಷ್ಣಾಪುರ ಶಿವು, ತೆಂಗಿನಘಟ್ಟ ಮಹೇಶ್‌ ಆಯ್ಕೆಯಾದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಾಗಶೆಟ್ಟಹಳ್ಳಿ ಬಳಿ ಮಲತ್ಯಾಜ್ಯ ಸಂಸ್ಕರಣ ಘಟಕ ಉದ್ಘಾಟನೆ
ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ