ಉಪ್ಪಾರ ಜನಜಾಗೃತಿಗಾಗಿ ಜನಕಲ್ಯಾಣ ಯಾತ್ರೆ

KannadaprabhaNewsNetwork |  
Published : Dec 20, 2023, 01:15 AM IST
ಶ್ರೀ ಭಗೀರಥ ಭಾರತ ಜನಕಲ್ಯಾಣ ರಥಯಾತ್ರೆ ಪುರಸಭೆ ಮುಂಭಾಗಕ್ಕೆ ಆಗಮಿಸುತ್ತಿದ್ದಂತೆ ಸ್ವಾಮೀಜಿಗಳಿಗೆ ಮುಖ್ಯಾಧಿಕಾರಿ ವಿ.ಡಿ.ಶಾಂತಲ ಹಾಗೂ ಸಿಬ್ಬಂದಿಗಳೆಲ್ಲ ಪುಷ್ಪಾರ್ಚನೆ ಮಾಡಿ, ಶ್ರೀ ಗಳಿಂದ ಆಶೀರ್ವಾದ ಪಡೆದು ರಥಯಾತ್ರೆಗೆ ಶುಭಕೋರಿದರು. | Kannada Prabha

ಸಾರಾಂಶ

ದೇಶಾದ್ಯಂತ ಸುಮಾರು 11ಕೋಟಿಗೂ ಹೆಚ್ಚು ಜನರಿರುವ ಉಪ್ಪಾರರು ವಿವಿಧ ರಾಜ್ಯಗಳಲ್ಲಿ ಪ್ರಾದೇಶಿಕ ಭಾಷೆಯಲ್ಲಿ ವಿವಿಧ ಹೆಸರುಗಳಿಂದ ಕರೆಯಲ್ಪಡುತ್ತಾರೆ. ಜನಜಾಗೃತಿಗೊಳಿಸಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಸಮಾಜ ಮುನ್ನೆಲೆಗೆ ತರುವುದು ಯಾತ್ರೆ ಉದ್ದೇಶ ಎಂದರು.

ಕನ್ನಡಪ್ರಭವಾರ್ತೆ ಬೀರೂರುಉಪ್ಪಾರ ಸಮಾಜ ಗುರುಗಳಾದ ಡಾ.ಪುರುಷೋತ್ತಮಾನಂದಪುರಿ ಸ್ವಾಮೀಜಿ ಕೈಗೊಂಡಿರುವ ಶ್ರೀ ಭಗೀರಥ ಭಾರತ ಜನಕಲ್ಯಾಣ ರಥಯಾತ್ರೆಯು ತರೀಕೆರೆಯಿಂದ ಮಂಗಳವಾರ ಬೀರೂರು ಪಟ್ಟಣದ ಕೆಇಬಿ ಮುಂಭಾಗದ ವಿವೇಕಾನಂದ ಪಾರ್ಕ್‌ ಮುಂಭಾಗಕ್ಕೆ ಆಗಮಿಸಿದಾಗ ಮಾಜಿ ಶಾಸಕ ವೈ.ಎಸ್.ವಿ.ದತ್ತ ಮತ್ತು ಉಪ್ಪಾರ ಸಮಾಜದ ಮುಖಂಡರು ಶ್ರೀ ಆಂಜನೇಯಸ್ವಾಮಿಗೆ ಪೂಜೆ ಸಲ್ಲಿಸಿ ರಥಯಾತ್ರೆಗೆ ಚಾಲನೆ ನೀಡಿದರು.

ಶ್ರೀಪುರುಷೋತ್ತಮಾನಂದ ಪುರಿ ಶ್ರೀಗಳು ಮಾತನಾಡಿ, ದೇಶಾದ್ಯಂತ ಸುಮಾರು 11ಕೋಟಿಗೂ ಹೆಚ್ಚು ಜನರಿರುವ ಉಪ್ಪಾರರು ವಿವಿಧ ರಾಜ್ಯಗಳಲ್ಲಿ ಪ್ರಾದೇಶಿಕ ಭಾಷೆಯಲ್ಲಿ ವಿವಿಧ ಹೆಸರುಗಳಿಂದ ಕರೆಯಲ್ಪಡುತ್ತಾರೆ. ಜನಜಾಗೃತಿಗೊಳಿಸಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಸಮಾಜ ಮುನ್ನೆಲೆಗೆ ತರುವುದು ಯಾತ್ರೆ ಉದ್ದೇಶ ಎಂದರು.

ಮೆರವಣಿಗೆ ಪ್ರಾರಂಭವಾದ ನಂತರ ಕೇರಳದ ಚಂಡಿವಾದ್ಯ ಹಾಗೂ ವೀರಗಾಸೆ ನೃತ್ಯ ತಂಡದವರು ಮೆರವಣಿಗೆಗೆ ಮೆರುಗು ನೀಡಿದವು,

ರಥಯಾತ್ರೆ ಕಡೂರು ಕಡೆ ಸಾಗುವ ವೇಳೆ ಪುರಸಭೆ ಮುಂಭಾಗಕ್ಕೆ ಆಗಮಿಸುತ್ತಿದ್ದಂತೆ ಸ್ವಾಮೀಜಿಗಳಿಗೆ ಮುಖ್ಯಾಧಿಕಾರಿ ವಿ.ಡಿ.ಶಾಂತಲ ಹಾಗೂ ಸಿಬ್ಬಂದಿ ಪುಷ್ಪಾರ್ಚನೆ ಮಾಡಿ, ಶ್ರೀಗಳಿಂದ ಆಶೀರ್ವಾದ ಪಡೆದು ರಥಯಾತ್ರೆಗೆ ಶುಭಕೋರಿದರು. ಈ ವೇಳೆ ಉಪ್ಪಾರ ಸಮಾಜದ ರಾಜ್ಯ ಯುವಘಟಕದ ಉಪಾಧ್ಯಕ್ಷ ಮಧು ಬಾವಿಮನೆ, ಉಪ್ಪಾರ ಸಮಾಜದ ಬೀರೂರು ನಗರ ಅಧ್ಯಕ್ಷ ಮಂಜುನಾಥ್, ಪುರಸಭೆ ಮಾಜಿ ಅಧ್ಯಕ್ಷ ಪ್ರಕಾಶ್, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಬಿ.ಆರ್. ಮೋಹನ್ ಕುಮಾರ್, ವನರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶ್ರೀನಿವಾಸ್, ಪುರಸಭೆ ಮಾಜಿ ಅಧ್ಯಕ್ಷ ಎಂ.ಪಿ. ಸುದರ್ಶನ್, ಸದಸ್ಯರಾದ ಎಲೆ ರವಿಕುಮಾರ್, ಲಕ್ಷ್ಮಣ್, ನಾಗರಾಜ್, ರುದ್ರೇಶ್, ವನಿತಾ ಮಧು ಬಾವಿಮನೆ, ಹರಿಪ್ರಸಾದ್, ಪತ್ರಕರ್ತ ಬಾಲಣ್ಣ, ಪುರಸಭೆ ಸಿಬ್ಬಂದಿ ವೈ.ಎಂ. ಲಕ್ಷ್ಮಣ್, ವ್ಯವಸ್ಥಾಪಕ ಪ್ರಕಾಶ್, ದೀಪಕ್, ಗಿರಿರಾಜ್, ಶಿಲ್ಪಾ, ಜಯಮ್ಮ, ವೀಣಾ, ಕುಮಾರಿ ಇದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ