ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದ ಕಮಲ ಬಸದಿ ಮಂದಿರದ ಆವರಣದಲ್ಲಿ ಶನಿವಾರ ಆಯೋಜಿಸಲಾದ ಭಗವಾನ ನೇಮಿನಾಥ ದಿಗಂಬರ ಐತಿಹಾಸಿಕ ಪುರಾತನ ಜಿನಮಂದಿರ ಶ್ರೀ ಧರ್ಮಚಕ್ರ ಆರಾಧನಾ ಮಹಾಮಹೋತ್ಸವದಲ್ಲಿ ಅವರು ಮಾತನಾಡಿದರು. ಕಮಲ ಬಸದಿಯು ಐತಿಹಾಸಿಕ ಸ್ಥಳವಾಗಿದ್ದು, ಜೈನ ಸಮಾಜದ ಮುಖಂಡ ಸುನೀಲ್ ಹನಮಣ್ಣವರ್ ಮನವಿ ಮೇರೆಗೆ ಕಮಲ ಬಸ್ತಿ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಯಿಂದ ಅನುದಾನ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಕಮಲ ಬಸದಿಯನ್ನು ಇನ್ನಷ್ಟು ಅಭಿವೃದ್ಧಿ ಪಡಿಸಿ ಪ್ರವಾಸಿ ಸ್ಥಳವನ್ನಾಗಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಜೈನ ಸಮುದಾಯಕ್ಕೆ ಸಂಬಂಧಿಸಿದ ರಾಜ್ಯದ ನಾಲ್ಕು ಮಠಗಳಿಗೆ ನಮ್ಮ ಇಲಾಖೆಯಿಂದ ಅನುದಾನ ನೀಡಿದ್ದೇನೆ. ಹಾಸನ, ಶಿವಮೊಗ್ಗ ಸೇರಿದಂತೆ ವಿವಿಧೆಡೆ ಮಠಗಳಿಗೆ ಅಷ್ಟೇ ಅಲ್ಲ, ಜೈನ್ ಸಮುದಾಯದ ಪ್ರೇಕ್ಷಣೀಯ ಸ್ಥಳಗಳಿಗೆ ಹೋಗುವ ಊರುಗಳಿಗೆ ಉತ್ತಮ ರಸ್ತೆ ಮಾಡಲಾಗಿದೆ. ಹಾಸನ, ಶಿವಮೊಗ್ಗ ಜಿಲ್ಲೆಯ ಸಮುದಾಯದ ಸ್ವಾಮೀಜಿಗಳು ಮನವಿ ಸಲ್ಲಿಸದಿದ್ದರೂ ಕರೆ ಮಾಡಿ ಹೇಳಿದಕ್ಕೆ ಅನುದಾನ ನೀಡಿದ್ದೇವೆ ಎಂದು ತಿಳಿಸಿದರು. ಹುಕ್ಕೇರಿ ತಾಲೂಕಿನ ಯರನಾಳ ಗ್ರಾಮದಲ್ಲಿಯೂ 2023ರ ಅವಧಿಯಲ್ಲಿ ಸಮುದಾಯಕ್ಕೆ ಬೇಕಾದ ಕೆಲಸಗಳನ್ನು ಮಾಡಿದ್ದೇವೆ. ಅಲ್ಪಸಂಖ್ಯಾತರ ಬಗ್ಗೆ ನಮ್ಮ ಸರ್ಕಾರ ವಿಶೇಷ ಕಾಳಜಿ ವಹಿಸಿದೆ. ಮುಂದೆಯೂ ಅಲ್ಪಸಂಖ್ಯಾರ ಅಭಿವೃದ್ಧಿಗೆ ನಮ್ಮ ಸರ್ಕಾರ ಆದ್ಯತೆ ನೀಡುತ್ತದೆ. ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಜೈನ್ ಸಮುದಾಯಕ್ಕೆ ತಮ್ಮದೇಯಾದ ಕೊಡುಗೆ ನೀಡಿದ್ದಾರೆ. ಬರುವ ದಿನಗಳಲ್ಲಿ ಹೆಚ್ಚಿನ ಅಭಿವೃದ್ಧಿ ಮಾಡಿ ಹೆಚ್ಚು ಅನುದಾನ ನೀಡಲಾಗುವುದು ಎಂದು ಹೇಳಿದರು.ಡಾ.ವಿನೋದ ದೊಡ್ಡಣ್ಣವರ ಮಾತನಾಡಿ, ಕಮಲ ಬಸದಿ ಸೇರಿದಂತೆ ರಾಜ್ಯದ ಜೈನ ಸಮುದಾಯದ ಜೈನರ ಅಭಿವೃದ್ಧಿಗೆ ಸಚಿವ ಸತೀಶ್ ಜಾರಕಿಹೊಳಿ ಶ್ರಮಿಸಿದ್ದಾರೆ. ಮೈಸೂರು ಭಾಗದ ಜೈನ ಸಮುದಾಯಕ್ಕೆ ₹ 10 ಕೋಟಿ ನೀಡಿದ್ದಾರೆ. 40 ವರ್ಷದ ಅವಧಿಯಲ್ಲಿ ಜೈನ ಸಮುದಾಯದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದಾರೆ ಎಂದು ತಿಳಿಸಿದರು.
ಇದಕ್ಕೂ ಮೊದಲು ಸಚಿವ ಸತೀಶ್ ಜಾರಕಿಹೊಳಿ ಅವರು ಕಮಲ ಬಸದಿಗೆ ಭೇಟಿ ನೀಡಿ 1008 ಭಗವಾನ ನೇಮಿನಾಥ ಭಗವಾನರಿಗೆ ಪೂಜೆ ಸಲ್ಲಿಸಿದರು. ನಂತರ ಐತಿಹಾಸಿಕ ಸ್ಥಳವಾದ ಕಮಲ ಬಸದಿಯನ್ನು ವೀಕ್ಷಿಸಿದರು