ಕನ್ನಡ ಪ್ರಭ ವಾರ್ತೆ ಮುಧೋಳ
ಈ ಕುರಿತು ಮಾತನಾಡಿದ ಅವರು, ಮತದಾರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ-2026 ಕಾರ್ಯಕ್ರಮದ ಅಂಗವಾಗಿ ಜೂ.4ರಂದು ಮುಧೋಳ ವಿಧಾನಸಭಾ ಮತ ಕ್ಷೇತ್ರದಲ್ಲಿ ವಿವಿಧ ಹಂತಗಳ ತರಬೇತಿ ಹಾಗೂ ಸಭೆಗಳನ್ನು ಯಶಸ್ವಿಯಾಗಿ ನಡೆಸಲಾಯಿತು.
ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ-2026 ಕಾರ್ಯವನ್ನು ಸಮರ್ಪಕವಾಗಿ ಹಾಗೂ ಪಾರದರ್ಶಕವಾಗಿ ಜಾರಿಗೊಳಿಸುವ ಉದ್ದೇಶದಿಂದ ಬಿ.ಎಲ್.ಓ, ಬಿ.ಎಲ್.ಎ, ಬಿಎಲ್ಓ ಸುಪ್ರಿವೈರ್ಸ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ವಿಶೇಷ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಸದರಿ ತರಬೇತಿಯಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ, ಹೊಸ ಮತದಾರರ ಸೇರ್ಪಡೆ, ಹೆಸರು ತಿದ್ದುಪಡಿ, ವಿಳಾಸ ಬದಲಾವಣೆ, ಮೃತ ಹಾಗೂ ಸ್ಥಳಾಂತರಗೊಂಡ ಮತದಾರರ ವಿವರಗಳ ಪರಿಶೀಲನೆ ಸೇರಿ ವಿವಿಧ ಚುನಾವಣಾ ಕಾರ್ಯಗಳ ಕುರಿತು ವಿವರವಾದ ಮಾಹಿತಿ ನೀಡಲಾಯಿತು ಎಂದರು.ಮತದಾರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ-2026ರ ಭಾಗವಾಗಿ ಬಿಎಲ್ಓ ಗಳು ಮನೆ ಮನೆಗೆ ಭೇಟಿ ನೀಡಿ ಇನ್ಯೂಮೆರಿಶನ್ ಕಾರ್ಯ ಕೈಗೊಳ್ಳಲಿದ್ದು, ಮತದಾರರಿಗೆ ಅಗತ್ಯ ನಮೂನೆಗಳ ಫಾರ್ಮ್ಸ್ ವಿತರಸಲಿದ್ದಾರೆ. ಯಾವುದೇ ಮತದಾರರು ಮನೆಗೆ ಲಭ್ಯವಾಗದ ಸಂದರ್ಭದಲ್ಲಿ ಬಿಎಲ್ಓಗಳು ಕನಿಷ್ಠ ಮೂರು ಬಾರಿ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಣೆ ಕಾರ್ಯ ನಡೆಸಲಿದ್ದಾರೆ ಎಂದು ತಿಳಿಸಲಾಯಿತು.ಅದೇ ರೀತಿ ಗುರುವಾರ ತಹಸೀಲ್ದಾರ್ ಕಾರ್ಯಾಲಯದಲ್ಲಿ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ನಡೆಸಿ ಸವಿವರವಾಗಿ ಎಸ್ಐಆರ್ ಕುರಿತು ತಿಳಿಸಲಾಯಿತು ಹಾಗೂ ಮತದಾರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ-2026 ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡುವಂತೆ ಕೋರಲಾಯಿತು. ಸಭೆಯಲ್ಲಿ ಚುನಾವಣಾ ಆಯೋಗದ ನಿರ್ದೇಶನಗಳಂತೆ ಪಾರದರ್ಶಕ ಹಾಗೂ ನಿಖರ ಮತದಾರರ ಪಟ್ಟಿ ಸಿದ್ಧಪಡಿಸುವ ಕುರಿತು ಚರ್ಚಿಸಲಾಯಿತು. ಗ್ರಾಪಂ ಮಟ್ಟದಲ್ಲಿ ಕಾರ್ಯ ಚುರುಕುಗೊಳಿಸುವ ನಿಟ್ಟಿನಲ್ಲಿ ಪ್ರತಿ ಗ್ರಾಪಂಗೆ ತಾಲೂಕು ಮಟ್ಟದ ಅಧಿಕಾರಿಯನ್ನು ಗ್ರಾಪಂ ನೋಡಲ್ ಅಧಿಕಾರಿಯಾಗಿ ಈಗಾಗಲೇ ನೇಮಕ ಮಾಡಿ ಅಗತ್ಯ ಮಾರ್ಗದರ್ಶನ ಹಾಗೂ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಯಿತು. ಮುಧೋಳ ಸರ್ಕಲ್ ಪ್ರಕಾಶ ಕುಂದರಗಿ, ತಲಾಠಿ ಬಸವರಾಜ ಕಂದಗಲ್ ಇದ್ದರು.ಮತದಾರರ ಜಾಗೃತಿ ಹಾಗೂ ನೋಂದಣಿ ಕಾರ್ಯವನ್ನು ಗ್ರಾಮ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಕೈಗೊಳ್ಳಲು ಸೂಚಿಸಲಾಯಿತು. ಸಾರ್ವಜನಿಕರು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಎಸ್ಐಆರ್ ಕುರಿತು ಯಾವುದೇ ರೀತಿಯ ಆತಂಕ ಇಟ್ಟುಕೊಳ್ಳುವ ಅಗತ್ಯವಿಲ್ಲ. ಈ ಪ್ರಕ್ರಿಯೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಗೊಂದಲ ಅಥವಾ ಸಂದೇಹಗಳಿದ್ದಲ್ಲಿ ತಕ್ಷಣವೇ ತಮ್ಮ ವ್ಯಾಪ್ತಿಯ ಬೂತ್ ಮಟ್ಟದ ಅಧಿಕಾರಿಗಳನ್ನು ಬಿಎಲ್ಓ ಗಳನ್ನು ಸಂಪರ್ಕಿಸಬಹುದು ಅಥವಾ ನಮ್ಮ ತಹಸೀಲ್ದಾರ್ ಕಾರ್ಯಾಲಯದ ಸಹಾಯವಾಣಿ ಸಂಖ್ಯೆ: 08350-280051 ಗೆ ಕರೆ ಮಾಡುವ ಮೂಲಕ ತಮ್ಮ ಸಂದೇಹಗಳನ್ನು ನಿವಾರಿಸಿಕೊಳ್ಳಬಹುದಾಗಿದೆ. ಒಟ್ಟಿನಲ್ಲಿ ನಾವೆಲ್ಲರೂ ಕೈಜೋಡಿಸಿ ಈ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಎಸ್ಐಆರ್ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸಬೇಕಿದೆ.-ಡಾ.ಚಿಕ್ಕಪ್ಪ ನಾಯಕ,