- ಪ್ರಾಯೋಗಿಕ ಪರೀಕ್ಷೆ ಸೆಕ್ಸಸ್
- ಯುಪಿಐ ಜಾರಿಗೊಳಿಸಿದ ಮೊದಲ ನಿಗಮವಿದುಶಿವಾನಂದ ಗೊಂಬಿ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿಹುಬ್ಬಳ್ಳಿ ಗ್ರಾಮಾಂತರ ವಿಭಾಗದ ಬಸ್‌ಗಳಲ್ಲಿ ಯುಪಿಐ ವ್ಯವಸ್ಥೆ ಜಾರಿಗೊಳಿಸಿ ಯಶಸ್ವಿಯಾಗಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹೊಸ ವರ್ಷದ ಪ್ರಾರಂಭದಲ್ಲೇ ನಿಗಮದ ಎಲ್ಲ ವಿಭಾಗಗಳಲ್ಲೂ ಅದನ್ನು ಅನುಷ್ಠಾನಕ್ಕೆ ತರಲು ಮುಂದಾಗಿದೆ. ಈ ಮೂಲಕ ಯುಪಿಐ ವ್ಯವಸ್ಥೆ ಜಾರಿಗೊಳಿಸಿದ ರಾಜ್ಯದ ಮೊದಲ ನಿಗಮವಾಗಲಿದೆ.
ಇಡೀ ನಿಗಮ:
ಈ ಕೆಲಸವೆಲ್ಲ ಜನವರಿ ಎರಡನೆಯ ವಾರದೊಳಗೆ ಪೂರ್ಣವಾಗಲಿದೆ. ಆ ಬಳಿಕ ಎಲ್ಲ ಬಸ್‌ಗಳಲ್ಲಿ ಯುಪಿಐ ಜಾರಿಗೊಳಿಸಲಾಗುವುದು. ಈ ಸಂಬಂಧ ಪೋನ್ ಪೇ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರಿಂದ ಚಿಲ್ಲರೆಗಾಗಿ ನಿರ್ವಾಹಕರು- ಪ್ರಯಾಣಿಕರ ಮಧ್ಯೆ ನಡೆಯುವ ವಾಗ್ವಾದ, ಕಿರಿಕಿರಿಗಳೆಲ್ಲ ತಪ್ಪಲಿದೆ. ನೇರವಾಗಿ ಖಾತೆಗೆ ಜಮೆಯಾಗುವುದರಿಂದ ಸಮಸ್ಯೆಯಾಗಲ್ಲ ಎಂಬುದು ಇಲಾಖೆ ಅಧಿಕಾರಿಗಳ ಅಂಬೋಣ.
ರಾಜ್ಯದ ಮೊದಲ ನಿಗಮ:ಈ ವ್ಯವಸ್ಥೆ ಜಾರಿಯಾದರೆ ಬಸ್‌ಗಳಲ್ಲೇ ಯುಪಿಐ ಮೂಲಕ ಪೇಮೆಂಟ್ ಮಾಡುವ ವ್ಯವಸ್ಥೆ ಮಾಡಿರುವ ಮೊದಲ ನಿಗಮವಾಗಿ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಹೊರಹೊಮ್ಮಲಿದೆ.
ಜನವರಿಯೊಳಗೆ ನಿಗಮದ ಎಲ್ಲ 4830 ಬಸ್‌ಗಳಲ್ಲೂ ಯುಪಿಐ ಪೇಮೆಂಟ್ ಜಾರಿಗೊಳಿಸಲಾಗುವುದು. ಇದಕ್ಕೆ ಸಂಬಂಧಪಟ್ಟಂತೆ ಪ್ರಕ್ರಿಯೆಗಳೆಲ್ಲ ಅಂತಿಮದಲ್ಲಿವೆ. ಯುಪಿಐ ಪೇಮೆಂಟ್ ಮೂಲಕ ಟಿಕೆಟ್ ನೀಡುವ ವ್ಯವಸ್ಥೆ ಜಾರಿಗೊಳಿಸುತ್ತಿರುವ ರಾಜ್ಯದ ಮೊದಲ ನಿಗಮ ನಮ್ಮದು ಎಂದು ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಎಸ್. ಭರತ್ ತಿಳಿಸಿದ್ದಾರೆ.
ಯುಪಿಐ ಪೇಮೆಂಟ್ ಪಡೆದುಕೊಳ್ಳುವ ಕುರಿತು ನಿರ್ವಾಹಕರಿಗೆ ಅಗತ್ಯ ತರಬೇತಿ ನೀಡಲಾಗುತ್ತಿದೆ. ಯಾವುದೇ ಬಗೆಯ ಗೊಂದಲ ಆಗದಂತೆ ನಿರ್ವಹಿಸಲಾಗುವುದು. ಪ್ರತಿ ನಿರ್ವಾಹಕರಿಗೂ ಪ್ರತ್ಯೇಕ ಕ್ಯೂ ಆರ್ ಕೋಡ್ ರಚನೆ ಮಾಡಲಾಗುತ್ತಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಂಸ್ಥೆ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಎಚ್.ರಾಮನಗೌಡರ ತಿಳಿಸಿದ್ದಾರೆ,