ಕನ್ನಡಪ್ರಭ ವಾತೆ೯ ಬೀಳಗಿ
ಮಂಗಳವಾರ ಬೀಳಗಿ ಬಸ್ ನಿಲ್ದಾಣದಲ್ಲಿ ಇರುವಂತಹ ಪ್ರಯಾಣಿಕರಿಗೆ ಯುಪಿಐ ಕುರಿತು ಮಾಹಿತಿ ನೀಡಿ ಮಾತನಾಡಿದ ಅವರು, ಪ್ರಯಾಣಿಕರಿಗೆ ಮತ್ತು ನಿರ್ವಾಹಕರಿಗೆ ಚಿಲ್ಲರ ಸಮಸ್ಯೆಯಿಂದ ಪರಿಹಾರ ಒದಗಿಸಲು ಈ ಸೌಲಭ್ಯ ಪ್ರಾರಂಭ ಮಾಡಿದ್ದೇವೆ. ಇದರಿಂದ ಚಿಲ್ಲರೇ ಸಮಸ್ಯೆಯ ಜೊತೆಗೆ ಸಮಯ ಉಳಿತಾಯವಾಗಲಿದೆ ಎಂದರು.
ಬಾಗಲಕೋಟೆ ವಿಭಾಗೀಯ ಸಾರಿಗೆ ಅಧಿಕಾರಿ ಪಿ.ವಿ. ಮೇತ್ರಿ ಮಾತನಾಡಿ, ಈಗಾಗಲೇ ವಾ.ಕ.ರಾ. ಸಾ.ಸಂಸ್ಥೆಯ 13 ಘಟಕಗಳಲ್ಲಿ ಈ ಸೌಲಭ್ಯವನ್ನು ಪ್ರಾರಂಭಿಸಲಾಗಿದೆ. ಇಲ್ಲಿಯವರೆಗೆ ₹237 ಕೋಟಿ ಮೊತ್ತ ಜಮಾ ಆಗಿದ್ದು ₹1.30 ಕೋಟಿ ವಹಿವಾಟುಗಳಾಗಿರುತ್ತವೆ ಎಂದರು.ಸಹಾಯಕ ಅಂಕಿ ಸಂಖ್ಯಾಧಿಕಾರಿ ಸುನೀತಾ ಜೋಶಿ, ಬೀಳಗಿ ಘಟಕ ವ್ಯವಸ್ಥಾಪಕ ಆರ್.ಸಿ. ಖೇಡದ , ಜಮಖಂಡಿ ವಿಭಾಗದ ವ್ಯವಸ್ಥಾಪಕ ಎಸ್.ಬಿ.ಗಸ್ತಿ, ಗುಳೇದಗುಡ್ಡ ವ್ಯವಸ್ಥಾಪಕ ವಿದ್ಯಾ ನಾಯಕ, ಬೀಳಗಿ ಘಟಕದ ಟಿಐ ಗಿರೀಶ ಅರಕೇರಿ, ಎಟಿಐ ಸುರೇಶ ಚವ್ಹಾಣ, ನಿವಾ೯ಹಕ ಪುಟ್ಟು ಯಾಳವರಮಠ, ರಾಜು ಹಾದಿಮನಿ ಹಾಗೂ ಬಾಗಲಕೋಟೆ ವಿಭಾಗದ ಮೇಲ್ವಿಚಾರಕರು ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.