ಧರ್ಮಪಾಲನೆಯಿಂದ ಬದುಕಿನಲ್ಲಿ ಉನ್ನತಿ

KannadaprabhaNewsNetwork |  
Published : Jun 13, 2025, 04:21 AM IST
ಗುಬ್ಬಿ ಪಟ್ಟಣದ ತೊರೆಮಠದಲ್ಲಿ ಶ್ರೀ ಚಂದ್ರಶೇಖರದೇಶಿ ಕೇಂದ್ರ ಸ್ವಾಮಿಗಳ ನಿರಂಜನ ನೀರಾಭಾರ ಚರಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಶ್ರೀ ಸಿದ್ದಲಿಂಗಸ್ವಾಮೀಜಿ ಪಾದಪೂಜೆ ಪಾದಪೂಜೆ ನೆರವೇರಿಸಿದ ಸ್ವಾಮೀಜಿಯವರು  | Kannada Prabha

ಸಾರಾಂಶ

ಮಠಗಳು ಮತ್ತು ದೇವಸ್ಥಾನಗಳ ಅಭಿವೃದ್ಧಿಯಿಂದ ಸಮುದಾಯದಲ್ಲಿ ಶಾಂತಿ ಸೌಹಾರ್ದತೆ ಮತ್ತು ಐಕ್ಯತೆ ನೆಲೆಸಲಿದೆ ಎಂದು ಸಿದ್ದಗಂಗಾ ಮಠ ಅಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿಗಳು ಹೇಳಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ಮಠಗಳು ಮತ್ತು ದೇವಸ್ಥಾನಗಳ ಅಭಿವೃದ್ಧಿಯಿಂದ ಸಮುದಾಯದಲ್ಲಿ ಶಾಂತಿ ಸೌಹಾರ್ದತೆ ಮತ್ತು ಐಕ್ಯತೆ ನೆಲೆಸಲಿದೆ ಎಂದು ಸಿದ್ದಗಂಗಾ ಮಠ ಅಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿಗಳು ಹೇಳಿದರು.ಪಟ್ಟಣದ ತೊರೆಮಠದಲ್ಲಿ ಶ್ರೀ ಚಂದ್ರಶೇಖರದೇಶಿ ಕೇಂದ್ರ ಸ್ವಾಮಿಗಳ ನಿರಂಜನ ನೀರಾಭಾರ ಚರಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮದಲ್ಲಿ ಪಾದಪೂಜೆ ಸ್ವೀಕರಿಸಿ ಮಾತನಾಡಿದರು.

ಎಲ್ಲರೂ ಶಿವಶರಣರ ಆದರ್ಶಗಳನ್ನು ಅನುಸರಿಸಿ ಧರ್ಮ ಪರಿಪಾಲನೆ ಮೂಲಕ ಸನ್ಮಾರ್ಗದಲ್ಲಿ ಸಾಗಿದರೆ ಬದುಕಿನಲ್ಲಿ ಉನ್ನತಿ ಕಾಣಬಹುದು. ಮನುಷ್ಯರು ಮಾನವತ್ವದ ಸದ್ಗುಣವನ್ನು ಮೈಗೂಡಿಸಿಕೊಂಡು ಮನಸ್ಸಿನಲ್ಲಿ ಆಧ್ಯಾತ್ಮಿಕತೆ ಬೆಳೆಸಿಕೊಳ್ಳುವುದು ಅವಶ್ಯಕ. ಮನುಷ್ಯ ಆಹಾರ, ಆರೋಗ್ಯ, ಆಧ್ಯಾತ್ಮಕ್ಕೆ ಹೆಚ್ಚು ಒತ್ತು ಕೊಡಬೇಕು. ಮುಖ್ಯವಾಗಿ ಸೇವಿಸಿದ ಆಹಾರ, ಆರೋಗ್ಯಎರಡೂ ಚೆನ್ನಾಗಿರಬೇಕಾದರೆ ಮನಸ್ಸಿನಲ್ಲಿ ಆಧ್ಯಾತ್ಮಿಕತೆ ಮೂಡಬೇಕು ಎಂದರು.

ಕಾರ್ಯಕ್ರಮದಲ್ಲಿ ಚಿಕ್ಕತೊಟ್ಲುಕೆರೆ ಶ್ರೀ ಆಟವಿ ಶಿವಲಿಂಗ ಸ್ವಾಮೀಜಿ, ಜಲ ಶಕ್ತಿ ಮತ್ತು ರೈಲ್ವೆ ರಾಜ್ಯ ಸಚಿವರಾದ ವಿ .ಸೋಮಣ್ಣ ,ಮಾಜಿ ಸಂಸದ ಬಸವರಾಜು ಹಾಗೂ 18 ಕೋಮುವಿನ ಮುಖಂಡರುಗಳು , ಸ್ವಾಮೀಜಿಗಳು ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ