ದಿ.ಟೌನ್ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷೆ ಸ್ಥಾನಕ್ಕೆ ಅವಿರೋಧ ಆಯ್ಕೆ

KannadaprabhaNewsNetwork | Published : Feb 27, 2024 1:30 AM

ಸಾರಾಂಶ

ಸೋಮವಾರ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಒಮ್ಮತದ ಅಭ್ಯರ್ಥಿಗಳಾಗಿ ಅಧ್ಯಕ್ಷ ಸ್ಥಾನಕ್ಕೆ ಎಚ್.ಆರ್.ರಾಮೇಗೌಡ, ಉಪಾಧ್ಯಕ್ಷ ಸ್ಥಾನಕ್ಕೆ ವಿದ್ಯಾಕೃಷ್ಣ ಮಾತ್ರ ನಾಪಪತ್ರ ಸಲ್ಲಿಸಿದ್ದರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ಇಲ್ಲಿಯ ದಿ.ಟೌನ್ ಬ್ಯಾಂಕ್ ನ ನೂತನ ಅಧ್ಯಕ್ಷರಾಗಿ ಎಚ್.ಆರ್.ರಾಮೇಗೌಡ, ಉಪಾಧ್ಯಕ್ಷರಾಗಿ ವಿದ್ಯಾಕೃಷ್ಣ ಅವಿರೋಧ ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ನಡೆದಿದ್ದ ಬ್ಯಾಂಕ್ ನ ಚುನಾವಣೆಯಲ್ಲಿ ನಾಗರಿಕ ವೇದಿಕೆಯಿಂದ ಸ್ಪರ್ಧಿಸಿದ್ದ ೧೩ ಮಂದಿಯ ಪೈಕಿ ೧೧ ಮಂದಿ ಚುನಾಯಿತರಾಗಿದ್ದರು. ಸೋಮವಾರ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಒಮ್ಮತದ ಅಭ್ಯರ್ಥಿಗಳಾಗಿ ಅಧ್ಯಕ್ಷ ಸ್ಥಾನಕ್ಕೆ ಎಚ್.ಆರ್.ರಾಮೇಗೌಡ, ಉಪಾಧ್ಯಕ್ಷ ಸ್ಥಾನಕ್ಕೆ ವಿದ್ಯಾಕೃಷ್ಣ ಮಾತ್ರ ನಾಪಪತ್ರ ಸಲ್ಲಿಸಿದ್ದರು. ಚುನಾವಣಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದ ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ರವರು ಇಬ್ಬರ ಹೆಸರನ್ನು ಪ್ರಕಟಿಸಿದರು.

ಅಧ್ಯಕ್ಷರಾಗಿ ಆಯ್ಕೆಗೊಂಡ ಎಚ್.ಆರ್.ರಾಮೇಗೌಡ ಮಾತನಾಡಿ, ಬ್ಯಾಂಕ್ ನಲ್ಲಿ ಸುಮಾರು ೩ ಸಾವಿರಕ್ಕೂ ಹೆಚ್ಚು ಸದಸ್ಯರಿದ್ದಾರೆ. ಇವರಲ್ಲಿ ಕಡಿಮೆ ಹಣ ಕಟ್ಟಿದ್ದ ಷೇರುದಾರರೇ ಹೆಚ್ಚಿದ್ದಾರೆ. ಅವರು ಸಂಘದ ನಿಯಮಾನುಸಾರ ನಿಗದಿತ ಹಣ ಕಟ್ಟಿ ಸಂಘದ ಷೇರುದಾರರಾಗಬೇಕೆಂದು ವಿನಂತಿಸಿಕೊಂಡರು. ಅಲ್ಲದೇ ಹೆಚ್ಚು ಷೇರುದಾರರನ್ನಾಗಿ ಮಾಡಿ ಬ್ಯಾಂಕ್ ನ ಅಭಿವೃದ್ಧಿಗೆ ಒತ್ತು ನೀಡುವುದಾಗಿ ಹೇಳಿದರು.

ನೂತನ ಉಪಾಧ್ಯಕ್ಷೆ ವಿದ್ಯಾಕೃಷ್ಣ ಮಾತನಾಡಿ, ದಿ.ಟೌನ್ ಬ್ಯಾಂಕ್ ನಲ್ಲಿ ಮಹಿಳೆಯರಿಗೆ ಹೆಚ್ಚಿನ ಹುದ್ದೆ ನೀಡಿರುವುದು ಅಪರೂಪದಲ್ಲಿ ಅಪರೂಪ. ಆದರೆ ನಾಗರಿಕ ವೇದಿಕೆಯ ಆಶ್ರಯದಲ್ಲಿ ಸ್ಪರ್ಧಿಸಿದ್ದ ತಮಗೆ ಉಪಾಧ್ಯಕ್ಷೆ ಸ್ಥಾನ ನೀಡಿರುವುದು ಸಂತಸ ತಂದಿದೆ ಎಂದು ಹೇಳಿದರು.

ಸಂಘದ ಅಭಿವೃದ್ಧಿಗೆ ಹಾಗೂ ಮಹಿಳೆಯರಿಗೆ ಅನುಕೂಲವಾಗುವ ಯೋಜನೆಗಳನ್ನು ಜಾರಿಗೆ ತಂದು ಬ್ಯಾಂಕ್ ಅಭಿವೃದ್ಧಿಯೊಂದಿಗೆ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಕಾರ್ಯಗಳನ್ನು ಹಮ್ಮಿಕೊಳ್ಳಲು ಶ್ರಮಿಸುವುದಾಗಿ ವಿದ್ಯಾಕೃಷ್ಣ ಹೇಳಿದರು.

ನೂತನ ಅಧ್ಯಕ್ಷ ಎಚ್.ಆರ್.ರಾಮೇಗೌಡ ಮತ್ತು ಉಪಾಧ್ಯಕ್ಷೆ ವಿದ್ಯಾಕೃಷ್ಣರನ್ನು ನಿರ್ದೇಶಕ ಎನ್.ಆರ್.ಸುರೇಶ್, ಆನಂದ್ ಕುಮಾರ್, ಜೆ.ಚಂದ್ರಶೇಖರ್, ಟಿ.ಎಂ.ಮಂಜಣ್ಣ, ಸಿ.ಎನ್.ಮಲ್ಲಿಕಾರ್ಜುನ್ ಅನುಸೂಯ, ಟಿ.ಆರ್.ರಂಗನಾಥ್, ಟಿ.ಎಲ್.ಕಾಂತರಾಜ್, ಎನ್.ಬಿ.ಶಿವಯ್ಯ, ಪಟ್ಟಣ ಪಂಚಾಯ್ತಿಯ ಸದಸ್ಯ ಆಂಜನ್ ಕುಮಾರ್, ಮಾಜಿ ಸದಸ್ಯರಾದ ದಿವಾಕರ್, ಮೆಸ್ ಗಣೇಶ್, ಮಲ್ಲಿಕಾರ್ಜುನ್, ಪ್ರಕಾಶ್, ರಮೇಶ್ ಬಾಬು, ಬಾವಿಕೆರೆ ಶಂಕರ್, ವೇಣುಗೋಪಾಲ್ ಸೇರಿ ಹಲವರು ಅಭಿನಂದಿಸಿದರು.

ದಿ ಟೌನ್ ಬ್ಯಾಂಕ್ ನ ವ್ಯವಸ್ಥಾಪಕ ಶರತ್ ರವರು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

Share this article