ಗದಗ: ಜಾತಿ ಸಮೀಕ್ಷೆ ಹೆಸರಿನಲ್ಲಿ ಸರ್ಕಾರ ವೀರಶೈವ ಲಿಂಗಾಯತ ಸಮಾಜ ಒಡೆಯುವ ಹುನ್ನಾರ ನಡೆಸಿದ್ದು, ಇದರ ವಿರುದ್ಧ ಒಗ್ಗಟ್ಟು ಪ್ರದರ್ಶಿಸಲು ಸ್ವಾಮೀಜಿಗಳ ಮುಂದಾಳತ್ವದಲ್ಲಿ ಸೆ.19 ರಂದು ಹುಬ್ಬಳ್ಳಿಯಲ್ಲಿ ಏಕತಾ ಸಮಾವೇಶ ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಕತಾ ಸಮಾವೇಶಕ್ಕೆ ಸ್ವಾಮೀಜಿಗಳು ಮುಂದಾಳತ್ವ ವಹಿಸಿದ್ದಾರೆ. ಅದಕ್ಕೆ ಅಖಿಲ ಭಾರತ ವೀರಶೈವ ಮಹಾಸಭಾ ಕೈಜೊಡಿಸಿದೆ. ನಾನು ವೀರಶೈವ ಮಹಾಸಭಾ ಜತೆಗೆ ಮಾತನಾಡುತ್ತಿದೇನೆ. ಸಮಾಜದಲ್ಲಿ ಒಡೆಯುವ ರಣತಂತ್ರ ಸರ್ಕಾರ ಮಾಡುತ್ತಿದೆ. ಸರ್ಕಾರದ ವಿರುದ್ಧ ಇಡೀ ಸಮಾಜ ಒಂದುಗೂಡಿಸುವುದು ಅವಶ್ಯವಾಗಿ ಬೇಕಾಗಿದೆ.ಸರ್ಕಾರ ಕ್ರಿಶ್ಚಿಯನ್ ಅಂತಾ ಎಲ್ಲ ಜಾತಿಯಲ್ಲಿ ಉಲ್ಲೇಖ ಮಾಡಿದೆ. ಲಿಂಗಾಯತರು, ಬ್ರಾಹ್ಮಣರು, ಒಕ್ಕಲಿಗರು, ಎಸಿ ಎಸ್ಟಿ, ಒಬಿಸಿಯನ್ನು ಬಿಟ್ಟಿಲ್ಲ.ಯಾವುದೇ ಸಮೀಕ್ಷೆಯಲ್ಲಿ ಮತಾಂತರಕ್ಕೆ ಬೇರೆ ಕೋಡ್ ಇಲ್ಲ.ಆದರೆ, ಈಗ ಯಾರು ಹುಟ್ಟು ಹಾಕಿದ್ದಾರೊ ಗೊತ್ತಿಲ್ಲ. ಕಾಂತರಾಜು ಕಮಿಟಿ ಏನು ಸಂವಿಧಾನದ ಪ್ರಕಾರ ಆಗಿತ್ತಾ ಸಿದ್ದರಾಮಯ್ಯನವರೇ ಕಾಂತರಾಜು ಕಮಿಟಿ ಮಾಡಿದ್ದು ಅದೇನು ದೊಡ್ಡ ಸ್ಯಾಂಟಿಟಿನಾ ಎಂದು ಪ್ರಶ್ನಿಸಿದರು.
ಬೇರೆ ಜಾತಿಯಲ್ಲಿ ಉಪಜಾತಿ ಸೃಷ್ಟಿ ಮಾಡಿದ್ದಾರೆ. ವೀರಶೈವ ಲಿಂಗಾಯತ, ಲಿಂಗಾಯತ ವೀರಶೈವ ಅಂತಾ ಮಾಡಿದ್ದಾರೆ. ಇಂತಹ ನೂರಾರು ಉದಾಹರಣೆಗಳು ಆಗಿವೆ. ಎಲ್ಲ ಸಮಾಜದಲ್ಲಿ ಗೊಂದಲ ಹಿಡಿಸಿದ್ದಾರೆ. ಸಮಾಜವನ್ನು ಒಡೆದು ಚೂರು ಚೂರು ಮಾಡಿದ್ದಾರೆ. ಇದೊಂದು ಕೇವಲ ಹೈಕಮಾಂಡ್ ಒಲೈಸುವಂತಹ ರಾಜಕೀಯ ನಿರ್ಧಾರ ಸಿದ್ದರಾಮಯ್ಯ ಮಾಡಿದ್ದಾರೆ.ರಾಜ್ಯ ಸರ್ಕಾರಕ್ಕೆ ಮನೆ ಮನೆಗೆ ಹೋಗಿ ಗಣತಿ ಮಾಡುವ ಅಧಿಕಾರ ಇಲ್ಲ. ಸೆನ್ಸಸ್ ಆಕ್ಟ್ ಇದೆ. ಕೇಂದ್ರ ಸರ್ಕಾರಕ್ಕೆ ಗಣತಿ ಮಾಡುವ ಅಧಿಕಾರ ಇದೆ. ಇದರಿಂದ ಗೊಂದಲ ಉಂಟಾಗಿದೆ. ಗೊಂದಲ ನಿವಾರಣೆ ಮಾಡಿ, ಕಾನೂನು ಬದ್ಧವಾಗಿ ಮಾಡುವವರೆಗೂ ಗೊಂದಲ ಇದ್ದೆ ಇರುತ್ತದೆ. ಕೇಂದ್ರ ಸರ್ಕಾರ ಜನಗಣತಿ ಜತೆಗೆ ಜಾತಿ ಗಣತಿ ಮಾಡುವುದಾಗಿ ಈಗಾಗಲೇ ಹೇಳಿದೆ ಎಂದು ಹೇಳಿದರು.