ಕೊಳ್ಳೇಗಾಲದಲ್ಲಿ ವೀರಶೈವ ಮಹಾಸಭೆ ಚುನಾವಣೆಗೆ ಬಗೆಹರಿಯದ ಕಗ್ಗಂಟು

KannadaprabhaNewsNetwork |  
Published : Jul 08, 2024, 12:34 AM IST
ವೀರಶೈವ ಮಹಾಸಭೆ ಅಧ್ಯಕ್ಷ ಚುನಾವಣೆ,  ಬಗೆಹರಿಯದ  ಕಗ್ಗಂಟು.. | Kannada Prabha

ಸಾರಾಂಶ

ಕೊಳ್ಳೇಗಾಲ ತಾಲೂಕು ವೀರಶೈವ ಮಹಾಸಭೆಗೆ ಅಧ್ಯಕ್ಷ ಹಾಗೂ 20 ಮಂದಿ ನಿರ್ದೇಶಕರ ಆಯ್ಕೆ ಕಗ್ಗಂಟಾಗಿದ್ದು ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಇತ್ತೀಚೆಗೆ ವೀರಶೈವ ಮಹಾಸಭೆಯ ತಾಲೂಕು ಘಟಕಕ್ಕೆ ಚುನಾವಣೆ ಘೋಷಣೆ ಬೆನ್ನಲ್ಲೇ ಆಕಾಂಕ್ಷಿಗಳು ಸಕ್ರಿಯ ಆಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಸಾಕಷ್ಟು ಆಕಾಂಕ್ಷಿಗಳಿದ್ದು ನಿರ್ದೇಶಕರ ಸ್ಥಾನಕ್ಕೂ ಸಹ ಸಾಕಷ್ಟು ಪೈಪೋಟಿ ಇದೆ.

ಅಧ್ಯಕ್ಷರ ಅವಿರೋಧ ಆಯ್ಕೆಗೆ ಹಲವರಿಂದ ಅಪಸ್ವರ । ಅಧ್ಯಕ್ಷ ಸ್ಥಾನಕ್ಕೆ 8, ನಿರ್ದೇಶಕ ಸ್ಥಾನಕ್ಕೆ ಮಹಿಳೆ ಸೇರಿ 36 ನಾಮಪತ್ರ ಸಲ್ಲಿಕೆ

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಕೊಳ್ಳೇಗಾಲ ತಾಲೂಕು ವೀರಶೈವ ಮಹಾಸಭೆಗೆ ಅಧ್ಯಕ್ಷ ಹಾಗೂ 20 ಮಂದಿ ನಿರ್ದೇಶಕರ ಆಯ್ಕೆ ಕಗ್ಗಂಟಾಗಿದ್ದು ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಇತ್ತೀಚೆಗೆ ವೀರಶೈವ ಮಹಾಸಭೆಯ ತಾಲೂಕು ಘಟಕಕ್ಕೆ ಚುನಾವಣೆ ಘೋಷಣೆ ಬೆನ್ನಲ್ಲೇ ಆಕಾಂಕ್ಷಿಗಳು ಸಕ್ರಿಯ ಆಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಸಾಕಷ್ಟು ಆಕಾಂಕ್ಷಿಗಳಿದ್ದು ನಿರ್ದೇಶಕರ ಸ್ಥಾನಕ್ಕೂ ಸಹ ಸಾಕಷ್ಟು ಪೈಪೋಟಿ ಇದೆ. ಈ ಹಿನ್ನೆಲೆ ಅಧ್ಯಕ್ಷ ಸ್ಥಾನಕ್ಕೆ 8 ಮಂದಿ, ನಿರ್ದೇಶಕ ಸ್ಥಾನಕ್ಕೆ ಮಹಿಳೆ ಸೇರಿ 20 ಮಂದಿ ಸ್ಥಾನಕ್ಕೆ 36ಕ್ಕೂ ಅಧಿಕ ನಾಮಪತ್ರ ಸಲ್ಲಿಕೆಯಾಗಿದೆ.

ಅಧ್ಯಕ್ಷ ಸ್ಥಾನಕ್ಕೆ ದೊಡ್ಡಿಂದುವಾಡಿಯ ವೀರಭದ್ರಸ್ವಾಮಿ, ಬಸಪ್ಪನದೊಡ್ಡಿ ಬಸವರಾಜು, ಕುಂತೂರು ಬೖಂಗೇಶಕಟ್ಟೆ, ಲಿಂಗಣಾಪುರ ಬಸವರಾಜು, ತಿಮ್ಮರಾಜಿಪುರ ಪುಟ್ಟಣ್ಣ, ಶಿವಕುಮಾರಸ್ವಾಮಿ ಬಡಾವಣೆಯ ಕಿರಣ್ ಕುಮಾರ್, ನಾಗಪ್ಪನ ಬಡಾವಣೆಯ ಪುಟ್ಟಸ್ವಾಮಿ. ತಿಮ್ಮರಾಜಿಪುರ ರಾಜು ನಾಮಪತ್ರ ಸಲ್ಲಿಸಿದ್ದರು. ಅದೇ ರೀತಿಯಲ್ಲಿ ನಿರ್ದೇಶಕ ಸ್ಥಾನಕ್ಕೆ ತೇರಂಬಳ್ಳಿ ರವಿ, ಬೂದಿತಿಟ್ಟು ಶಿವಕುಮಾರ್, ಅಚ್ಗಾಳ್ ಮಹದೇವಸ್ವಾಮಿ, ತೋಟದ ಗಿರೀಶ್, ಬಾಲಸುಬ್ರಮಣ್ಯ, ಲಕ್ಕರಸನಪಾಳ್ಯ ಮಹೇಶ್‌, ಶಿವಕುಮಾರಸ್ವಾಮಿ ಬಡಾವಣೆಯ ಸೋಮಶೇಖರ್, ಮಲ್ಲಣ್ಣ, ಮಠದ ಬೀದಿ ಮನು, ಬಸವರಾಜಪ್ಪ ಸೇರಿದಂತೆ 36ಕ್ಕೂ ಅಧಿಕ ಮಂದಿ ನಾಮಪತ್ರ ಸಲ್ಲಿಸಿದ್ದು ಸೋಮವಾರ ನಾಮಪತ್ರ ವಾಪಸಾತಿಗೆ ಕೊನೆ ದಿನಾಂಕವಾಗಿದೆ.

ಅವಿರೋಧ ಆಯ್ಕೆ ನಿರ್ಧಾರಕ್ಕೆ ಅಪಸ್ವರ:

ಹನೂರಿನಲ್ಲಿ ವೀರಶೈವ ಮಹಾಸಭೆಗೆ ಅವಿರೋಧ ಆಯ್ಕೆ ಮಾಡಿದ ಹಿನ್ನೆಲೆ ಕೊಳ್ಳೇಗಾಲದಲ್ಲೂ ಸಹ ಈ ಪ್ರಕ್ರಿಯೆ ನಡೆಸಬೇಕು ಎಂಬುದನ್ನು ಮನಗಂಡ ಹಿಂದಿನ ಪದಾಧಿಕಾರಿಗಳು ಹಾಗೂ ಕೆಲ ವೀರಶೈವ ಮುಖಂಡರು, ಸಮಾಜದ ಹಿತದೖಷ್ಟಿಯಿಂದ ಅವಿರೋಧ ಆಯ್ಕೆ ಪ್ರಕ್ರಿಯೆ ನಡೆಸೋಣ ಎಂದು ನಿರ್ಣಯಿಸಿ ಸಹಿ ಮಾಡಿಸಿದ್ದರು. ಆದರೆ ಏಕಾಏಕಿ ಈಗ ಇರುವ ಆಕಾಂಕ್ಷಿಗಳಲ್ಲಿ ಯಾರನ್ನು ತಮ್ಮನ್ನೇ ಮಾಡಬೇಕು ಎಂದು ಎಲ್ಲರೂ ಪಟ್ಟು ಹಿಡಿದಿದ್ದರಿಂದ ಆಯ್ಕೆ ಪ್ರಕ್ರಿಯೆ ಕಗ್ಗಂಟಾಗಿದೆ.

ಪತ್ರ ವಾಪಸ್ಸು ಕೊಡಿ:

ಸಮಾಜದ ಒತ್ತಡಕ್ಕೆ ಮೊದಲಿಗೆ ಮಣಿದಿರುವ ರಾಜು ಮನವೊಲಿಕೆ ವೇಳೆ ಆಯ್ಕೆ ಪ್ರಕ್ರಿಯೆ ಕುರಿತು ಸಹಮತ ವ್ಯಕ್ತಪಡಿಸಿ ಪತ್ರಕ್ಕೆ ಸಹಿ ಮಾಡಿದ್ದರು. ಆದರೆ ಈಗ ಏಕಾಏಕಿ ನನಗೆ ಒತ್ತಾಯದ ಮೂಲಕ ಪತ್ರಕ್ಕೆ ಸಹಿ ಹಾಕಿಸಿದ್ದು ಅದನ್ನು ವಾಪಸ್ಸುಕೊಡಿ ಎಂದು ಮುಖಂಡರ ಬಳಿ ಒತ್ತಡ ಹೇರಿದ್ದಾರೆ. ನನ್ನ ಸಹಿಯನ್ನು ಕೆಲವರು ನಕಲು ಮಾಡಿದ್ದು ನಾಮಪತ್ರ ವಾಪಸಾತಿಗೆ ಆ ಪತ್ರವನ್ನು ಯಾರೇ ತಂದುಕೊಟ್ಟರೂ ಸ್ವೀಕರಿಸಬಾರದು ಎಂದು ಮನವಿ ಮಾಡಿ ಹಿಂಬರಹ ಪಡೆದಿದ್ದಾರೆ.

ಇನ್ನೂ 20 ಮಂದಿ ನಿರ್ದೇಶಕ ಸ್ಥಾನಗಳ ಆಯ್ಕೆ ಕಗ್ಗಂಟಾಗಿದ್ದು 2 ಸಭೆಗಳಲ್ಲಿ ಒಮ್ಮತ ಮೂಡಿಲ್ಲ, ತಿಮ್ಮರಾಜಿಪುರ ರಾಜು ಅವರ ಸಮಾಧಾನಕ್ಕೆ ಸಾಕಷ್ಟು ಯತ್ನ ನಡೆದಿದೆ ಎನ್ನಲಾಗುತ್ತಿದೆ. ಆದರೆ ರಾಜು ಇದಕ್ಕೊಪ್ಪಿಲ್ಲ ಎನ್ನಲಾಗಿದೆ. ನಾಮಪತ್ರ ಹಿಂಪಡೆಯಲು ಜು.8 ಕೊನೆ ದಿನವಾಗಿದೆ.

ಸಮಾಜದ ಹಿರಿಯರ ತೀರ್ಮಾನಕ್ಕೆ ನಾನು ಬದ್ಧವಾಗಿ ಪತ್ರಕ್ಕೆ ಸಹಿ ಹಾಕಿದ್ದೇನೆ. ಅವರು ಕೈಗೊಳ್ಳುವ ತೀರ್ಮಾನಕ್ಕೆ ನಾನು ಬದ್ಧನಿದ್ದೇನೆ, ಪುಟ್ಟಣ್ಣ ಆಯ್ಕೆಗೆ ನಾನು ಸೇರಿದಂತೆ ಪತ್ರಕ್ಕೆ ಸಹಿ ಮಾಡಿಕೊಟ್ಟ ಎಲ್ಲರೂ ಈ ನಿಟ್ಟಿನಲ್ಲಿ ಬದ್ಧರಾಗಬೇಕು, ಸಮಾಜದ ಹಿತದೖಷ್ಟಿಯಿಂದ ಸಹಕರಿಸಬೇಕು.

ಬಸಪ್ಪನದೊಡ್ಡಿ ಬಸವರಾಜು, ಅಧ್ಯಕ್ಷ ಸ್ಥಾನದ ಆಕಾಂಕ್ಷಿ.

8 ಮಂದಿ ಪೈಕಿ ಪುಟ್ಟಣ್ಣ ಅವರನ್ನು ಬಿಟ್ಟು ಯಾರೇ ಅಧ್ಯಕ್ಷರಾದರೂ ನನ್ನ ಸಹಮತ. ನನ್ನಿಂದ ಬಲವಂತವಾಗಿ ಕಮಿಟಿಯ ಮುಖಂಡರು ಸಹಿ ಪಡೆದಿದ್ದಾರೆ. ಚುನಾವಣಾಧಿಕಾರಿಗೆ ನನ್ನ ನಾಮಪತ್ರ ಪ್ರಕ್ರಿಯೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂಬುದಾಗಿ ಲಿಖಿತವಾಗಿ ಮನವಿ ನೀಡಿರುವೆ.

ರಾಜು, ಅಧ್ಯಕ್ಷ ಸ್ಥಾನದ ಆಕಾಂಕ್ಷಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ