ಹಿಂದೂಗಳು ಒಗ್ಗಟ್ಟಾಗಿ ಮುಸ್ಲಿಂರನ್ನು ಆರ್ಥಿಕವಾಗಿ ಬಲಹೀನರನ್ನಾಗಿ ಮಾಡಬೇಕು. ವಿಜಯಪುರದಲ್ಲಿ ಹಿಂದೂಗಳ ವ್ಯಾಪಾರಕ್ಕೆ ವಿಶೇಷ ವ್ಯವಸ್ಥೆ ಮಾಡಿದ್ದರಿಂದ ನಮ್ಮ ಜನ ಆರ್ಥಿಕವಾಗಿ ಸ್ವಾವಲಂಬಿಯಾಗುತ್ತಿದ್ದಾರೆ ಎಂದು ಶಾಸಕ ಬಸನಗೌಡಪಾಟೀಲ ಯತ್ನಾಳ ಹೇಳಿದರು.
ಹುಬ್ಬಳ್ಳಿ:
ಎಲ್ಲಿಯ ವರೆಗೆ ಹಿಂದೂಗಳು ಒಗ್ಗಟ್ಟಾಗುವುದಿಲ್ಲವೋ ಅಲ್ಲಿಯ ವರೆಗೆ ನಮಗೆ ರಕ್ಷಣೆ ಸಿಗುವುದಿಲ್ಲ. ಹಿಂದೂಗಳ ಜಾಗೃತಿ, ಒಗ್ಗಟ್ಟಿಗಾಗಿ ಸಂಘಟನೆಗಳು ಕೆಲಸ ಮಾಡಬೇಕು ಎಂದು ಶಾಸಕ ಬಸನಗೌಡಪಾಟೀಲ ಯತ್ನಾಳ ಹೇಳಿದರು.
ನಗರದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಹಿಂದೂ ಶಕ್ತಿ ಸೇನಾ ಸಂಘಟನೆ ಉದ್ಘಾಟಿಸಿ ಮಾತನಾಡಿದ ಅವರು, 2028ರಲ್ಲಿ ಕರ್ನಾಟಕದಲ್ಲಿ ರಾಷ್ಟ್ರಧ್ವಜ ಜತೆಗೆ ಭಗವಾಧ್ವಜ ಹಾರಾಡುವಂತಾಗಬೇಕು. ಅದಕ್ಕಾಗಿ ಹಿಂದೂಗಳೆಲ್ಲರೂ ಒಂದಾಗಬೇಕೆಂದರು.
ಹಿಂದೂಗಳು ಒಗ್ಗಟ್ಟಾಗಿ ಮುಸ್ಲಿಂರನ್ನು ಆರ್ಥಿಕವಾಗಿ ಬಲಹೀನರನ್ನಾಗಿ ಮಾಡಬೇಕು. ವಿಜಯಪುರದಲ್ಲಿ ಹಿಂದೂಗಳ ವ್ಯಾಪಾರಕ್ಕೆ ವಿಶೇಷ ವ್ಯವಸ್ಥೆ ಮಾಡಿದ್ದರಿಂದ ನಮ್ಮ ಜನ ಆರ್ಥಿಕವಾಗಿ ಸ್ವಾವಲಂಬಿಯಾಗುತ್ತಿದ್ದಾರೆ. ಇದೇ ರೀತಿ ಹಿಂದೂಗಳ ಬಳಿಯೇ ವ್ಯಾಪಾರ ಮಾಡುವಂತಹ ವ್ಯವಸ್ಥೆ ರೂಪಿಸಿಕೊಳ್ಳಬೇಕು ಎಂದರು.
ಮುಸ್ಲಿಂರ ರೇಷನ್ ಕಾರ್ಡ್, ವೋಟಿಂಗ್ ಬಂದ್ ಮಾಡಿದರೆ ಎಲ್ಲವೂ ಸರಿಯಾಗುತ್ತದೆ ಎಂದ ಅವರು, ಮುಂಬರುವ ದಿನಗಳಲ್ಲಿ ಎಸ್‌ಐಆರ್ ನಡೆಯಲಿದ್ದು, ಹಿಂದೂಗಳ ಹೆಸರು ಬಿಟ್ಟು ಹೋಗದಂತೆ ನೋಡಿಕೊಳ್ಳಬೇಕು. ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿಯರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕೆಂದರು.
ಪ್ರಥಮ ಸ್ವಾತಂತ್ರ್ಯ ಕುರಿತು ಸಾವರ್ಕರ್ ಬರೆದ ಪುಸ್ತಕವೇ 1947ರ ಸ್ವಾಂತ್ರ್ಯ ಹೋರಾಟಕ್ಕೆ ಪ್ರೇರಣೆಯಾಗಿತ್ತು. ಚರಕ, ಗುಲಾಬಿ ಹೂವಿನಿಂದ ಸಿಕ್ಕಿಲ್ಲ. ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು ಅವರನ್ನು ಅವರಿದ್ದ ಮನೆಗೆ ಕೀಲಿ ಹಾಕಿ ಬಂಧನ (ಗೃಹ ಬಂಧನ) ಮಾಡುತ್ತಿದ್ದರೆ ಹೊರತು ಜೈಲಿಗೆ ಹಾಕಿರಲಿಲ್ಲ. ಮನೆಯಲ್ಲೇ ಎಲ್ಲ ಸೌಕರ್ಯ ಕೊಡುತ್ತಿದ್ದರು. ಆದರೆ, ಸಾವರ್ಕರ್ ಅವರಿಗೆ ಕಠಿಣ ಶಿಕ್ಷೆ ವಿಧಿಸಲಾಗಿತ್ತು .ಎಲ್ಲವನ್ನೂ ಎದುರಿಸಿ ಸ್ವಾತಂತ್ರ್ಯಕ್ಕೆ ಹೋರಾಡಿದರು ಎಂದು ಸ್ಮರಿಸಿದ ಅವರು, ನೆಹರು ಮತ್ತು ಗಾಂಧೀಜಿ ಬಗ್ಗೆ ಡಾ. ಬಾಬಾ ಸಾಹೆಬ್ ಅಂಬೇಡ್ಕರ್ ಸಾಕಷ್ಟು ವಿಚಾರಗಳನ್ನು ತಿಳಿಸಿದ್ದಾರೆ ಎಂದು ಯತ್ನಾಳ ಹೇಳಿದರು.
ಶ್ರೀರಾಮಸೇನೆ ರಾಷ್ಟ್ರೀಯ ಸಂಚಾಲಕ ಪ್ರಮೋದ ಮುತಾಲಿಕ್ ಮಾತನಾಡಿ, ದೇಶದಲ್ಲಿ ಕಾಂಗ್ರೆಸ್ ನಾಶವಾದರೆ ಮಾತ್ರ ನೆಮ್ಮದಿ ಇರುತ್ತದೆ. ಆ ಪಕ್ಷದಿಂದ ತುಷ್ಟೀಕರಣದ ಕಾರಣಕ್ಕೆ ಹಿಂದೂಗಳ ಮೆರವಣಿಗೆ ಮೇಲೆ ಕಲ್ಲೆ ಎಸೆಯುವಂತಹ ಘಟನೆಗಳನ್ನು ನಡೆಯುತ್ತಿವೆ. ಅಂತಹವನ್ನು ಹದ್ದು ಬಸ್ತಿನಲ್ಲಿಡಬೇಕಿದೆ. ಬಿಜೆಪಿಯವರು ಕೂಡ ನಾಟಕ ಮಾಡಿದರೆ ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಕಾರ್ಯಕ್ರಮದಲ್ಲಿ ಹಿಂದೂ ಶಕ್ತಿ ಸೇನಾ ಸಂಘಟನೆ ವೆಬ್‌ಸೈಟ್ ಲೋಕಾರ್ಪಣೆ ಮಾಡಲಾಯಿತು. ಸಂಘಟನೆ ಅಧ್ಯಕ್ಷ ಈರಣ್ಣ ಶಿರಗುಪ್ಪಿ, ಸಂಸ್ಥಾಪಕ ಪ್ರಭುಸ್ವಾಮಿ ಹಾಗೂ ಇತರರು ಇದ್ದರು,
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.