ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ವಿವಿ ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯು ಮಾಳವಿಯ ಮಿಷನ್ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಿಗಾಗಿ ಆಯೋಜಿಸಿರುವ 52ನೇ ಕನ್ನಡ ಪುನಶ್ಚೇತನ ಶಿಬಿರದಲ್ಲಿ ಹರಿಹರ ಮತ್ತು ಸಾಮಾಜಿಕತೆ, ರಾಘವಾಂಕ ಮತ್ತು ಸಾಮಾಜಿಕತೆ ಕುರಿತು ಅವರು ಸೋಮವಾರ ವಿಚಾರ ಮಂಡಿಸಿದರು.
ಕನ್ನಡ ಸಾಹಿತ್ಯದ ಮೊದಲ ಬಂಡಾಯಗಾರ ಹರಿಹರ. ಹರಿಹರನಲ್ಲಿ ಭಕ್ತ ದೇವರಿಗಿಂತಲೂ ದೊಡ್ಡವನು. ಭಕ್ತಿ, ಧ್ಯಾನ ಪಡೆಯುವುದಕ್ಕಲ್ಲ. ಅವು ಆತ್ಮ ಸಂತೋಷಕ್ಕಾಗಿ. ಹರಿಹರನ ಮಾದಾರ ಚನ್ನಯ್ಯನ ರಗಳೆಯಲ್ಲಿ ಭಕ್ತಿ ಬಹುದೊಡ್ಡ ಮೌಲ್ಯವಾದರೆ, ರಾಘವಾಂಕನ ಹರಿಶ್ಚಂದ್ರ ಕಾವ್ಯದಲ್ಲಿ ಸತ್ಯ ಬಹುದೊಡ್ಡ ಮೌಲ್ಯವಾಗಿ ಸ್ವೀಕೃತವಾಗುತ್ತದೆ. ಈ ಕಾವ್ಯವನ್ನು ಜನ ಕೇಳಿ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.ವಚನ ಚಳವಳಿಯು ಸಂತ ಮಾರ್ಗ. ಹಿಂದಿನ ಯುದ್ಧ ಮಾರ್ಗಕ್ಕಿಂತ ಭಿನ್ನವಾದದ್ದು. ಕಾಂಚಾಣವೆಂಬ ನಾಯನೆಚ್ಚಿ ಕೆಟ್ಟನಯ್ಯ ಎನ್ನುತ್ತಾರೆ ಬಸವಣ್ಣ. ವಚನ ಸಾಹಿತ್ಯ ಸ್ವಾನುಭವದ ಮಾತುಗಳಿಂದ ಕೂಡಿದೆ. ಇದರ ಬಹುದೊಡ್ಡ ಆಶಯ ಕಾಯಕ ಎಂದರು.
ಶಿಬಿರದ ಸಂಯೋಜಕ, ಪ್ರಸಾರಾಂಗದ ನಿರ್ದೇಶಕ ಡಾ. ನಂಜಯ್ಯ ಎಂ. ಹೊಂಗನೂರು, ಮಾಳವಿಯ ಮಿಷನ್ ಶಿಕ್ಷಕ ತರಬೇತಿ ಕೇಂದ್ರ ನಿರ್ದೇಶಕಿ ಪ್ರೊ.ಎಚ್.ಪಿ. ಜ್ಯೋತಿ, ಸಹಾಯಕ ಪ್ರಾಧ್ಯಾಪಕ ಡಾ.ಎಲ್. ನಂಜುಂಡಸ್ವಾಮಿ ಇದ್ದರು.